Siddapura: ಅಂಪಾರು ಮನೆ ಕಳವು; 24 ತಾಸಿನಲ್ಲಿ ಆರೋಪಿ ಸೆರೆ

Team Udayavani, Oct 24, 2024, 9:30 PM IST

13

ಸಿದ್ದಾಪುರ: ಅಂಪಾರು ಗ್ರಾಮದ ಅಕ್ಕಯ್ಯ(46) ಅವರ ಮನೆಯಲ್ಲಿ ನಡೆದ ಕಳವು ಪ್ರಕರಣ ದಾಖಲಾದ 24 ಗಂಟೆಗಳ ಒಳಗೆ ಆರೋಪಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಕಳವುಗೈದ ಆರೋಪಿಯು ಕಾನೂನಿನ ಸಂಘರ್ಷಕ್ಕೆ ಒಳಗಾದವನಾಗಿದ್ದು, ಆತನನ್ನು ಉಡುಪಿಯ ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿದೆ.

ಅಕ್ಕಯ್ಯ ಅವರ ಮನೆಯಲ್ಲಿ ಅ.10ರಿಂದ ಅ.21ರ ಮಧ್ಯೆ ಕಳ್ಳತನ ನಡೆದಿತ್ತು. ಕಳ್ಳರು ಮನೆಯ ಎದುರಿನ ಬಾಗಿಲಿನ ಬೀಗ ಒಡೆದು ದೇವರ 5 ಕಾಣಿಕೆ ಡಬ್ಬಿ, ಟಿವಿ ಸ್ಟಾಂಡ್‌ ಮೇಲೆ ಇರಿಸಿದ್ದ 2 ಮೊಬೈಲ್‌ ಹಾಗೂ 1 ಮೊಬೈಲ್‌ ಚಾರ್ಜರನ್ನು ಕಳವು ಮಾಡಿದ್ದರು. ಕಳವಾದ ಸೊತ್ತಿನ ಮೌಲ್ಯ 10,500 ರೂ., ಎಂದು ಅಂದಾಜಿಸಲಾಗಿದೆ.

ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಬಾಲಕನಲ್ಲಿ ಸಾಕಷ್ಟು ಸೊತ್ತುಗಳಿರುವುದು ಪತ್ತೆಯಾಗಿದ್ದು, ಅದನ್ನು ಕಂಡು ಒಂದು ಕ್ಷಣ ದಂಗಾದರು. ಮನೆಯಿಂದ ಕಳವು ಮಾಡಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದರ ಜತೆಯಲ್ಲಿ 60 ಸಾ. ರೂ.ಮೌಲ್ಯದ 9.450 ಗ್ರಾಂ ತೂಕದ ಒಂದು ಜತೆ ಕಿವಿಯೋಲೆ, 1,700 ರೂ. ಮೌಲ್ಯದ 0.280 ಗ್ರಾಂ ತೂಕದ ಸಣ್ಣ ಮಗುವಿನ ಕಿವಿ ಓಲೆ, 3,500 ರೂ.ಮೌಲ್ಯದ 59.760 ಗ್ರಾಂ ಬೆಳ್ಳಿ ಸರ, 240 ರೂ. ಮೌಲ್ಯದ 4.780 ಗ್ರಾಂ ತೂಕದ ಸಣ್ಣ ಬೆಳ್ಳಿ ಸರ, 250 ರೂ. ಮೌಲ್ಯದ 4.080 ಗ್ರಾಂನ ಬೆಳ್ಳಿ ಉಂಗುರ, 700 ರೂ.ಮೌಲ್ಯದ 12.390 ಗ್ರಾಂ ತೂಕದ 5 ಕಾಲು ಉಂಗುರವನ್ನು ವಶಕ್ಕೆ ಪಡೆದಿದ್ದಾರೆ. ಇದರ ಮೂಲವನ್ನು ತಿಳಿಯಲು ಪೊಲೀಸರು ಶ್ರಮಿಸುತ್ತಿದ್ದಾರೆ.

ಶಂಕರನಾರಾಯಣ ಪೊಲೀಸ್‌ ಠಾಣೆಯ ಪಿಎಸ್‌ಐಗಳಾದ ನಾಸಿರ್‌ ಹುಸೇನ್‌ ಹಾಗೂ ಶಂಭುಲಿಂಗಯ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ಟಾಪ್ ನ್ಯೂಸ್

