ವೇ ಬ್ರಿಜ್‌ ಮೂಲಕವೇ ಮರಳು: ಬಡವರ ಪಾಲಿಗೆ ಬಿಸಿತುಪ್ಪವಾಗುವ ಭೀತಿ

ಸಾಗಾಟ ಸ್ಥಗಿತ; ನೂರಾರು ಲಾರಿಗಳು ಬಾಕಿ

Team Udayavani, Dec 5, 2019, 2:02 AM IST

fd-34

ಕುಂದಾಪುರ: ಮರಳು ತುಂಬಿದ ಲಾರಿಗಳನ್ನು “ವೇ ಬ್ರಿಜ್‌’ ಮೂಲಕ ತೂಕ ಮಾಡಿಯೇ ಗ್ರಾಹಕರಿಗೆ ವಿತರಿಸಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಗಣಿ ಇಲಾಖೆ ಮುಂದಾಗಿರುವ ಹಿನ್ನೆಲೆಯಲ್ಲಿ ಬುಧವಾರ ಮರಳು ವಿತರಣೆ ಸ್ಥಗಿತವಾಗಿದೆ. ಮರಳು ತುಂಬಿದ ನೂರಾರು ಲಾರಿಗಳು ಬಳ್ಕೂರು, ಕಂಡೂರಿನಲ್ಲಿ ಬಾಕಿಯಾಗಿವೆ.

ಈ ನಿಯಮವು ಬಡವರ ಪಾಲಿಗೆ ಮರಳು ಬಿಸಿತುಪ್ಪವಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುವುದು ಮರಳು ಬೇಡಿಕೆದಾರರ ಅಳಲು. ಇದಕ್ಕೆ ಜನಸಾಮಾನ್ಯರು ಕೊಡುವ ವಿವರ ಹೀಗಿದೆ: ಜಿಲ್ಲಾಡಳಿತದ ನಿಯಮದ ಪ್ರಕಾರ, 10 ಮೆಟ್ರಿಕ್‌ ಟನ್‌ (2.75 ಯುನಿಟ್‌) ಮರಳಿಗೆ 6,500 ರೂ. ದರ ನಿಗದಿಪಡಿಸಿತ್ತಾದರೂ ಗ್ರಾಹಕರು ಇದೇ ದರದಲ್ಲಿ 3 ಯುನಿಟ್‌ ಮರಳು ಪಡೆಯುತ್ತಿದ್ದಾರೆ. ಆದರೆ ವೇ ಬ್ರಿಜ್‌ ಮೂಲಕ ತೂಕ ಮಾಡಿ ಗ್ರಾಹಕರಿಗೆ ಮರಳು ವಿತರಿಸಿದಲ್ಲಿ ಕೇವಲ 2.25 ಯುನಿಟ್‌ ಪಡೆದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಬೇಕಾಗುತ್ತೆ. ಒದ್ದೆ ಮರಳು 10 ಮೆಟ್ರಿಕ್‌ ಟನ್‌ ದೊರೆತರೂ ನಷ್ಟ. ಅಥವಾ ಒಂದು ಲಾರಿ ಮರಳು ಎಂದು ತುಂಬಿದಾಗ ಸಾಧಾರಣ 3 ಯುನಿಟ್‌ ಬರುತ್ತದೆ. 10 ಟನ್‌ ಎಂದಾಗ ಮುಕ್ಕಾಲು ಲೋಡು ಮಾತ್ರ ದೊರೆತರೂ ನಷ್ಟ. ಈ ನಿಯಮದಿಂದ ಮರಳು ವಿತರಿಕರಿಗಾಗಲಿ ಅಥವಾ ಲಾರಿ ಮಾಲಕರಿಗಾಗಲಿ ಯಾವುದೇ ನಷ್ಟ ಸಂಭವಿಸುವುದಿಲ್ಲ. ಪರಿಣಾಮ ಬೀರುವುದು ನೇರವಾಗಿ ಗ್ರಾಹಕರ ಕಿಸೆಗೆ ಎಂಬ ಆತಂಕ ಇದೆ.

