ಗೋಪಾಡಿ-ಮೂಡುಗೋಪಾಡಿ ರಸ್ತೆಯಲ್ಲಿ ಸ್ಫೋಟದ ಸದ್ದು?
Team Udayavani, Jul 9, 2018, 11:18 AM IST
ಕೋಟೇಶ್ವರ: ಗೋಪಾಡಿಯ ತಿರುವಿನಿಂದ ಮೂಡುಗೋಪಾಡಿ ಹಾಗೂ ಹೂವಿನಕೆರೆ ರಸ್ತೆಯ ಬಳಿ ಶುಕ್ರವಾರ ಮಧ್ಯರಾತ್ರಿಯ ಅನಂತರ ಭಾರೀ ಸರಣಿ ಸ್ಫೋಟದ ಸದ್ದು ಆ ಭಾಗದ ನಿವಾಸಿಗಳಿಗೆ ಕೇಳಿ ಬಂದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ 66ರ ಮಾರ್ಗ ವಾಗಿ ಗೋಪಾಡಿಯಿಂದ ವಕ್ವಾಡಿ ಹಾಗೂ ಮೂಡುಗೋಪಾಡಿಗೆ ಸಾಗುವ ಮುಖ್ಯ ರಸ್ತೆಯ ಮೂರು ಕಡೆಗಳಲ್ಲಿ ಈ ಸ್ಫೋಟದ ಸದ್ದು ಕೇಳಿ ಬಂದಿರುವುದಾಗಿ ಅಲ್ಲಿನ ನಿವಾಸಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. ಸ್ಫೋಟ ಸದ್ದು ಕೇಳಿಬಂದ ಅನಂತರ ಎಚ್ಚೆತ್ತ ನಿವಾಸಿಗಳು ಭಯಭೀತ ರಾಗಿ ದೂರವಾಣಿಯ ಮೂಲಕ ಆಸುಪಾಸಿನವರೊಡನೆ ಅನುಭವವನ್ನು ಹಂಚಿಕೊಂಡಿದ್ದರು.
ಏನಿದು ಸದ್ದು?: ಶುಕ್ರವಾರ ರಾತ್ರಿ ಭಾರೀ ಗಾಳಿ ಮಳೆ ಇದ್ದರೂ ಪ್ರಕೃತಿಯ ವಿಕೋಪದ ಯಾವುದೇ ಹಾನಿಕರ ಘಟನೆ ವರದಿಯಾಗಿಲ್ಲ. ಹಾಗಿದ್ದಲ್ಲಿ ಈ ಸ್ಫೋಟ ಸದ್ದಿನ ಮೂಲವೇನು ಎನ್ನುವುದು ಪ್ರಶ್ನಾರ್ಥಕವಾಗಿ ಉಳಿದಿದೆ. ಇದು ಸಾರ್ವ ಜನಿಕರನ್ನು ಭಯಭೀತಿ ಗೊಳಿಸುವ ಹುನ್ನಾರವೇ ಅಥವಾ ಮೋಜಿನ ಯುವಕರ ಕುಕೃತ್ಯವೇ ಎನ್ನುವ ಸಂದೇಹವೂ ವ್ಯಕ್ತವಾಗಿದೆ. ಗೋಪಾಡಿ ಮೂಡು ಗೋಪಾಡಿ, ವಕ್ವಾಡಿ ಪರಿಸರದಲ್ಲಿ ಕಳ್ಳರ ಹಾವಳಿಯ ದೂರು ಕೇಳಿ ಬರುತ್ತಿದ್ದು, ಕಳ್ಳರ ಹಾವಳಿ ಸಹಿತ ಸ್ಫೋಟ ಸದ್ದಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM Modi: 43 ವರ್ಷದ ಬಳಿಕ ಪ್ರಧಾನಿ ಮೋದಿ ಕುವೈತ್ ಭೇಟಿ… ಇಲ್ಲಿದೆ ಎರಡು ದಿನದ ವೇಳಾಪಟ್ಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.