ಸಿದ್ದಾಪುರ: ತಾಯಿ, ಮಗುವಿಗೆ ಕೋವಿಡ್
Team Udayavani, Jul 4, 2020, 7:17 AM IST
ಸಿದ್ದಾಪುರ: ಬೆಂಗಳೂರಿನಿಂದ ಸಿದ್ದಾಪುರಕ್ಕೆ ಬಂದ ತಾಯಿ ಹಾಗೂ ಮಗುವಿಗೆ ಶುಕ್ರವಾರ ಕೋವಿಡ್-19 ಸೋಂಕು ಪತ್ತೆಯಾಗಿದ್ದು, ಮನೆಯವರು ಹಾಗೂ ಸಿದ್ದಾಪುರ ಪರಿಸರದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇಲ್ಲಿನ ಬಡಾಬಾಳುವಿಗೆ ತಾಯಿ- ಮಗು ಸಹಿತ ಒಂದೇ ಮನೆಯ 5 ಮಂದಿ ಬೆಂಗಳೂರಿನಿಂದ ಬಂದಿದ್ದಾರೆ. ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಐದು ಮಂದಿಯ ಪರೀಕ್ಷೆ ನಡೆಸಲಾಗಿದ್ದು 30 ಪ್ರಾಯದ ತಾಯಿ ಹಾಗೂ 4 ವರ್ಷದ ಹೆಣ್ಣು ಮಗುವಿನ ಪರೀಕ್ಷೆಯ ವರದಿಯಲ್ಲಿ ಪಾಸಿಟಿವ್ ಬಂದಿದೆ. ಅವರಿಬ್ಬರನ್ನು ಕುಂದಾಪುರ ಕೊವೀಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮನೆ ಇನ್ನಷ್ಟೆ ಸಿಲ್‌ಡೌನ್ ಮಾಡಬೇಕಾಗಿದೆ.
ಸಿದ್ದಾಪುರದ 2 ಬಾಡಿಗೆ ವಾಹನ ಚಾಲಕರು ಬೆಂಗಳೂರಿನಿಂದ ಇವರನ್ನು ಕರೆತಂದಿದ್ದು, ಅವರಿಗೆ ಜು. 6ರಂದು ಕೊವೀಡ್ ಪರೀಕ್ಷೆಗೆ ಒಳಪಡುವಂತೆ ಸೂಚಿಸಲಾಗಿದೆ. ತಾಯಿ ಮತ್ತು ಮಗು ಪಾದರಾಯನಪುರದಿಂದ ಕಾರಿನಲ್ಲಿ ಬಂದಿದ್ದರು. ಜೆಪಿ ನಗರದಿಂದ ಇನ್ನೊಂದು ಕಾರಿನಲ್ಲಿ ದಂಪತಿ ಮತ್ತು ಮಗು ಆಗಮಿಸಿದ್ದರು.
ಸಿದ್ದಾಪುರ ಪ್ರಾ. ಆ. ಕೇಂದ್ರದಲ್ಲಿ ಜು. 1ರಂದು ಪ್ರಥಮ ಬಾರಿಗೆ ಪರೀಕ್ಷೆ ನಡೆಸಲು ಆರಂಭಿಸಿದ್ದು, 50 ಮಂದಿಯ ಗಂಟಲ ದ್ರವವನ್ನು ತೆಗೆದು ಮಣಿಪಾಲಕ್ಕೆ ಕಳುಹಿಸಲಾಗಿತ್ತು. 50 ಮಂದಿಯ ಪರೀಕ್ಷೆಯ ವರದಿ ಶುಕ್ರವಾರ ಸಿಕ್ಕಿದ್ದು, ಅದರಲ್ಲಿ 2 ಪಾಸಿಟಿವ್ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.