ಕಾರ್ಯಕರ್ತೆಯರ ಕೈಗೆ ಬಂದ ಪೋಷಣ್ ಅಭಿಯಾನ್ ಮೊಬೈಲ್
ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್ ಆದರು!
Team Udayavani, Nov 25, 2020, 5:23 AM IST
ಕುಂದಾಪುರ: ಕೇಂದ್ರ ಸರಕಾರ ರಾಷ್ಟ್ರೀಯ ಪೋಷಣ್ ಅಭಿಯಾನ ಯಶಸ್ವಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ನೀಡಿದ್ದು ಕುಂದಾಪುರ, ಬೈಂದೂರು ತಾಲೂಕಿನ 412 ಅಂಗನವಾಡಿಗಳ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಲಾಗಿದೆ.
ಸ್ಮಾರ್ಟ್‌ಫೋನ್
ಪೋಷಣ್ ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ, ಸರಕಾರ ಈಗಾಗಲೇ ಜಾರಿಗೊಳಿಸಿರುವ ಸ್ನೇಹ ಆ್ಯಪ್ (ಸೊಲ್ಯೂಷನ್ ಫಾರ್ ನ್ಯೂಟ್ರಿಶನ್ ಆ್ಯಂಡ್ ಎಫೆಕ್ಟಿವ್ ಹೆಲ್ತ್ ಎಕ್ಸೆಸ್) ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡಲಾಗಿದೆ.
ಕೇಂದ್ರ ಸರಕಾರ 129.7 ಕೋ.ರೂ. ನೀಡಲಿದ್ದು ಇದರಲ್ಲಿ ಶೇ.90 ಸ್ಮಾರ್ಟ್‌ಫೋನಿಗೆ, ಶೇ.10ರಷ್ಟು ತರಬೇತಿಗೆ ಖರ್ಚು. ಸ್ನೇಹ ಆ್ಯಪ್ ಪ್ರತ್ಯೇಕ, ಪೋಷಣ್ ಅಭಿ ಯಾನ ಪ್ರತ್ಯೇಕ. ಅಂಗನವಾಡಿ ಕಾರ್ಯಕರ್ತೆಯರಲ್ಲಿ ಈಗಲೂ ಗೊಂದಲವಿದೆ. ಸ್ನೇಹ ಆ್ಯಪ್‌ನಲ್ಲಿ ಅಂಗನವಾಡಿಗಳ ದಾಖಲೆ ನಿರ್ವಹಣೆ ಮಾಡಲಾಗುತ್ತದೆ. ಎಲ್‌ಜಿ ಕಂಪೆನಿಯ ಐಎಂಎಕ್ಸ್ 210 ಎಂಡಬ್ಲ್ಯು ಮೊಬೈಲ್, 10 ಸಾವಿರ ಎಂಎಎಚ್‌ನ ಪವರ್‌ಬ್ಯಾಂಕ್, 32 ಜಿಬಿ ಮೆಮರಿ ಕಾರ್ಡ್, ಸ್ಕ್ರೀನ್ ಗಾರ್ಡ್, ಮೊಬೈಲ್ ಕವರ್, ಮೊಬೈಲ್ ಪೌಚ್ ಇತ್ಯಾದಿ ಸೇರಿ ಸುಮಾರು 10 ಸಾವಿರ ರೂ. ಅಂದಾಜಿನ ವಸ್ತುಗಳನ್ನು ನೀಡಲಾಗಿದೆ.
ಪೋಷಣ್ ಅಭಿಯಾನ
ಗರ್ಭಧಾರಣೆಯಿಂದ ಹಿಡಿದು ಶಿಶು ಮತ್ತು ತಾಯಂದಿರು 1,000 ದಿನಗಳ ಕಾಲ ಉತ್ತಮ ಪೌಷ್ಟಿಕ ಆಹಾರ ಪಡೆದು, ಆರೋಗ್ಯವಂತರನ್ನಾಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಕೇಂದ್ರ ಸರಕಾರದ ಯೋಜನೆಯೇ ಪೋಷಣ್ ಅಭಿಯಾನ. ಈ ಯೋಜನೆಯಡಿ ಗರ್ಭಧಾರಣೆಯಿಂದ ಹಿಡಿದು ಶಿಶು ಮತ್ತು ತಾಯಂದಿರು 1,000 ದಿನಗಳ ಕಾಲ ಉತ್ತಮ ಪೌಷ್ಟಿಕ ಆಹಾರಸೇವನೆ ಮಾಡುವುದು, ರಕ್ತ ಹೀನತೆ, ಅತಿಸಾರ ಭೇದಿ ತಡೆಗಟ್ಟುವುದು, ಪೌಷ್ಟಿಕ ಆಹಾರ ಪೂರೈಕೆ ಮಾಡುವುದರ ಮೂಲಕ ತಾಯಿ ಮತ್ತು ಶಿಶುವಿನ ಉತ್ತಮ ಆರೋಗ್ಯ ಕಾಪಾಡುವುದು ಮುಖ್ಯ ಉದ್ದೇಶ.
