Sasthan: ಹೆದ್ದಾರಿಯಲ್ಲಿ ಮಾಸಿದ ಗುರುತುಗಳಿಗೆ ಮರುಬಣ್ಣ

ಝೀಬ್ರಾ ಕ್ರಾಸಿಂಗ್‌, ಪಾದಚಾರಿ ಬಿಳಿ ಪಟ್ಟಿ, ರಿಫ್ಲೆಕ್ಟರ್‌ಗಳಿಗೆ ಕಲರಿಂಗ್‌ ಆರಂಭ

Team Udayavani, Oct 23, 2024, 6:07 PM IST

11

ಸಾಸ್ತಾನ: ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರ ದಿಂದ ಉಡುಪಿಯ ತನಕ ರಸ್ತೆಯ ಮಾರ್ಗಸೂಚಿಗಳು ಮಾಸಿ ಹೋಗಿದ್ದವು. ಇದೀಗ ಮಳೆ ಕಡಿಮೆಯಾಗಿರುವುದರಿಂದ ರಿಫ್ಲೆಕ್ಟರ್‌ಗಳು, ಝೀಬ್ರಾ ಕ್ರಾಸಿಂಗ್‌, ಮಾರ್ಗಸೂಚಿ, ಪಾದಚಾರಿ ಬಿಳಿ ಪಟ್ಟಿ ಅಳವಡಿಕೆ ಕಾರ್ಯವನ್ನು ಆರಂಭಿಸಲಾಗಿದೆ.

ಬಿಳಿಪಟ್ಟಿಯ ರಿಫ್ಲೆಕ್ಟರ್‌ ಹಾಗೂ ಇತರ ಸಂಚಾರ ಮಾರ್ಗಸೂಚಿಗಳು ಅಳಿಸಿ ಹೋಗಿದ್ದರಿಂದ ವಾಹನಗಳ ಸುಗಮ ಮತ್ತು ಸುರಕ್ಷಿತ ಚಾಲನೆಗೆ ಸಮಸ್ಯೆಯಾಗಿತ್ತು. ಇದೀಗ ಕೆಲವೆಡೆ ಇವುಗಳ ಅಳವಡಿಕೆ ಆರಂಭವಾಗಿದ್ದರೂ ಅದಕ್ಕೆ ವೇಗ ನೀಡಬೇಕಾಗಿದೆ.

ಮಳೆಗಾಲ ಆರಂಭದ ಮೊದಲು ರಾ.ಹೆ.-66 ರಲ್ಲಿ ಆರಂಭಿಸಲಾದ ಮರು ಡಾಮರೀಕರಣ ಕಾಮಗಾರಿಯಿಂದ ರಿಫ್ಲೆಕ್ಟರ್‌ಗಳು ಅಳಿಸಿಹೋಗಿದ್ದವು. ಡಾಮರೀಕರಣದ ಅನಂತರ ಮಳೆ ಹಾಗೂ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಈ ಗುರುತುಗಳನ್ನು ಮುದ್ರಿಸುವಲ್ಲಿ ಇಲಾಖೆಗೆ ಹಿನ್ನಡೆಯಾಗಿತ್ತು.

ರಸ್ತೆ ಗುರುತುಗಳು ವಾಹನ ಚಾಲಕರಿಗೆ ಮಾರ್ಗದರ್ಶಿಯಾಗಿ ಕೆಲಸ ಮಾಡುವುದರ ಜತೆಗೆ ಮಾರ್ಗದ ಬದಿಯಲ್ಲಿ ನಡೆದುಕೊಂಡು ಹೋಗು ವವರಿಗೂ ಎಲ್ಲಿ ನಡೆಯಬಹುದು ಎನ್ನುವುದನ್ನು ಸೂಚಿಸುತ್ತದೆ. ರಸ್ತೆ ಎಲ್ಲಿ ದಾಟಿದರೆ ಸುರಕ್ಷಿತ ಎಂದೂ ತಿಳಿಯುತ್ತದೆ.

