Maranakatte ಶ್ರೀ ಬ್ರಹ್ಮಲಿಂಗೇಶ್ವರ ದೇಗುಲ: ಸಂಭ್ರಮದ ಮಕರ ಸಂಕ್ರಮಣ ಉತ್ಸವ
Team Udayavani, Jan 14, 2025, 6:12 PM IST
ವಂಡ್ಸೆ: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದಲ್ಲಿ ಜ. 14ರಂದು ನೆರೆದ ಭಕ್ತರ ಸಮ್ಮುಖದಲ್ಲಿ ಮಕರ ಸಂಕ್ರಮಣ ಉತ್ಸವ ಸಂಭ್ರಮದಿಂದ ಜರಗಿತು.
ದೇಗುಲದ ಆನುವಂಶೀಯ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ಚಾಲನೆ ನೀಡಿದರು. ದೇವರ ಸನ್ನಿಧಿಯಲ್ಲಿ ಗಣಪತಿ ಪೂಜೆಯೊಂದಿಗೆ ಶ್ರೀ ದೇವರಿಗೆ ಮಹಾಮಂಗಳಾರತಿ ಹಾಗೂ ಕೆಂಡಸೇವೆ ನಡೆಯಿತು.
ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ್ ಶೆಟ್ಟಿ, ಉದ್ಯಮಿಗಳಾದ ಕೃಷ್ಣಮೂರ್ತಿ ಮಂಜರು, ಸತೀಶ ಕೊಠಾರಿ, ಸಿ. ರಘುರಾಮ ಶೆಟ್ಟಿ. ಸುರೇಂದ್ರ ಶೆಟ್ಟಿ, ಮಂಜಯ್ಯ ಶೆಟ್ಟಿ, ದಿನಕರ ಶೆಟ್ಟಿ, ಜಯಂತ ಶೆಟ್ಟಿ, ಆದರ್ಶ ಶೆಟ್ಟಿ, ಜಯಪ್ರಕಾಶ ಶೆಟ್ಟಿ, ಗೋವರ್ಧನ ಶೆಟ್ಟಿ, ನಾರಾಯಣ ಶೆಟ್ಟಿ, ಕೊಲ್ಲೂರು ದೇಗುಲದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ಡಾ| ಅತುಲ್ ಕುಮಾರ್ ಶೆಟ್ಟಿ, ಅರ್ಚಕ ಸುಬ್ರಹ್ಮಣ್ಯ ಭಟ್, ಚಿತ್ತೂರು ಗ್ರಾ. ಪಂ. ಅಧ್ಯಕ್ಷ ರವಿರಾಜ ಶೆಟ್ಟಿ, ಯಕ್ಷ ಹಾಗೂ ಚಿಕ್ಕು ಪಾತ್ರಿಗಳು, ಗುಡಿಕೇರಿ ಮನೆಯವರು ಉಪಸ್ಥಿತರಿದ್ದರು.
ದಾಖಲೆ ಭಕ್ತರು:-
ಕುಂದಾಪುರ, ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡದಿಂದ ಸುಮಾರು 35 ಸಾವಿರಕ್ಕೂ ಮಿಕ್ಕಿ ಭಕ್ತರು ಶ್ರೀ ದೇವರ ದರ್ಶನಕ್ಕೆ ಆಗಮಿಸಿದ್ದರು. ವಿವಿಧ ಸಂಘಟನೆಗಳು ಹಾಗೂ ಪೊಲೀಸರ ನೇತೃತ್ವದಲ್ಲಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಜ. 15, 16: ಮಂಡಲ ಸೇವೆ
ಜ. 15ರಂದು ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ, ಮಂಡಲ ಸೇವೆ ನಡೆಯಲಿದ್ದು, ಜ. 16ರಂದು ಮಹಾಮಂಗಳಾರತಿ, ಮಂಡಲ ಸೇವೆ ಹಾಗೂ ರಾತ್ರಿ 8ಕ್ಕೆ ಕಡುಬು ನೈವೇದ್ಯ ಜರಗಲಿದೆ ಎಂದು ಆನುವಂಶೀಯ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.