ಸಾಸ್ತಾನ ಮೀನು ಮಾರುಕಟ್ಟೆ ಗೊಂದಲದ ನಡುವೆ ಕಾರ್ಯಾರಂಭ; ಸ್ಥಳಾವಕಾಶಕ್ಕಾಗಿ ಕಿತ್ತಾಟ
Team Udayavani, May 11, 2020, 5:35 AM IST
ಕೋಟ: ಕಾಮಗಾರಿ ಪೂರ್ಣಗೊಂಡು ಹಲವು ಸಮಯ ಕಳೆದರೂ ಆಡಳಿತ ವ್ಯವಸ್ಥೆ ಹಾಗೂ ಮೀನುಗಾರ ಮಹಿಳೆಯರ ನಡುವಿನ ಹಗ್ಗ-ಜಗ್ಗಾಟದಿಂದ ಮುಂದೂಡಲ್ಪಟ್ಟಿದ್ದ ಸಾಸ್ತಾನ ಮೀನು ಮಾರುಕಟ್ಟೆಯ ಉದ್ಘಾಟನೆ ರವಿವಾರ ದಿಢೀರ್ ಆಗಿ ನಡೆಯಿತು ಹಾಗೂ ಒಂದಷ್ಟು ಗದ್ದಲ, ಗೊಂದಲಗಳಿಗೆ ಕಾರಣವಾಯಿತು.
ಸುಮಾರು 1.80 ಕೋ.ರೂ. ಅನುದಾನದಲ್ಲಿ ನಿರ್ಮಾಣಗೊಂಡ ಈ ಮಾರುಕಟ್ಟೆಯ ಕಾಮಗಾರಿ ವ್ಯವಸ್ಥಿತ ವಾಗಿಲ್ಲ ಹಾಗೂ ವಿನ್ಯಾಸದಲ್ಲಿ ದೋಷವಿದೆ. ಎಲ್ಲಾ ಮೀನು ಮಾರಾಟಗಾರರಿಗೆ ಸªಳಾವಕಾಶದ ಕೊರñಯಾಗಲಿದೆ ಎನ್ನುವ ಕಾರಣಕ್ಕೆ ಉದ್ಘಾಟನೆಗೆ ಆಕ್ಷೇಪ ವ್ಯಕ್ತವಾಗಿತ್ತು. ಅನಂತರ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರು. ಆದರೆ ಎಷ್ಟೇ ಪ್ರಯತ್ನಪಟ್ಟರು ಸಮಸ್ಯೆ ಬಗೆಹರಿದಿರಲಿಲ್ಲ.
ಇದೀಗ ಸ್ಥಳೀಯ ಗ್ರಾ.ಪಂ. ಹಾಗೂ ಮೀನುಗಾರ ಪ್ರಮುಖರು ಮಾತುಕತೆ ನಡೆಸಿ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನಿರ್ದೇಶನದಂತೆ ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ, ಐರೋಡಿ ಗ್ರಾ.ಪಂ. ಅಧ್ಯಕ್ಷ ಮೊಸೆಸ್ ರೋಡಿಗ್ರಸ್ ಉಪಸ್ಥಿತಿಯಲ್ಲಿ ವ್ಯಾಪಾರಕ್ಕೆ ವ್ಯವಸ್ಥೆಗೊಳಿಸಲಾಯಿತು.
ಪ್ರತಿದಿನ ಸ್ಥಳ ಬದಲಾವಣೆ, ಖಾಯಂ ಆಗಿ ಮಾರುವವರಿಗೆ ಮೊದಲು ಆಧ್ಯತೆ ನೀಡಿ ಎನ್ನುವ ಬೇಡಿಕೆ ಕೇಳಿಬಂತು ಆದರೆ ಈ ಕುರಿತು ಸ್ಪಷ್ಟ ನಿರ್ಧಾರ ವ್ಯಕ್ತವಾಗಲಿಲ್ಲ. ಹೀಗಾಗಿ ಮೀನು ಮಾರಾಟ ಮಾಡುವ ಆರು ಮಂದಿ ಮಹಿಳೆಯರಿಗೆ ನಾಯಕತ್ವ ನೀಡಿ ಪ್ರತಿ ದಿನ ಸುಂಕ ವಸೂಲಿ, ಜಾಗ ಹಂಚಿಕೆ ಜವಬ್ದಾರಿ ನೀಡಲಾಯಿತು. ಈ ಸಂದರ್ಭ ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ವಿಫಲವಾದ ಕಾರಣ ಸುಮಾರು 2 ಗಂಟೆಗೂ ಹೆಚ್ಚು ಕಾಲ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವನ್ನು ಮಾಯವಾಗಿ ಕಿಕ್ಕಿರಿದ ಜನಸಂದಣಿ ಇತ್ತು.
ಐರೋಡಿ ಗ್ರಾ.ಪಂ. ಅಧ್ಯಕ್ಷ ಮೊಸೆಸ್ ರೋಡಿಗ್ರಸ್, ಸದಸ್ಯರಾದ ಆನಂದ ಗಾಣಿಗ, ಶಿವರಾಮ ಶ್ರೀಯಾನ್, ಸುಧಾಕರ ಪೂಜಾರಿ, ಮೀನುಗಾರ ಪ್ರತಿನಿಧಿಗಳಾಗಿ ಸಂದೀಪ್ ಕುಂದರ್ ಕೋಡಿ ಕನ್ಯಾಣ, ಮಹಾಬಲ ಕುಂದರ್, ಗಂಗಾಧರ, ಪ್ರಭಾಕರ ಕುಂದರ್, ಮೀನುಗಾರಿಕಾ ಮಹಿಳೆಯರಾದ ಜ್ಯೋತಿ ಖಾರ್ವಿ, ಸರೋಜ, ಗಂಗೆ, ಕುಸುಮ, ಬೇಬಿ, ಕಮಲಾ ಮುಂತಾದವರು ಉಪಸ್ಥಿತರಿದ್ದರು.
ಸ್ಥಳಾವಕಾಶಕ್ಕಾಗಿ ಕಿತ್ತಾಟ
ನೂತನ ಮಾರುಕಟ್ಟೆಯಲ್ಲಿ ಸ್ಥಳ ಹಂಚಿಕೆ ಮಾಡುತ್ತಿದ್ದಂತೆ ಗೊಂದಲಮಯ ವಾತಾವರಣ ನಿರ್ಮಾಣಗೊಂಡಿತು. ಮಾರುಕಟ್ಟೆಯ ಒಳಗೆ ಸುಮಾರು 80 ಮಂದಿಗೆ ಮೀನು ಮಾರಾಟ ಮಾಡಲು ಸ್ಥಳ ಗುರುತು ಮಾಡಿದ್ದು, 150ಕ್ಕೂ ಹೆಚ್ಚು ಮೀನುಗಾರಿಕಾ ಮಹಿಳೆಯರು ಆಗಮಿಸಿದ್ದರಿಂದ ಸುಮಾರು 70 ಮಂದಿಗೆ ಸ್ಥಳಾವಕಾಶ ಸಿಗದೆ ಅತಂತ್ರರಾದರು ಹಾಗೂ ಖಾಯಂ ಆಗಿ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಸ್ಥಳ ಸಿಗದೇ ಅಪರೂಪಕ್ಕೊಮ್ಮೆ ಮೀನು ಮಾರಾಟಕ್ಕೆ ಬರುವ ಮಹಿಳೆಯರು ಸ್ಥಳವನ್ನು ಆಕ್ರಮಿಸಿಕೊಂಡಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.