![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
Team Udayavani, Jan 29, 2025, 3:16 PM IST
ಸಿದ್ದಾಪುರ: ಮಾದರಿ ಸೋಲಾರ್ ಗ್ರಾಮ ಎಂದು ಘೋಷಿಸಲ್ಪಟ್ಟ ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ಹಂಚಿಕಟ್ಟೆಯಲ್ಲಿ ನೆಟ್ವರ್ಕ್ ಸಮಸ್ಯೆ ಕಾಡುತ್ತಿದೆ. ನಕ್ಸಲ್ ಪೀಡಿತವಾಗಿದ್ದ ಈ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ಪಟ್ಟಿ ದೊಡ್ಡದಿದೆ. ಕನಿಷ್ಠ ನೆಟ್‌ವರ್ಕ್ ಸಮಸ್ಯೆಯನ್ನಾದರೂ ಪರಿಹರಿಸಿ ಎನ್ನುವುದು ಜನರ ಆಗ್ರಹ.
ಕೊರೊನಾ ಅವಧಿಯಲ್ಲಿ ಆನ್‌ಲೈನ್ ಶಿಕ್ಷಣ ಘೋಷಣೆಯಾದಾಗ ಮಕ್ಕಳು ಮತ್ತು ಹೆತ್ತವರು ಐದು ಕಿ.ಮೀ. ನಡೆದು ಬೆಟ್ಟ ಹತ್ತಿ ಅಥವಾ ಅಮಾಸೆಬೈಲು ಪೇಟೆಗೆ ಬಂದು ಕನೆಕ್ಟ್ ಆಗುತ್ತಿದ್ದರು. ಈಗ ಜನರ ಬೇಡಿಕೆಯಂತೆ ಮೊಬೈಲ್ ಟವರ್ ನಿರ್ಮಾಣವಾಗಿದೆ. ಆದರೆ, ಗುಡ್ಡ ಹತ್ತುವುದು ಮಾತ್ರ ನಿಂತಿಲ್ಲ. ಯಾಕೆಂದರೆ ನಿರ್ಮಿಸಿದ ಟವರ್‌ಗೆ ಇನ್ನೂ ಕನೆಕ್ಷನ್ ಕೊಟ್ಟಿಲ್ಲ.
ಯಾವುದೇ ಕೆಲಸ ಆಗುತ್ತಿಲ್ಲ
ಹಂಚಿಕಟ್ಟೆಯಲ್ಲಿ ಉಳ್ಳೂರು- ಮಚ್ಚಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಪಡಿತರ ಕೇಂದ್ರ ಇದೆ. ಅಂಚೆ ಕಚೇರಿ ಇದೆ. ಈಗ ಸರಕಾರದ ಯೋಜನೆಗಳು, ವೈಯಕ್ತಿಕ ಸಂಪರ್ಕಗಳೆಲ್ಲವೂ ನಡೆಯುವುದು ಮೊಬೈಲ್ ಮೂಲಕವೇ. ಆದರೆ ನೆಟ್ವರ್ಕ್ ಇಲ್ಲದೆ ಎಲ್ಲವೂ ಸಮಸ್ಯೆಗೆ ಸಿಲುಕಿದೆ. ಆನ್‌ಲೈನ್ ಬ್ಯಾಂಕಿಂಗ್, ಆನ್‌ಲೈನ್ ಶಿಕ್ಷಣ, ವರ್ಕ್ ಫ್ರಂ ಹೋಮ್ ಹೀಗೆ ಹಲವು ಸೌಲಭ್ಯಗಳಿಂದ ಜನತೆ ವಂಚಿತರಾಗಿದ್ದಾರೆ.
ಹಂಚಿಕಟ್ಟೆ ಪ್ರದೇಶದಲ್ಲಿ ತೊಂಬಟ್ಟು, ಮಚ್ಚಟ್ಟು ಮತ್ತು ಅಮಾಸೆಬೈಲು ನೆಟ್ವರ್ಕ್ ಆಗಾಗ್ಗೆ ಸ್ವಲ್ಪ ಸಿಗುತ್ತಿತ್ತು. ಅದರಿಂದ ಕನಿಷ್ಠ ಕರೆ ಮಾಡಲು ಆದರೂ ಅನುಕೂಲ ಆಗುತ್ತಿತ್ತು. ಆದರೆ ಈಗ ಬಿಎಸ್‌ಎನ್‌ಎಲ್ ಟವರ್ ನಿರ್ಮಿಸಿ, 5ಜಿ ಮೇಲ್ದರ್ಜೆಗೆ ಏರಿಸಿದ ಬಳಿಕವಂತೂ ನೆಟ್ವರ್ಕ್ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಈಗ ಚೂರೇ ಚೂರು ನೆಟ್ವರ್ಕ್ ಸಹ ಸಿಗುತ್ತಿಲ್ಲ.
