ಶಿರೂರು ಜಲಪ್ರಳಯ : 25ಕ್ಕೂ ಅಧಿಕ ಮನೆ ಮುಳುಗಡೆ, ಕೋಟ್ಯಾಂತರ ಮೌಲ್ಯದ ಆಸ್ತಿ ಪಾಸ್ತಿ ನಷ್ಟ
30 ಕ್ಕೂ ಅಧಿಕ ದೋಣಿ, ಬಲೆ, ಸಮುದ್ರಪಾಲು
Team Udayavani, Aug 2, 2022, 11:45 AM IST
ಶಿರೂರು : ಮಂಗಳವಾರ ಮುಂಜಾನೆ ಬ್ರಹತ್ ಮೇಘಸ್ಪೋಟಕ್ಕೆ ಬಹುತೇಕ ಶಿರೂರು ಜಲಾವ್ರತಗೊಂಡಿದೆ.
ಕೊಟ್ಯಾಂತರ ರೂಪಾಯಿ ನಷ್ಡ.: ಒತ್ತಿನೆಣೆ ಪರಿಸರದಲ್ಲಿ ಮೇಘಸ್ಪೋಟಗೊಂಡ ಪರಿಣಾಮ ಚಿಲುಮೆ,ಪೇಟೆ ಮುಂತಾದ ನದಿ ತೊರೆಗಳು ತುಂಬಿ ಹರಿದಿದೆ.ಮಳೆಯ ಪರಿಣಾಮ ಹೊಳೆಗಳು ಕೂಡ ತುಂಬಿದ್ದು ಒಮ್ಮೆಲ್ಲೆ ನೀರು ಏರಿದ ಪರಿಣಾಮ ಪೇಟೆ, ಕೆಸರಕೋಡಿ, ಹಡವಿನಕೋಣೆ, ಕುಂಬಾರಕೇರಿ, ಪಡುವರಿ, ಬಹುತೇಖ ಭಾಗ ಜಲಾವ್ರತಗೊಂಡಿದೆ.
ನಿರೋಡಿಯಲ್ಲಿ ಎಂಟು ಹಸುಗಳು ನೀರುಪಾಲಾಗಿದೆ, ಎರಡು ಮನೆ ಕುಸಿತುವ ಬೀತಿ ಇದೆ, ಕುಂಬಾರಕೇರಿಯಲ್ಲಿ ಎರಡು ಮನೆ ಕುಸಿದಿದೆ, ಕಳುಹಿತ್ಲು ಇಪ್ಪತ್ತಕ್ಕೂ ಅಧಿಕ ದೋಣಿ ನಾಪತ್ತೆಯಾಗಿದೆ, ಹಡವಿನಕೋಣೆಯಲ್ಲಿ ಬಹುತೇಖ ದೋಣಿಯ ಹೊಸ ಬಲೆಗಳು ನದಿ ಪಾಲಾಗಿದೆ, ಇಪ್ಪತ್ತೈದಕ್ಕೂ ಅಧಿಕ ಮನೆ ಜಲಾವ್ರತಗೊಂಡಿದೆ.
ಅಗ್ನಿಶಾಮಕದಳದ ದೋಣಿ ಬಳಸಲಾಗಿದ್ದು. ಬಹುತೇಖ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದ್ದು ಮೂರು ಕಡೆ ಗಂಜಿ ಕೇಂದ್ರ ತೆರೆಯಲಾಗಿದೆ.
ಜಿಲ್ಲಾಧಿಕಾರಿ ಭೇಟಿ :
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು ತಕ್ಷಣದಿಂದ ಸುರಕ್ಷತಾ ಕ್ರಮ ಮತ್ತು ಮುಂಜಾಗ್ರತೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದು ಸಂತ್ರಸ್ಥರಿಗೆ ಜಿಲ್ಲಾಡಳಿತದಿಂದ ಸಹಾಯ ನೀಡುವ ಭರವಸೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಮಾಜಿ ಶಾಸಕ ಕೇ.ಗೋಪಾಲ ಪೂಜಾರಿ, ಸಹಾಯಕ ನಿರ್ದೇಶಕ ಕೆ.ರಾಜು, ತಹಶೀಲ್ದಾರ್ ಕಿರಣ್ ಗೋರಯ್ಯ, ಜಿ.ಪಂ.ಮಾಜಿ ಅಧ್ಯಕ್ಷ ರಾಜು ಪೂಜಾರಿ, ಗ್ರಾ.ಪಂ.ಅಧ್ಯಕ್ಷೆ ದಿಲ್ ಶಾದ್ ಬೇಗಂ. ಉಪಾಧ್ಯಕ್ಷ ರವೀಂದ್ರ ಶೆಟ್ಟಿ ,ಗ್ರಾ.ಪಂ.ಸದಸ್ಯರು, ಆರಕ್ಷಕ ಇಲಾಖೆ, ಕಂದಾಯ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ : ಗಂಗಾವತಿ: ನಾಟಿ ಮಾಡಿದ ಭತ್ತದ ಗದ್ದೆ ಮತ್ತು ಹೋಟೆಲ್ ರೆಸಾರ್ಟ್ ಗಳಿಗೆ ನುಗ್ಗಿದ ಮಳೆ ನೀರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.