ಸಾಕಾರಗೊಳ್ಳಲಿ ಹೋಬಳಿ, ತಾಲೂಕು ಬೇಡಿಕೆ ಕನಸು; ಶಂಕರನಾರಾಯಣ ಗ್ರಾಮ


Team Udayavani, Sep 16, 2022, 2:33 PM IST

11

ಶಂಕರನಾರಾಯಣ: ಬ್ರಿಟಿಷರ ಕಾಲದಿಂದಲೇ ಗುರುತಿಸಿಕೊಂಡಿರುವ ಶಂಕರನಾರಾಯಣದಲ್ಲಿ ಆಗಲೇ ಉಪ ನೋಂದಣಿ ಕಚೇರಿ ಸಹಿತ ಹೆಚ್ಚಿನ ಎಲ್ಲ ಸರಕಾರಿ ಕಚೇರಿಗಳು ಕಾರ್ಯಾಚರಿಸುತ್ತಿದ್ದವು. ಆದರೆ ಈಗಲೂ ಹೋಬಳಿ ಹಾಗೂ ತಾಲೂಕು ಕೇಂದ್ರವಾಗಲು ಶತಪ್ರಯತ್ನ ಮಾಡುತ್ತಲೇ ಇದೆ. ಇನ್ನೂ ಯಶಸ್ವಿಯಾಗಿಲ್ಲ.

ಶಂಕರನಾರಾಯಣ ಗ್ರಾಮ ಪಂಚಾಯತ್‌ ಗೆ ಈ ಗ್ರಾಮ ಬರುತ್ತದೆ. ಒಟ್ಟು 3,708.99 ಹೆಕ್ಟೇರ್‌ ವಿಸ್ತೀರ್ಣವನ್ನು ಹೊಂದಿದೆ. ಈ ಗ್ರಾಮ ಪಂಚಾಯತ್‌ ಗೆ ಶಂಕರನಾರಾಯಣವಲ್ಲದೇ ಬರುವ ಮತ್ತೂಂದು ಗ್ರಾಮ ಕುಳ್ಕುಂಜೆ. ಗ್ರಾಮದ ಜನಸಂಖ್ಯೆ 7,136. ತಲಾ 9 ಮಂದಿ ಪುರುಷ- ಮಹಿಳಾ ಗ್ರಾ.ಪಂ. ಸದಸ್ಯರಿದ್ದಾರೆ. ಇಲ್ಲಿ ಅಂಗನವಾಡಿಯಿಂದ ಆರಂಭಗೊಂಡು ಸ್ನಾತಕೋತ್ತರ ಅಧ್ಯಯನ ಕೇಂದ್ರದವರೆಗಿನ (ಸರಕಾರಿ ಹಾಗೂ ಖಾಸಗಿ )ಶಿಕ್ಷಣ ಸಂಸ್ಥೆಗಳಿರುವುದು ವಿಶೇಷ.

ಹೋಬಳಿ – ತಾಲೂಕು ಬೇಡಿಕೆ

ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಕುಂದಾಪುರ, ಬೈಂದೂರು, ವಂಡ್ಸೆ ಹೋಬಳಿಗಳಿವೆ. ಇದರೊಂದಿಗೆ ಆಡಳಿತಾತ್ಮಕ ದೃಷ್ಟಿಯಿಂದ ಕುಂದಾಪುರ ಹಾಗೂ ವಂಡ್ಸೆ ಹೋಬಳಿಯ 28 ಗ್ರಾಮಗಳನ್ನು ಸೇರಿಸಿ ಗ್ರಾಮೀಣ ಭಾಗವಾದ ಶಂಕರನಾರಾಯಣವನ್ನು ಹೊಸ ಹೋಬಳಿಯಾಗಿ ರಚಿಸಬೇಕು ಎನ್ನುವ ಬೇಡಿಕೆ ಬಹಳಷ್ಟು ವರ್ಷಗಳದ್ದು. ಹಾಗೆಯೇ ಕುಂದಾಪುರ ತಾಲೂಕಿನಿಂದ ಬಹುದೂರವಿರುವ ಶಂಕರನಾರಾಯಣವನ್ನು ಇಲ್ಲಿನ ಉಪ ನೋಂದಣಿ ಕಚೇರಿಯ 42 ಗ್ರಾಮಗಳನ್ನು ಸೇರಿಸಿ ಹೊಸ ತಾಲೂಕು ಆಗಿ ಘೋಷಿಸಬೇಕು ಎನ್ನುವ ಬೇಡಿಕೆಯೂ ಹಳೆಯದ್ದೇ. ಈ ಬಗ್ಗೆ ತಾಲೂಕು ರಚನೆ ಸಮಿತಿಯು ಜನರನ್ನು ಒಗ್ಗೂಡಿಸಿ ಹೋರಾಡುತ್ತಿದ್ದರೂ ಇನ್ನೂ ಫ‌ಲ ದೊರೆತಿಲ್ಲ. ಈ ಹೋಬಳಿ ಹಾಗೂ ತಾಲೂಕು ಆಗಿ ಮೇಲ್ದರ್ಜೆಗೇರುವ ಅರ್ಹತೆ ಇದೆ. ಆದರೂ ಸಾಧ್ಯವಾಗದಿರುವುದರಕ್ಕೆ ಅಧಿಕಾರಿಗಳ, ಜನಪ್ರತಿನಿಧಿಗಳೂ ಮನಸ್ಸೂ ಮಾಡಬೇಕಿದೆ.