ರಾತ್ರಿಯ ಹೊತ್ತಿನಲ್ಲಿ ಡೈವರ್ಷನ್‌ ಮತ್ತಿತರ ಸೂಚನೆಗಳು ಕಡಿಮೆ ಬೆಳಕಿನಲ್ಲೂ ಗೋಚರಿಸುತ್ತವೆ. ರಸ್ತೆ ಅಂಚಿನ ಬಿಳಿ ಗೆರೆಗಳು ಬದಿಗೆ ಸರಿಯುವ ಅಪಾಯವನ್ನು ಕಡಿಮೆ ಮಾಡುತ್ತವೆ. ಇವುಗಳು ಇಲ್ಲದೆ ಹೋದಾಗ ಅಪಾಯ ಎದುರಾಗುತ್ತದೆ.

ಸರ್ವಿಸ್‌ ರಸ್ತೆಯ ಕೊರತೆ
ಬಹುತೇಕ ಕಡೆಗಳಲ್ಲಿ. ರಾ.ಹೆದ್ದಾರಿಗೆ ಸಂದಿಸುವ ಇತರ ರಸ್ತೆಗಳಿಗೆ ವಾಹನಗಳು ಸಂಚರಿಸಬೇಕಾಗಿರುವುದರಿಂದ ಹಾಗು ಇಲ್ಲಿ ಸರ್ವಿಸ್‌ ರಸ್ತೆಗಳು ನಿರ್ಮಾಣವಾಗದೇ ಇರುವುದರಿಂದ ವಾಹನಗಳು ರಾ.ಹೆ.ಯಲ್ಲಿ ಅಭಿಮುಖವಾಗಿ ಸಂಚರಿಸಬೇಕಾದ ಅನಿರ್ವಾರ್ಯತೆ ಇದೆ. ಈ ಭಾಗಗಳಲ್ಲಿ ಆಭಿಮುಖವಾಗಿ ಸಂಚರಿಸುವ ವಾಹನಗಳಿಗೆ ಹಾಗು ನೇರವಾಗಿ ಸಂಚರಿಸುವ ವಾಹನಗಳಿಗೆ ಸಂಚಾರದ ಅರಿವನ್ನು ಮೂಡಿಸಲು ಕೂಡ ಈ ಗುರುತುಗಳು ಅನುಕೂಲಕರ.

ಕಾಮಗಾರಿಗೆ ಚುರುಕು
ಕುಂದಾಪುರದಿಂದ ಉಡುಪಿ ತನಕ ಮಾಸಿಹೋಗಿರುವ ರಸ್ತೆಗುರುತುಗಳನ್ನು ಮರು ಮುದ್ರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಳೆ ಬಿಡುವಿನ ಸಮಯವನ್ನು ನೋಡಿಕೊಂಡು ಈ ಕಾಮಗಾರಿಗೆ ಚುರುಕು ನೀಡಲಾಗುವುದು.
– ತಿಮ್ಮಯ್ಯ, ಟೋಲ್‌ ಸೀನಿಯರ್‌ ಮ್ಯಾನೇಜರ್‌, ಉಡುಪಿ ಟೋಲ್‌ ವೇ

ಟಾಪ್ ನ್ಯೂಸ್

Mandya1

Mandya: ಸಾಹಿತ್ಯ ಸಮ್ಮೇಳನ ಸಂಭ್ರಮಕ್ಕೆ ಕೊರತೆಯಾಗದಂತೆ ಮಿತಿಯಲ್ಲಿ ಖರ್ಚು ಮಾಡಿ: ಸಚಿವ

Wedding Day: ಶಬಾನಾ ಆಜ್ಮಿ ವರಿಸುವಾಗ ಜಾವೇದ್‌ ನಶೆಯಲ್ಲಿದ್ದರು… ಅನ್ನು ಕಪೂರ್‌

Wedding Day: ಶಬಾನಾ ಆಜ್ಮಿ ವರಿಸುವಾಗ ಜಾವೇದ್‌ ನಶೆಯಲ್ಲಿದ್ದರು… ಅನ್ನು ಕಪೂರ್‌

Udupi: ಅ.24-26; ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌ರಿಂದ ಯೋಗಾಭ್ಯಾಸ

