ಉತ್ತಮ ದಾಖಲಾತಿಯ ಶಾಲೆಗೆ ಬೇಕಿದೆ ಅಗತ್ಯ ಸೌಲಭ್ಯ
Team Udayavani, Sep 17, 2021, 3:20 AM IST
ತಲ್ಲೂರು: ಬೈಂದೂರು ವಲಯದ ಮಾವಿನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ದಾಖಲಾತಿಯಾಗಿದ್ದು, ಇದಲ್ಲದೆ ಈ ಸಾಲಿನಿಂದ ಆಂಗ್ಲ ಮಾಧ್ಯಮ ತರಗತಿಗಳು ಆರಂಭಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಈ ಶಾಲೆಗೆ ಹೆಚ್ಚುವರಿ ಕಟ್ಟಡ, ಆಟದ ಮೈದಾನ ಸೇರಿದಂತೆ ಹಲವು ಮೂಲ ಸೌಕರ್ಯಗಳ ಆವಶ್ಯಕತೆಯಿದೆ.
ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ಮಾವಿನಕಟ್ಟೆಯಲ್ಲಿರುವ ಈ ಸರಕಾರಿ ಶಾಲೆಯಲ್ಲಿ ಪ್ರಸ್ತುತ 210 ವಿದ್ಯಾರ್ಥಿಗಳಿದ್ದಾರೆ. ಈ ವರ್ಷ ಒಂದನೇ ತರಗತಿಗೆ 31 ದಾಖಲಾತಿಯಾಗಿದ್ದು, ಒಟ್ಟಾರೆ 62 ಮಕ್ಕಳು ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ಇಲ್ಲಿ 195 ವಿದ್ಯಾರ್ಥಿಗಳಿದ್ದರು.
ಆಂಗ್ಲ ಮಾಧ್ಯಮ ತರಗತಿ ಆರಂಭ:
2004ರಲ್ಲಿ ಆರಂಭಗೊಂಡ ಮಾವಿನಕಟ್ಟೆ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ತರಗತಿ ಆರಂಭಗೊಂಡಿದೆ. ಮೊದಲ ವರ್ಷವೇ ಈ ತರಗತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ 20 ಮಕ್ಕಳು ಸೇರ್ಪಡೆಯಾಗಿದ್ದಾರೆ. ಇನ್ನೂ ಸಹ ದಾಖಲಾತಿ ಪ್ರಕ್ರಿಯೆ ನಡೆಯುತ್ತಲೇ ಇದೆ.
ಹೆಚ್ಚುವರಿ ಕಟ್ಟಡ ಬೇಡಿಕೆ:
ಶಾಲೆಯಲ್ಲಿ ಈಗ ಒಂದರಿಂದ 7ನೇ ತರಗತಿಯ ಜತೆಗೆ ಆಂಗ್ಲ ಮಾಧ್ಯಮ ತರಗತಿಯು ಆರಂಭಗೊಂಡಿರುವುದರಿಂದ ಮಕ್ಕಳಿಗೆ ಪಾಠ- ಪ್ರವಚನಕ್ಕೆ ಕೊಠಡಿ ಕೊರತೆ ಎದುರಾಗಿದೆ. ತುರ್ತಾಗಿ ಈ ಶಾಲೆಗೆ ಹೆಚ್ಚುವರಿ ಕಟ್ಟಡದ ಅಗತ್ಯತೆಯಿದೆ.
