ಶಂಕರನಾರಾಯಣ – ಸಿದ್ದಾಪುರ ಮುಖ್ಯ ರಸ್ತೆ; ಹೊಂಡಗಳಿಂದ ಸವಾರರಿಗೆ ಸಂಕಷ್ಟ
Team Udayavani, Aug 7, 2022, 12:43 PM IST
ಶಂಕರನಾರಾಯಣ: ಸಿದ್ದಾಪುರದಿಂದ ಶಂಕರನಾರಾಯಣ ಕಡೆಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆಯ ಅಲ್ಲಲ್ಲಿ ಹಲವೆಡೆಗಳಲ್ಲಿ ಬೃಹದಾಕಾರದ ಹೊಂಡ-ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಸಂಕಷ್ಟ ಪಡುವಂತಾಗಿದೆ. ಇದು ಮುಖ್ಯ ರಸ್ತೆ ಆಗಿರುವುದರಿಂದ ಈ ಮಾರ್ಗದಲ್ಲಿ ಬಸ್ ಗಳ ಸಹಿತ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.
ಉಡುಪಿಯಿಂದ ಸಿದ್ದಾಪುರ – ಹೊಸಂಗಡಿ ಮಾರ್ಗವಾಗಿ ತೀರ್ಥಹಳ್ಳಿ, ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ಮಾತ್ರವಲ್ಲದೆ ಸಿದ್ದಾಪುರ, ಹೊಸಂಗಡಿ ಭಾಗದಿಂದ ಹಾಲಾಡಿ, ಗೋಳಿಯಂಗಡಿ, ಹೆಬ್ರಿ ಕಡೆಗೂ ಇದೇ ಮಾರ್ಗ ಹತ್ತಿರವಾಗಿದೆ.
ಹಲವೆಡೆ ಹೊಂಡ
ಸಿದ್ದಾಪುರದಿಂದ ಶಂಕರ ನಾರಾಯಣ ದವರೆಗೆ ಸುಮಾರು 8 ಕಿ.ಮೀ. ದೂರವಿದ್ದು, ಈ ಪೈಕಿ ಹಲವೆಡೆಗಳಲ್ಲಿ ಹೊಂಡ ಗುಂಡಿಗಳು ಕಾಣಿಸಿಕೊಂಡಿವೆ. ಅದರಲ್ಲೂ ಕೆಲವೆಡೆಯಂತೂ ದೊಡ್ಡ – ದೊಡ್ಡ ಗುಂಡಿಗಳಿದ್ದು, ದ್ವಿಚಕ್ರ ವಾಹನ ಸವಾರರಂತೂ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುಂತಾಗಿದೆ.
ಹೊಂಡ ಮುಚ್ಚಲು ಆಗ್ರಹ
ಜಿಲ್ಲಾ ಮುಖ್ಯ ರಸ್ತೆಯಾಗಿದ್ದರೂ, ಈ ಬಾರಿ ಮಳೆಗಾಲಕ್ಕೂ ಮುನ್ನ ಹೊಂಡ- ಗುಂಡಿಗಳಿದ್ದ ಕಡೆಗಳಲ್ಲಿ ತೇಪೆಯೇ ಹಾಕಿಲ್ಲ. ಇದರಿಂದಾಗಿ ಆಗ ಸಣ್ಣ- ಸಣ್ಣ ಹೊಂಡಗಳಿದ್ದುದು ಈಗ ಬೃಹದಾಕಾರದ ಗುಂಡಿಗಳಾಗಿವೆ. ಈಗ ಮಳೆ ಕಡಿಮೆಯಾದ ಬಳಿಕವಾದರೂ ಹೊಂಡ- ಗುಂಡಿ ಗಳನ್ನು ಮುಚ್ಚುವ ಕಾರ್ಯವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೈಗೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತೇಪೆ ಕಾರ್ಯ: ಕಳೆದ ಬಾರಿ ತೇಪೆ ಹಾಕಲಾದ ಕಡೆಗಳಲ್ಲಿ ಈ ಬಾರಿ ಹೊಂಡ ಬಿದ್ದಿಲ್ಲ. ಈ ಬಾರಿ ಬೇರೆ ಕಡೆಗಳಲ್ಲಿ ಹೊಂಡ ಬಿದ್ದಿರುವ ಬಗ್ಗೆ ಗಮನದಲ್ಲಿದ್ದು, ಮಳೆ ಕಡಿಮೆಯಾದ ಬಳಿಕ ತೇಪೆ ಕಾರ್ಯ ಕೈಗೊಳ್ಳಲಾಗುವುದು. – ದುರ್ಗಾದಾಸ್, ಸಹಾಯಕ ಕಾರ್ಯಪಾಲಕ ಅಭಿಯಂತ, ಲೋಕೋಪಯೋಗಿ ಇಲಾಖೆ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.