ಹೊರ ಜಿಲ್ಲೆಯ ಕಟಾವು ಯಂತ್ರಗಳ ಆಗಮನಕ್ಕೆ ಹಿನ್ನಡೆ
ಮುಂಗಾರು ಭತ್ತ ಕಟಾವಿಗೆ ವರುಣನ ಅಡ್ಡಿ
Team Udayavani, Oct 15, 2020, 1:30 AM IST
ಕಟಾವು ಯಂತ್ರ
ಕೋಟ: ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ನಾಟಿ ಮಾಡಿದ ಭತ್ತದ ಗದ್ದೆಗಳು ಕಟಾವಿಗೆ ಸಿದ್ಧಗೊಂಡಿವೆ. ಆದರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಟಾವಿಗೆ ಹಿನ್ನಡೆಯಾಗಿದ್ದು ಬೆಳೆದು ನಿಂತ ಭತ್ತದ ಪೈರಿಗೆ ಹಾನಿಯಾಗುವ ಅಪಾಯ ಎದುರಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಭತ್ತದ ಕೃಷಿಯಲ್ಲಿ ಏರಿಕೆ ಕಂಡಿದ್ದು ಕಳೆದ ಬಾರಿ 34,730 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದರೆ ಈ ಬಾರಿ 35,754 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ನಡೆದಿತ್ತು. ಮುಂದಿನ ಏಳೆಂಟು ದಿನಗಳಲ್ಲಿ ಕಟಾವಿನ ಪ್ರಮಾಣ ಇನ್ನೂ ಹೆಚ್ಚಿನ ಚುರುಕು ಪಡೆಯಲಿದೆ. ಆದರೆ ಮಳೆ ರೈತರಲ್ಲಿ ಆತಂಕ ತಂದಿದೆ.
ಯಂತ್ರಗಳನ್ನು ತರಲು ಹಿಂದೇಟು
ಪ್ರಸ್ತುತ ಯಂತ್ರಗಳ ಮೂಲಕವೇ ಬಹುತೇಕ ಕಟಾವು ಕಾರ್ಯ ನಡೆಯುತ್ತದೆ. ಪ್ರತಿ ವರ್ಷ ಅಕ್ಟೋಬರ್ ಮಧ್ಯ ಭಾಗದಲ್ಲಿ ದಾವಣಗೆರೆ, ರಾಯಚೂರು, ಶಿವಮೊಗ್ಗ, ತಮಿಳುನಾಡು, ಕೇರಳ, ಮುಂತಾದ ಕಡೆಗಳಿಂದ ನೂರಾರು ಯಂತ್ರಗಳು ಜಿಲ್ಲೆಗೆ ಆಗಮಿಸುತ್ತವೆ. ಕಟಾವು ಆರಂಭವಾಗುವ ಸಂದರ್ಭದಲ್ಲೇ ಮಳೆಯ ಪ್ರಮಾಣ ಏರಿಕೆಯಾದರೆ ಕೆಲಸ ಸಿಗದೆ ನಷ್ಟವಾಗುವ ಸಾಧ್ಯತೆ ಇರುವುದರಿಂದ ಯಂತ್ರಗಳನ್ನು ತರಲು ಮಾಲಕರು ಹಿಂದೇಟು ಹಾಕುತ್ತಾರೆ. ಅದೇ ರೀತಿ ಈ ಬಾರಿ ಕೂಡ ಮಳೆ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಯಂತ್ರಗಳು ಜಿಲ್ಲೆಗೆ ಆಗಮಿಸಿಲ್ಲ.
ಮಳೆ ಮುಂದುವರಿದರೆ ನಷ್ಟ ಹೆಚ್ಚಳ
ಒಂದು ವಾರದಲ್ಲಿ ಕಟಾವು ಪ್ರಮಾಣ ಹೆಚ್ಚಳವಾಗುವುದರಿಂದ ಮಳೆ ಇದೇ ರೀತಿ ವಾರಗಟ್ಟಲೆ ಮುಂದುವರಿದರೆ ಕಟಾವು ನಡೆಸಲಾಗದೆ ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚಲಿದೆ ಹಾಗೂ ಯಂತ್ರಗಳು ನಿರೀಕ್ಷಿತ ಸಂಖ್ಯೆಯಲ್ಲಿ ಬಾರದಿದ್ದರೆ ಬಾಡಿಗೆ ಹೆಚ್ಚಳ ವಾಗುವ ಸಾಧ್ಯತೆಯೂ ಇದೆ.
ಒಂದು ವಾರ ಸಮಸ್ಯೆ ಇಲ್ಲ
ಜಿಲ್ಲೆಯಲ್ಲಿ ಈ ಬಾರಿ 35,754ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು ಆರಂಭದಲ್ಲೇ ನಾಟಿ ಮಾಡಿದ ಕೆಲವು ಗದ್ದೆಗಳು ಕಟಾವಿಗೆ ಬಂದಿವೆ. ಮತ್ತುಳಿದ ಬಹುತೇಕ ಕಡೆ ಮುಂದಿನ ಒಂದು ವಾರದ ಅನಂತರ ಕಟಾವಿಗೆ ಸಿದ್ಧವಾಗಲಿದೆ.
-ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ
ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.