ಶೌಚಾಲಯ, ಪೀಠೊಪಕರಣ:
ಇದಲ್ಲದೆ 200ಕ್ಕೂ ಅಧಿಕ ಮಂದಿ ಮಕ್ಕಳಿರುವುದರಿಂದ ಈಗಿರುವ ಶೌಚಾಲಯದಲ್ಲಿ ಅಷ್ಟೊಂದು ಮಕ್ಕಳಿಗೆ ಬಳಕೆಗೆ ಕಷ್ಟ. ಹಾಗಾಗಿ ಹೆಚ್ಚುವರಿ ಶೌಚಾಲಯದ ಅಗತ್ಯತೆಯೂ ಇದೆ. ಇನ್ನು ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿರುವುದರಿಂದ ಬೆಂಚ್, ಡೆಸ್ಕ್ ಸಹಿತ ಇನ್ನಿತರ ಪೀಠೊಕರಣಗಳು ಬೇಕಾಗಿವೆ. ಈ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಇಲಾಖೆ, ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕಿದೆ.
ಹೆಚ್ಚುವರಿ ಶಿಕ್ಷಕರು ಅಗತ್ಯ :
ಸದ್ಯ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಸೇರಿ 8 ಮಂದಿ ಶಿಕ್ಷಕ – ಶಿಕ್ಷಕಿಯರಿದ್ದಾರೆ. ಆಂಗ್ಲ ಮಾಧ್ಯಮ ತರಗತಿಗಳು ಆರಂಭಗೊಂಡಿರುವುದರಿಂದ ಹೆಚ್ಚುವರಿ ಶಿಕ್ಷಕರ ಅಗತ್ಯತೆಯೂ ಇದೆ. ಇನ್ನು ಶಾಲೆಯಲ್ಲಿ ಸದ್ಯ ಇರುವಂತಹ ಆಟದ ಮೈದಾನ ಕಿರಿದಾಗಿದ್ದು, ಶಾಲೆಗೆ ವಿಶಾಲವಾದ ಆಟದ ಮೈದಾನದ ಅಗತ್ಯವಿದೆ. ಇದರೊಂದಿಗೆ ಶಾಲೆಯ ಆವರಣದ ಸುತ್ತಲೂ ಆವರಣ ಗೋಡೆಯ ನಿರ್ಮಾಣವಾಗಬೇಕಿದೆ.
ಸೌಲಭ್ಯಗಳು ಬೇಕಿವೆ: ಶಾಲೆಯಲ್ಲಿ ಈ ವರ್ಷದಿಂದ ಆಂಗ್ಲ ಮಾಧ್ಯಮ ತರಗತಿ ಆರಂಭಗೊಂಡಿದೆ. ಉತ್ತಮ ದಾಖಲಾತಿಯೂ ಆಗಿರುವುದರಿಂದ ಕೆಲವೊಂದು ಅಗತ್ಯ ಸೌಲಭ್ಯಗಳು ಬೇಕಾಗಿವೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ.–ಗೌರಿ, ಮುಖ್ಯೋಪಾಧ್ಯಾಯಿನಿ
ಆಟದ ಮೈದಾನ ಅಗತ್ಯ :
ಗ್ರಾಮೀಣ ಭಾಗದ ಈ ಶಾಲೆಗೆ ಉತ್ತಮ ದಾಖಲಾತಿಯಾಗುತ್ತಿದ್ದು, ಅದಕ್ಕೆ ತಕ್ಕಂತೆ ಅಗತ್ಯ ಸೌಕರ್ಯಗಳು ಸಹ ಬೇಕಾಗಿವೆ. ಪ್ರಮುಖವಾಗಿ ವಿಸ್ತೃತವಾದ ಆಟದ ಮೈದಾನದ ಬೇಡಿಕೆಯಿದೆ. ಇನ್ನು ಮಕ್ಕಳ ಸಂಖ್ಯೆಗೆ ತಕ್ಕಂತೆ ಬಳಕೆಗೆ ಅನುಕೂಲವಾಗುವಂತೆ ಶೌಚಾಲಯದ ಅಗತ್ಯವೂ ಇದೆ. ಇದಲ್ಲದೆ ಪೀಠೊಪಕರಣಗಳು ಸಹ ಬೇಕಾಗಿವೆ.– ಸಿದ್ಧಿಕಿ, ಎಸ್‌ಡಿಎಂಸಿ ಅಧ್ಯಕ್ಷರು
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.