ಲಾರಿಗಳ ಸಾಲು
ಗಣಿ ಇಲಾಖೆ ಬುಧವಾರ ದಿಢೀರ್‌ರಾಗಿ ಮರಳು ಅನುಮತಿಯನ್ನು ತಡೆಹಿಡಿದೆ. ಪರಿಣಾಮ ಬಳ್ಕೂರು, ಕಂಡೂರು ಪರಿಸರದಲ್ಲಿ ನೂರಕ್ಕೂ ಅಧಿಕ ಲಾರಿಗಳು ಮರಳು ಹೇರಿಕೊಂಡಿದ್ದರೂ ಸಾಗಾಟ ಸಾಧ್ಯವಾಗದೇ ಬಾಕಿಯಾಗಿವೆ. ಮರಳನ್ನು ತೂಗಿಯೇ ವಿತರಿಸಬೇಕೆಂದು ಟೆಂಡರ್‌ ಷರತ್ತಿನಲ್ಲಿ ಇದ್ದರೂ ಗುತ್ತಿಗೆದಾರರು ಇನ್ನೂ ಅದಕ್ಕೆ ಮುಂದಾಗದಿರುವುದರಿಂದ ಸಮಸ್ಯೆಯಾಗಿದೆ.

ಕಲ್ಲಿನ ಕೊರತೆ
ಹಿರಿಯಡಕ ಮತ್ತು ಕುಂದಾಪುರದಲ್ಲಿ ಮರಳು ದೊರೆಯುತ್ತಿದ್ದರೂ ಕಾರ್ಕಳ, ಹೆಬ್ರಿ ತಾಲೂಕಿನವರಿಗೆ ಮರಳು ಪಡೆಯುವುದು ಸುಲಭವಾಗಿಲ್ಲ. ಮನೆ ಕಟ್ಟಲೆಂದು ಸಾಲ ಮಾಡಿ ಗುತ್ತಿಗೆದಾರರಿಗೆ ನೀಡಿ ಮನೆಯೂ ನಿರ್ಮಾಣವಾಗದೇ, ಸಾಲವೂ ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ.

ಕುಂದಾಪುರ ತಾಲೂಕಿನಲ್ಲಿ ಅನುಮತಿಯ ಕೆಂಪುಕಲ್ಲಿನ ಗಣಿ 1 ಮಾತ್ರ ಇದ್ದು, ಕಾರ್ಕಳ ಭಾಗದಲ್ಲಿ ಕರಿಕಲ್ಲಿನ 45 ಕೋರೆಗಳಿವೆ. ಕಾನೂನು ರೀತ್ಯಾ ಅವುಗಳಿಗೆ ಅನುಮತಿ ಹೆಚ್ಚಿಸದಿದ್ದರೆ ಅಕ್ರಮ ಕೋರೆಗಳ ಸಂಖ್ಯೆ ಹೆಚ್ಚಾಗಿ ಮರಳು ಸಿಕ್ಕಿದರೂ ಕಲ್ಲು ಸಿಕ್ಕದು ಎಂಬ ಸ್ಥಿತಿ ಬರಲಿದೆ.
ಹಿರಿಯಡಕದಲ್ಲಿಲ್ಲ ಸಮಸ್ಯೆ ಹಿರಿಯಡಕದಲ್ಲಿ ಬಜೆ ಅಣೆಕಟ್ಟಿನ ಮರಳನ್ನು ನಿಯಮದಂತೆ ವೇಬ್ರಿಜ್‌ ಮೂಲಕ ತೂಕ ಮಾಡಿಯೇ ನೀಡಲಾಗುತ್ತಿದೆ. ಅಲ್ಲಿ ಸಮಸ್ಯೆ ಇಲ್ಲ ಎಂದು ಗಣಿ ಇಲಾಖೆ ತಿಳಿಸಿದೆ.