ಒಂದೇ ಸೂರಿನಡಿ ಬರಲಿ

ಇಲ್ಲಿನ ಉಪನೋಂದಣಿ ಕಚೇರಿಯು ಗುಡ್ಡದ ಮೇಲಿದ್ದು, ಅದಕ್ಕೆ ಸುಮಾರು 125 ವರ್ಷಗಳ ಇತಿಹಾಸವಿದೆ. ಇಲ್ಲಿನ ಗ್ರಾ.ಪಂ., ಅಂಚೆ ಕಚೇರಿ, ಉಪ ನೋಂದಣಿ ಕಚೇರಿ ಹೀಗೆ ಎಲ್ಲ ರೀತಿಯ ಕಚೇರಿಗಳು, ಮಿನಿ ವಿಧಾನಸೌಧ ಮಾದರಿಯ ಕಟ್ಟಡದಲ್ಲಿ ಒಂದೇ ಸೂರಿನಡಿ ಬಂದರೆ ಜನರಿಗೆ ಅನುಕೂಲವಾಗಲಿದೆ.

ಪ್ರಮುಖ ಬೇಡಿಕೆಗಳು

-ಶಂಕರನಾರಾಯಣ ಪೊಲೀಸ್‌ ಠಾಣೆಯನ್ನು ಮೇಲ್ದರ್ಜೆಗೇರಿಸಿ, ಈ ಠಾಣೆ ಹಾಗೂ ಅಮಾಸೆಬೈಲು ಠಾಣೆ ಸೇರಿಸಿಕೊಂಡು, ವೃತ್ತ ನಿರೀಕ್ಷಕರ ಕಚೇರಿಯನ್ನಾಗಿಸಬೇಕು.

-ಇಲ್ಲಿನ ಪಶು ಆಸ್ಪತ್ರೆ ಮೇಲ್ದರ್ಜೆಗೆರಿದರೂ 2 ವರ್ಷದಿಂದ ಪಶು ವೈದ್ಯ ಹುದ್ದೆ ಖಾಲಿಯಿದ್ದು, ಶೀಘ್ರ ನೇಮಕವಾಗಬೇಕು.

– ರೈತ ಸಂಪರ್ಕ ಕೇಂದ್ರ ರಚನೆಗೆ ಸಿಬಂದಿ ಕೊರತೆ ಎಂಬ ಇಲಾಖಾಧಿಕಾರಿಗಳ ಕುಂಟು ನೆಪ ನಿವಾರಿಸಿ ಜನರಿಗೆ ಸೌಲಭ್ಯ ಕಲ್ಪಿಸುವುದು.

– ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿವಿಧೆಡೆಯಿಂದ ವಿದ್ಯಾರ್ಥಿಗಳು ಬರುವುದರಿಂದ ಅವರಿಗೆ ಅನುಕೂಲವಾಗುವಂತೆ ಬೆಳಗ್ಗೆ ಮತ್ತು ಸಂಜೆ ವೇಳೆ ಹೆಚ್ಚಿನ ಸರಕಾರಿ ಬಸ್‌ಗಳನ್ನು ಒದಗಿಸಬೇಕು.

– ಇಲ್ಲಿಗೆ ವಿದ್ಯುತ್‌ ಉಪ ವಿಭಾಗ ಮಂಜೂರಾಗಿದ್ದು, ಕಟ್ಟಡ ಕಟ್ಟಲು ನಿವೇಶನ ಒದಗಿಸಬೇಕು.

-ಇಲ್ಲಿನ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗಾಗಿ ಸರಕಾರಿ ಐಟಿಐ ಕಾಲೇಜು ಆರಂಭಿಸಬೇಕು.

