![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 20, 2023, 6:05 AM IST
ಕುಂದಾಪುರ: ಇಲ್ಲಿನ ನಗರ ಠಾಣೆ ಹಾಗೂ ಗ್ರಾಮಾಂತರ ಠಾಣೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬಸ್ರೂರು ಸರಕಾರಿ ಪ್ರೌಢಶಾಲೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಫಿರೋಜ್ ಹಾಗೂ ಕೋಳ್ಕೆರೆ ರಸ್ತೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ರಿಯಾನ್ ಎಂಬವರು ಮದ್ಯಪಾನ ಮಾಡುತ್ತಿದ್ದು, ಅವರನ್ನು ರೌಂಡ್ಸ್‌ನಲ್ಲಿದ್ದ ಕಂಡ್ಲೂರು ಎಸ್‌ಐ ಪವನ್ ನಾಯಕ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಪುರಸಭೆ ವ್ಯಾಪ್ತಿಯ ಫೆರ್ರಿ ರಸ್ತೆ ಬಳಿಯ ಸಾರ್ವಜನಿಕ ಜಾಗದಲ್ಲಿ ಮದ್ಯಪಾನ ಮಾಡುತ್ತಿದ್ದ ದಿನೇಶ್ ಖಾರ್ವಿ ಹಾಗೂ ದೇವರಾಜ್ ಖಾರ್ವಿ ಎಂಬವರನ್ನು ಕುಂದಾಪುರ ಎಸ್‌ಐ ಪ್ರಸಾದ್ ಕುಮಾರ್ ನೇತೃತ್ವದ ತಂಡ ಬಂಧಿಸಿದೆ.
ಕುಂದಾಪುರ ಹಾಗೂ ಕಂಡ್ಲೂರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕನಸು ಹುಟ್ಟಿಸಿದ ಸಿದ್ದರಾಮಯ್ಯ ನಡೆ: ಬಾದಾಮಿಯಲ್ಲಿ ಕೈ ಕಾರ್ಯಕರ್ತರ ಒಗ್ಗಟ್ಟಿನ ಮಂತ್ರ
You seem to have an Ad Blocker on.
To continue reading, please turn it off or whitelist Udayavani.