5 ಕಿ.ಮೀ. ದೂರ ಹೋಗಬೇಕು
ಹಂಚಿಕಟ್ಟೆ ಸುತ್ತಮುತ್ತ ಸುಮಾರು 200ಕ್ಕೂ ಹೆಚ್ಚು ಮನೆಗಳಿವೆ. 1300 ಜನಸಂಖ್ಯೆ ಇದೆ. ನಾಗರಿಕರು ನೆಟ್‌ವರ್ಕ್ ಆವಶ್ಯಕತೆಯಿದ್ದಲ್ಲಿ ಸದ್ಯ ಸುಮಾರು 5 ಕಿ.ಮೀ. ದೂರದ ಅಮಾಸೆಬೈಲು ಪೇಟೆಗೆ ಬರಬೇಕಾಗಿದೆ. ಹಲವು ವರ್ಷದಿಂದ ಜನರು ಮೊಬೈಲನ್ನು ಕೈಯಲ್ಲಿ ಎತ್ತಿ ಹಿಡಿದು ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ.
ಲಾಗಿನ್ ಆಗುವುದೇ ಕಷ್ಟ
ಪ್ರತಿನಿತ್ಯ ಡ್ನೂಟಿಗೆ ಬಂದಾಗ ಮೊದಲು ಆನ್‌ಲೈನ್ ಮೂಲಕ ಲಾಗಿನ್ ಆಗಬೇಕು. ನೆಟ್ವರ್ಕ್ ಇಲ್ಲದೆ ಸಮಸ್ಯೆಯಾಗುತ್ತಿದೆ. ವಯಸ್ಸಾದವರು ಪೋಸ್ಟ್ ಆಫೀಸ್ ಮೂಲಕ ಹಣ ಪಡೆಯಲು ಗಂಟೆಗಟ್ಟಲೆ ಕಾಯಬೇಕು.
-ಸುಕುಮಾರ ಶೆಟ್ಟಿ, ಪೋಸ್ಟ್ ಮಾಸ್ಟರ್ ಹಂಚಿಕಟ್ಟೆ
ಗಂಟೆಗಟ್ಟಲೆ ಕಾಯಬೇಕು
ನೆಟ್ವರ್ಕ್ ಇಲ್ಲದೆ ವಿದ್ಯಾರ್ಥಿಗಳಿಗೆ ಮತ್ತು ಇತರ ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ. ಪಡಿತರ ಅಕ್ಕಿ ಪಡೆಯಲು ಹಾಗೂ ಅಂಚೆ ಕಚೇರಿ ಸೌಲಭ್ಯ ಪಡೆಯಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.
-ವಿಕ್ರಮ್ ಶೆಟ್ಟಿ, ಗ್ರಾಮಸ್ಥರು ಹೊಳೆಬಾಗಿಲು
ನೆಟ್‌ವರ್ಕ್ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದೀರಾ? ಹಾಗಾದರೆ ಕನ್ನಡದಲ್ಲಿ ಟೈಪ್ ಮಾಡಿ ವಾಟ್ಸ್ಯಾಪ್ ನಂಬರ್ 6362906071ಗೆ ಹೆಸರು, ಊರು ನಮೂದಿಸಿ ಕಳುಹಿಸಿ.
-ಸತೀಶ್ ಆಚಾರ್ ಉಳ್ಳೂರು
Anandapura:ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ; ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ
Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’
ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Udupi: ಡಾ| ಟಿಎಂಎ ಪೈ ಆಸ್ಪತ್ರೆ; ಫೆ.20ರಂದು ಲಿಂಫೆಡೆಮಾ ತಪಾಸಣೆ ಶಿಬಿರ
You seem to have an Ad Blocker on.
To continue reading, please turn it off or whitelist Udayavani.