ಮೊಬೈಲ್‌ನಲ್ಲೇ ದಾಖಲಾತಿ
ಡಿಸೆಂಬರ್‌ನಿಂದ ಈ ಮೊಬೈಲ್‌ಗಳ ಮೂಲಕವೇ ದಾಖಲಾತಿ ನಿರ್ವಹಣೆಯಾಗಲಿದೆ. ಆ ಬಳಿಕ ಕಾಗದ ಪತ್ರಗಳಲ್ಲಿ ದಾಖಲೆ ಬರೆದಿಡಬೇಕಾದ ಅವಶ್ಯವಿಲ್ಲ. ಗರ್ಭಿಣಿ, ಬಾಣಂತಿಯರ ಆರೋಗ್ಯ ಮಾಹಿತಿ, ಪೌಷ್ಟಿಕ ಆಹಾರ ವಿತರಣೆ ಮಾಹಿತಿ, ಅಂಗನವಾಡಿಗಳ ಮಾಹಿತಿ, ಐಎಫ್ಎ ಮಾತ್ರೆ ವಿತರಣೆ ಮಾಹಿತಿ ಇತ್ಯಾದಿಗಳು ಪೂರ್ವ ಅಳವಡಿತ ತಂತ್ರಾಂಶದ ಮೂಲಕ ತುಂಬಲಾಗುವುದು. ಇದರಿಂದಾಗಿ ಕ್ಷಣಾರ್ಧದಲ್ಲಿ ದೇಶದ ಅಷ್ಟೂ ಅಂಗನವಾಡಿಗಳ ಅಂಕಿಅಂಶದ ಮಾಹಿತಿ ಕೇಂದ್ರ, ರಾಜ್ಯ ಸರಕಾರಗಳಿಗೆ ದೊರೆಯಲಿದೆ. ಇದು ಮುಂದಿನ ಯೋಜನೆಗಳ ನಿರ್ಧಾರ, ಅನುದಾನ, ವಸ್ತುಗಳ ಬಿಡುಗಡೆಗೆ ಅನುಕೂಲವಾಗಲಿದೆ. ಯೋಜನೆ ಯಶಸ್ವಿಯಾಗಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಯೋಜನೆಗಳ ಅನುಷ್ಠಾನ ವಿಧದಲ್ಲಿ ಬೇಕಾದ ಬದಲಾವಣೆಗಳನ್ನು ತರಲು ಅನುಕೂಲವಾಗಲಿದೆ.
ವಿತರಿಸಲಾಗಿದೆ
ಸ್ಮಾರ್ಟ್ ಫೋನ್ ವಿತರಣೆಗೆ ಬಂದಿದ್ದು ಅದರಂತೆ ವಿತರಿಸಲಾಗಿದೆ. 412 ಅಂಗನವಾಡಿ ಕಾರ್ಯಕರ್ತೆಯರು , 17 ಮೇಲ್ವಿಚಾರಕರಿಗೆ ಕೊಡಲಾಗಿದ್ದು ಸಾಫ್ಟ್ವೇರ್‌ಗಳನ್ನು ಅದರಲ್ಲೆ ಅಳವಡಿಸಲಾಗಿದೆ. ಅಂಗನವಾಡಿ ಕೇಂದ್ರಗಳ ಹಾಗೂ ಪೌಷ್ಟಿಕ ಆಹಾರ, ಗರ್ಭಿಣಿ, ಬಾಣಂತಿಯರ ಕುರಿತಾದ ಮಾಹಿತಿಗಳು ಈ ಮೂಲಕ ಅಪ್‌ಡೇಟ್ ಆಗಲಿದ್ದು ರಾಷ್ಟ್ರಮಟ್ಟದಲ್ಲಿ
ತತ್‌ಕ್ಷಣ ದಾಖಲೆ ರೂಪದಲ್ಲಿ ದೊರೆಯಲಿದೆ.
-ಶ್ವೇತಾ, ಸಿಡಿಪಿಒ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.