ಪುರಾತನ ಹಿನ್ನೆಲೆ

ಇಲ್ಲಿನ ಕ್ರೋಢ ಶಂಕರನಾರಾಯಣ ಕ್ಷೇತ್ರವು ಪುರಾತನ ಕ್ಷೇತ್ರಗಳಲ್ಲಿ ಒಂದು. ಸಹಜ ಪ್ರಕೃತಿ ಸೌಂದರ್ಯವು ಭಕ್ತರು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಎತ್ತರದಲ್ಲಿ ಕ್ರೋಢಗಿರಿಯಿದ್ದು, ಅಲ್ಲಿ ಕ್ರೋಢಮುನಿಗಳ ಆಶ್ರಮ, ತಪ್ಪಲಿನ ಕೊಳದಲ್ಲಿ ಶ್ರೀ ಶಂಕರನಾರಾಯಣ ಸ್ವಾಮಿಯ ಲಿಂಗೋದ್ಭವವಿದೆ. ಕಡು ಬೇಸಗೆ, ಮಳೆಗಾಲದಲ್ಲಿಯೂ ಒಂದೆ ತೆರನಾದ ನೀರಿರುತ್ತದೆ. ಅಂದು ಟಿಪ್ಪು ಸುಲ್ತಾನ್‌ ಇಲ್ಲಿಗೆ ದಾಳಿ ಮಾಡಿದ್ದು, ಆಗ ಆತನ ಮನ:ಪರಿವರ್ತನೆಯಾಗಿ, ದಾಳಿ ವೇಳೆ ಸಿಕ್ಕ ಚಿನ್ನ , ಬೆಳ್ಳಿ , ದೊಡ್ಡ ಗಂಟೆ, ಸಲಾಂ ಟೋಪಿಯನ್ನು ಇಲ್ಲಿಯೇ ಅರ್ಪಿಸಿ ಕೈ ಮುಗಿದು ಹೋಗಿದ್ದ ಎನ್ನುತ್ತದೆ ಇತಿಹಾಸ. ಜನಪ್ರತಿನಿಧಿಗಳು, ಅಧಿಕಾರಿಗಳೂ ಆದ್ಯತೆಯ ಮೇರೆಗೆ ಜನರ ಬೇಡಿಕೆ ಈಡೇರಿಸಬೇಕಿದೆ.

ಪ್ರಸ್ತಾವನೆ ಸಲ್ಲಿಕೆ: ತಾಲೂಕು ಹಾಗೂ ಹೋಬಳಿ ರಚನೆ ಬಗ್ಗೆ ಈಗಾಗಲೇ ಸರಕಾರಕ್ಕೆ, ಸಂಬಂಧಪಟ್ಟ ಅಧಿಕಾರಿಗಳು, ಶಾಸಕರಿಗೆ ಗ್ರಾ.ಪಂ.ನಿಂದ ಮನವಿ ಸಲ್ಲಿಸಿದ್ದೇವೆ. ಉಪ ನೋಂದಣಿ ಕಚೇರಿ, ಪಂಚಾಯತ್‌ ಸಹಿತ ಎಲ್ಲವೂ ಒಂದೇ ಸೂರಿನಡಿ ಬರುವಂತಾಗಲು ಈಗಾಗಲೇ ಗ್ರಾ.ಪಂ.ನಿಂದ ಅಗತ್ಯವಿರುವ ಜಾಗ ಗುರುತಿಸಲಾಗಿದೆ. ಮುಂದಿನ ಕ್ರಮ ಕೈಗೊಳ್ಳಬೇಕಿದೆ. – ಲತಾ ದೇವಾಡಿಗ, ಅಧ್ಯಕ್ಷರು, ಶಂಕರನಾರಾಯಣ ಗ್ರಾ.ಪಂ. 

ಸರಕಾರ ಎಚ್ಚೆತ್ತುಕೊಳ್ಳಲಿ: ಶಂಕರನಾರಾಯಣ ತಾಲೂಕು, ಹೋಬಳಿ ರಚನೆ ಬಗ್ಗೆ ಅನೇಕ ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಸುಮಾರು 5 ಸಾವಿರ ಅಂಚೆ ಕಾರ್ಡ್‌ ಚಳವಳಿಯನ್ನು ನಡೆಸಿದ್ದೆವು. ಅನೇಕ ಮಂದಿ ಜನಪ್ರತಿನಿಧಿಗಳು ಸರಕಾರಕ್ಕೆ ಮನವಿ ಮಾಡಿದ್ದರೂ, ಬೇಡಿಕೆ ಮಾತ್ರ ಈಡೇರಿಲ್ಲ. ಸರಕಾರ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. – ಚಿಟ್ಟೆ ರಾಜಗೋಪಾಲ ಹೆಗ್ಡೆ, ಸಂಚಾಲಕರು ಶಂಕರನಾರಾಯಣ ತಾ| ರಚನೆ ಹೋರಾಟ ಸಮಿತಿ

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

accident

Kundapura: ಕಾರು ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

5(1

Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್‌!

KND-Amber-greece

Whale: ಅಂಬರ್‌ ಗ್ರೀಸ್‌ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

20-

Burhan Wani; ಬುರ್ಹಾನ್‌ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್‌

19-

IED explodes: ನಕ್ಸಲರು ಇರಿಸಿದ್ದ ಐಇಡಿ ಸ್ಫೋಟ: ಮೂರು ಕರಡಿಗಳು ಸಾವು

18-

Formula E race; ಫಾರ್ಮುಲಾ-ಇ ರೇಸ್‌ ಪ್ರಕರಣ: ಕೆಟಿಆರ್‌ ಮೇಲೆ ಎಸಿಬಿ ಎಫ್ಐಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.