Udupi: ಅ.24-26; ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌ರಿಂದ ಯೋಗಾಭ್ಯಾಸ

Bidar: ಕನ್ನಡ ನಾಮಫಲಕ: ಆಡಳಿತದಿಂದ ಜಾಗೃತಿ ಜಾಥಾ

Bidar: ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡ ನಾಮಫಲಕ: ಆಡಳಿತದಿಂದ ಜಾಗೃತಿ ಜಾಥಾ

15

Amaran trailer: ಮೇಜರ್‌ ಮುಕುಂದ್‌ ಸಾಹಸಗಾಥೆಗೆ ಜೀವ ತುಂಬಿದ ಶಿವಕಾರ್ತಿಕೇಯನ್

Supreme Court: ಅಂತಿಮ ತೀರ್ಪಿಗೆ ಕಾರಣವನ್ನು 5 ದಿನದಲ್ಲಿ ಪ್ರಕಟಿಸಿ: ಸುಪ್ರೀಂ

Supreme Court: ಅಂತಿಮ ತೀರ್ಪಿಗೆ ಕಾರಣವನ್ನು 5 ದಿನದಲ್ಲಿ ಪ್ರಕಟಿಸಿ: ಸುಪ್ರೀಂ

Lawyer Jagadish: ದರ್ಶನ್‌ ಕೊಲೆನೇ ಮಾಡಿಲ್ಲ ಅಂಥ ಮೊದಲು ಹೇಳಿದ್ದೇ ನಾನು.. ಜಗದೀಶ್‌

Lawyer Jagadish: ದರ್ಶನ್‌ ಕೊಲೆನೇ ಮಾಡಿಲ್ಲ ಅಂಥ ಮೊದಲು ಹೇಳಿದ್ದೇ ನಾನು.. ಜಗದೀಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಅ.24-26; ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌ರಿಂದ ಯೋಗಾಭ್ಯಾಸ

Udupi: ಅ.24-26; ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌ರಿಂದ ಯೋಗಾಭ್ಯಾಸ

14

Katpadi – ಶಿರ್ವ: ರಸ್ತೆ ಗುಂಡಿಗೆ ತೇಪೆ

13(1)

Udupi: ಆಸ್ಪತ್ರೆ ಕಟ್ಟಡ ಹೊಂಡದಿಂದ ಅಪಾಯ!

12

Udupi: ಇನ್ನೂ ಘೋಷಣೆಯಾಗದ ಗಾಂಧಿ ಗ್ರಾಮ ಪುರಸ್ಕಾರ

10

 Kaup: ಮರೆಯಾಗುತ್ತಿದ್ದಾರೆ ಕಿನ್ನರಿ ಜೋಗಿಗಳು !

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Mandya1

Mandya: ಸಾಹಿತ್ಯ ಸಮ್ಮೇಳನ ಸಂಭ್ರಮಕ್ಕೆ ಕೊರತೆಯಾಗದಂತೆ ಮಿತಿಯಲ್ಲಿ ಖರ್ಚು ಮಾಡಿ: ಸಚಿವ

Wedding Day: ಶಬಾನಾ ಆಜ್ಮಿ ವರಿಸುವಾಗ ಜಾವೇದ್‌ ನಶೆಯಲ್ಲಿದ್ದರು… ಅನ್ನು ಕಪೂರ್‌

Wedding Day: ಶಬಾನಾ ಆಜ್ಮಿ ವರಿಸುವಾಗ ಜಾವೇದ್‌ ನಶೆಯಲ್ಲಿದ್ದರು… ಅನ್ನು ಕಪೂರ್‌

Udupi: ಅ.24-26; ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌ರಿಂದ ಯೋಗಾಭ್ಯಾಸ

Udupi: ಅ.24-26; ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌ರಿಂದ ಯೋಗಾಭ್ಯಾಸ

17

Sandalwood: ಸಂಗೀತಮಯ ದೂರ ತೀರಯಾನ

16

Shweta Srivastav: ಸಿನಿಜರ್ನಿಗೆ ಪುಸ್ತಕ ರೂಪ ಕೊಟ್ಟ ನಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.