ಶಿರೂರು ಮನೆಗೆ ನುಗ್ಗಿದ ಕಳ್ಳರು, 30 ಲಕ್ಷ ನಗ -ನಗದು ಕಳ್ಳತನ
Team Udayavani, Apr 11, 2023, 5:40 AM IST
ಬೈಂದೂರು: ಇಲ್ಲಿನ ಮಾರ್ಕೆಟ್ ಬಳಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 18 ಲಕ್ಷ ರುಪಾಯಿ ಚಿನ್ನ ಹಾಗೂ 12 ಲಕ್ಷ ನಗದು ಕದ್ದೊಯ್ದಿದ್ದಾರೆ.ಶಿರೂರು ಮಾರ್ಕೆಟ್ ಬಳಿ ಹಾರ್ಡ್‌ವೇರ್ ಉದ್ಯಮ ನಡೆಸುತ್ತಿರುವ ಅಜೀಮ್ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದೆ.ರಾತ್ರಿ ಊಟ ಮಾಡಿ ಮಸೀದಿಗೆ ಪ್ರಾರ್ಥನೆಗೆ ತೆರಳಿ ವಾಪಾಸ್ಸು ಬರುವ ವೇಳೆ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ.ಸರಣಿ ರಜೆ ಇರುವ ಕಾರಣ ವ್ಯಾಪಾರದ ಹಣವನ್ನು ಬ್ಯಾಂಕಿಗೆ ಹಾಕಲಾಗದೆ ಮನೆಯಲ್ಲಿಟ್ಟಿದ್ದರು.ಈ ಕುರಿತು ಮಾಹಿತಿ ಇರುವವರೆ ಕಳ್ಳತನ ನಡೆಸಿರುವ ಸಾಧ್ಯತೆ ಕೂಡ ಇದೆ.
ರಾತ್ರಿಯಿಡೀ ತೆರೆದಿರುವ ಅನಧೀಕ್ರತ ಅಂಗಡಿಗಳು,ಗಾಂಜಾ ಅಕ್ರಮ ಚಟುವಟಿಕೆಯ ತಾಣವಾದ ಹೆದ್ದಾರಿ ಬದಿ ಅಂಗಡಿಗಳು. ಗಂಭೀರವಾಗಿ ಪರಿಗಣಿಸದ ಇಲಾಖೆ;ಶಿರೂರು ಟೋಲ್ ಗೇಟ್ ಸಮೀಪದಿಂದ ಸೇರಿ ಬೈಂದೂರು ಮರವಂತೆಯವರಗೆ ಹೆದ್ದಾರಿ ಪಕ್ಕದಲ್ಲಿ ಅನಧೀಕೃತ ಅಂಗಡಿಗಳು ದಿನಕ್ಕೊಂದರಂತೆ ತಲೆ ಎತ್ತುತ್ತಿದೆ.ಮಾತ್ರವಲ್ಲದೆ ಯಾವುದೆ ಅನುಮತಿ ದಾಖಲೆ ಇಲ್ಲದಿದ್ದರು ಕೂಡ ರಾತ್ರಿ ಇಡಿ ತೆರೆದಿರುವುದರ ಜೊತೆಗೆ ಮದ್ಯ ಮಾರಾಟ ನಡೆಯುತ್ತಿರುವುದು ಕುರಿತು ಸಾರ್ವಜನಿಕರು ಹಲವು ಬಾರಿ ದೂರು ನೀಡಿದ್ದರು.ಶಿರೂರು ಟೋಲ್‌ಗೇಟ್ ಪರಿಸರದಲ್ಲಿ ಇದುವರಗೂ ಹಲವು ಗಾಂಜಾ ಪ್ರಕರಣಗಳು ಪತ್ತೆಯಾಗಿದೆ.ಈ ಭಾಗದಲ್ಲಿ ಅನೇಕ ಅಪರಿಚಿತ ವಾಹನಗಳು ರಾತ್ರಿ ವೇಳೆ ಬರುತ್ತಿವೆ.ಮದ್ಯ ಮಾರಾಟ,ಗೋ
ಕಳ್ಳತನ,ಸಾಗಾಟ,ಗಾಂಜಾ ವ್ಯವಹಾರ ಕೂಡ ನಡೆಯುತ್ತಿರುವ ಮಾಹಿತಿಗಳಿವೆ.ಕಳೆದ ವಾರ ಧಾರ್ಮಿಕ ಕಾರ್ಯಕ್ರಮದ ಬ್ಯಾನರ್ ಕೂಡ ಕಿಡಿಗೇಡಿಗಳು ಹರಿದು ಹಾಕಿದ್ದರು.ಇಲ್ಲಿನ ಅಂಗಡಿಗಳು ರಾತ್ರಿಯಿಡಿ ತೆರೆದಿರುವುದೆ ಇದಕ್ಕೆ ಕಾರಣವಾಗಿರುವ ಸಾಧ್ಯತೆಗಳಿವೆ.ಕನಿಷ್ಟ ಪಕ್ಷ ರಾತ್ರಿ ಹನ್ನೆರಡು ಗಂಟೆಯ ಬಳಿಕ ಇಂತಹ ಅನಧೀಕ್ರತ ಅಂಗಡಿಗಳು ಮುಚ್ಚಿದರೆ ಅಪರಾಧ ಪ್ರಕರಣ ಕಡಿಮೆಯಾಗುತ್ತದೆ ಅನೋ°ದು ಸಾರ್ವಜನಿಕ ವಿಚಾರ. ಹೀಗಾಗಿ ಇಲಾಖೆ ಸಾರ್ವಜನಿಕರ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಬೇಕಿದೆ.ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಚೆಕ್ ಪೋಸ್ಟ್ ,ಗಸ್ತುವಾಹನ,ತಪಾಸಣೆ ಇದ್ದರು ಕೂಡ ಇಷ್ಟು ದೊಡ್ಡ ಕಳ್ಳತನ ನಡೆದಿರುವುದು ಆತಂಕ ಉಂಟು ಮಾಡಿದೆ.ಶಿರೂರು ಪರಿಸರದಲ್ಲಿ ಸಣ್ಣಪುಟ್ಟ ಕಳ್ಳತನ ನಿರಂತರವಾಗಿ ನಡೆಯುತ್ತಿದೆ.ಹೀಗಾಗಿ ಇಲಾಖೆ ಕಾನೂನು ಸುರಕ್ಷತೆ ದೃಷ್ಟಿಯಿಂದ ಒಂದಿಷ್ಟು ಬಿಗಿ ಕ್ರಮಕೈಗೊಳ್ಳಬೇಕಿದೆ.ಕಳ್ಳತನ ನಡೆದಿರುವ ಸ್ಥಳಕ್ಕೆ ಬೆ„ಂದೂರು ಆರಕ್ಷಕ ತಂಡ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.