ಎರಡು ದಿನದಲ್ಲಿ ಇತ್ಯರ್ಥ
ಒದ್ದೆ ಮರಳನ್ನು ನೇರ ಲಾರಿಗಳಿಗೆ ತುಂಬುವಂತಿಲ್ಲ. ಸ್ಟಾಕ್‌  ಯಾರ್ಡ್‌ನಲ್ಲಿ ದಾಸ್ತಾನಿರಿಸಿ ಒಣಗಿ ಬಳಿಕ ತೂಕ ಮಾಡಿ ನೀಡಬೇಕು ಎನ್ನುವುದು ನಿಯಮ. ವೇ ಬ್ರಿಜ್‌ ನಿರ್ಮಿಸಲು ಗುತ್ತಿಗೆದಾರರು ಎರಡು ದಿನಗಳ ಕಾಲಾವಕಾಶ ಕೇಳಿದ್ದು ಅನಂತರ ಸರಿಯಾಗಿ ದೊರೆಯಲಿದೆ.
ಜಿ. ಜಗದೀಶ್‌, ಜಿಲ್ಲಾಧಿಕಾರಿ

ಲಾಬಿಯಿದೆಯೇ?
ಮಣ್ಣು, ಶಿಲೆಕಲ್ಲು, ಕೆಂಪುಕಲ್ಲು, ಜಲ್ಲಿ, ಎಂ ಸ್ಯಾಂಡ್‌, ಜೇಡಿಮಣ್ಣು ಇವೆಲ್ಲವೂ ಕೂಡ ಗಣಿ ಇಲಾಖೆಯ ಅಧೀನಕ್ಕೆ ಒಳಪಡುತ್ತವೆ. ಆದರೆ ಇದಾವುದಕ್ಕೂ ಇಲ್ಲದ ತೂಕದ ನಿಯಮ ಕೇವಲ ಮರಳಿಗೆ ಮಾತ್ರ ಸೀಮಿತ ಮಾಡುವುದರ ಹಿಂದೆ ಜಿಲ್ಲಾಡಳಿತ ಲಾಬಿ ನಡೆಸಿರುವ ಸಂಶಯವಿದೆ.
ದಿನೇಶ್‌ ಬಸ್ರೂರು, ಮರಳು ಗ್ರಾಹಕ

ಟಾಪ್ ನ್ಯೂಸ್

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

2-bng

Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್‌ ?

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-mng

Kundapura: ಉದಯ ಜುವೆಲರ್ಸ್‌ ನ. 14ರ ವರೆಗೆ ದೀಪೋದಯ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

accident2

Kundapura: ಬೈಕ್‌ ಲಾರಿ ಢಿಕ್ಕಿ; ಸವಾರ ಗಾಯ; ಆಸ್ಪತ್ರೆಗೆ ದಾಖಲು

9

Kota: ರಾ.ಹೆ. ಪಕ್ಕದಲ್ಲಿ ನಿರ್ವಹಣೆ ಇಲ್ಲದೆ ಭಾರೀ ಸಮಸ್ಯೆ; ಸೈಕಲ್‌ ಸವಾರರಿಗೆ ಅಪಾಯ

5

Mullikatte: ಟ್ರಕ್‌ ಬೇ, ವಿಶ್ರಾಂತಿ ಕೊಠಡಿ ಆರಂಭಕ್ಕೆ ಗ್ರಹಣ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

11-kushtagi

Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

10-kodagu

Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್‌ ಮೇಜರ್‌

9–Niveus-Mangalore-Marathon

Niveus Mangalore Marathon 2024: ನ.10: ನೀವಿಯಸ್‌ ಮಂಗಳೂರು ಮ್ಯಾರಥಾನ್‌

Anushka shetty’s upcoming movie Ghaati first look

Ghaati: ಸ್ವೀಟಿ ಅಲ್ಲ ಘಾಟಿ; ಫ‌ಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.