Arrested: ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರ ಸೆರೆ

Arrested: ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರ ಸೆರೆ

1-foot

Kerala; ಫುಟ್‌ಬಾಲ್‌ ಪಂದ್ಯದ ವೇಳೆ ಪಟಾಕಿ ಸಿಡಿದು 50ಕ್ಕೂ ಹೆಚ್ಚು ಮಂದಿಗೆ ಗಾಯ

3-shivamogga

Shivamogga: ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ

Tragic: ಸ್ನೇಹಿತನ ಜೊತೆ ಪತ್ನಿ ಪರಾರಿ: ವಿಡಿಯೋ ಮಾಡಿ ನೇಣಿಗೆ ಶರಣಾದ ಪತಿ

Tragic: ಸ್ನೇಹಿತನ ಜೊತೆ ಪತ್ನಿ ಪರಾರಿ; ವಿಡಿಯೋ ಮಾಡಿ ನೇಣಿಗೆ ಶರಣಾದ ಪತಿ

MASIDI

Ramzan; ಆಂಧ್ರದಲ್ಲೂ ಮುಸ್ಲಿಂ ಉದ್ಯೋಗಿಗಳಿಗೆ 1 ಗಂಟೆ ಕಡಿಮೆ ಕೆಲಸ

metro

Fare hike: ಮೆಟ್ರೋ ಕಡೆಗೆ ಮುಖ ಮಾಡದ 1 ಲಕ್ಷ ಪ್ರಯಾಣಿಕರು!!

Ekanath Shindhe

Maharashtra; ಮಹಾಯುತಿಯಲ್ಲಿ ಬಿರುಕು?: ಡಿಸಿಎಂ ಏಕನಾಥ್ ಶಿಂಧೆ ಪ್ರತಿಕ್ರಿಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wedw

Udupi;ಹೋಟೆಲ್ ಮಥುರಾ ಗೋಕುಲ್: ಫೆ19 ರಿಂದ ‘ಉಡುಪಿ ಸಂಸ್ಕೃತಿ’ ಕೈಮಗ್ಗ ಮತ್ತು ಕರಕುಶಲ ಮೇಳ

Udupi: ಗೀತಾರ್ಥ ಚಿಂತನೆ-191: “ಡಿಸಿಶನ್‌ ಮೇಕರ್‌ ನೀನಲ್ಲ’ ಎಂಬ ಶ್ರೀಕೃಷ್ಣ

Udupi: ಗೀತಾರ್ಥ ಚಿಂತನೆ-191: “ಡಿಸಿಶನ್‌ ಮೇಕರ್‌ ನೀನಲ್ಲ’ ಎಂಬ ಶ್ರೀಕೃಷ್ಣ

Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣUdupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣ

Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣ

Mulki ರೈಲು ನಿಲ್ದಾಣ ಕಾಮಗಾರಿ: ಫೆ.21 ರಂದು ರೈಲು ವಿಳಂಬ

Mulki ರೈಲು ನಿಲ್ದಾಣ ಕಾಮಗಾರಿ: ಫೆ.21 ರಂದು ರೈಲು ವಿಳಂಬ

Road Mishap ಸ್ಕೂಟಿಗೆ ಗೂಡ್ಸ್‌ ರಿಕ್ಷಾ ಢಿಕ್ಕಿ; ಸವಾರ ಸಾವು

Road Mishap ಸ್ಕೂಟಿಗೆ ಗೂಡ್ಸ್‌ ರಿಕ್ಷಾ ಢಿಕ್ಕಿ; ಸವಾರ ಸಾವು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Bengaluru: ಠಾಣೆಗೆ ಸುಳ್ಳು ದೂರು ನೀಡಿದರೆ ಕಾನೂನು ಕ್ರಮ: ಬಿ.ದಯಾನಂದ್‌

Bengaluru: ಠಾಣೆಗೆ ಸುಳ್ಳು ದೂರು ನೀಡಿದರೆ ಕಾನೂನು ಕ್ರಮ: ಬಿ.ದಯಾನಂದ್‌

Arrested: ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರ ಸೆರೆ

Arrested: ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರ ಸೆರೆ

1-foot

Kerala; ಫುಟ್‌ಬಾಲ್‌ ಪಂದ್ಯದ ವೇಳೆ ಪಟಾಕಿ ಸಿಡಿದು 50ಕ್ಕೂ ಹೆಚ್ಚು ಮಂದಿಗೆ ಗಾಯ

Bengaluru: 10 ವರ್ಷ ತಲೆಮರೆಸಿಕೊಂಡಿದ್ದವ ಎಐ ಕ್ಯಾಮೆರಾದಿಂದಾಗಿ ಸೆರೆಸಿಕ್ಕ!

Bengaluru: 10 ವರ್ಷ ತಲೆಮರೆಸಿಕೊಂಡಿದ್ದವ ಎಐ ಕ್ಯಾಮೆರಾದಿಂದಾಗಿ ಸೆರೆಸಿಕ್ಕ!

3-shivamogga

Shivamogga: ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.