ಕೊಲ್ಲೂರು ಪರಿಸರದಲ್ಲಿ ಶಿಲಾಯುಗದ ಅವಶೇಷ ಪತ್ತೆ
ಮೂಕಾಸುರನ ಬೆಟ್ಟದ ಬುಡದಲ್ಲಿ ನಿಲ್ಸ್‌ಕಲ್ ಸ್ಮಾರಕ ಶಿಲೆ, ಬಾವಿ ಇನ್ನಿತರ ಕುರುಹು
Team Udayavani, Jul 20, 2020, 1:11 PM IST
ಉಡುಪಿ: ಕೊಲ್ಲೂರಿನ ಮೂಕಾಂಬಿಕೆಯ ದೇವಾಲಯಕ್ಕೆ ಸಮೀಪದಲ್ಲಿರುವ ಮೂಕಾಸುರನ ಬೆಟ್ಟದ ಬುಡದಲ್ಲಿ, ಬೃಹತ್ ಶಿಲಾಯುಗ ಕಾಲದ ನಿಲ್ಸ್‌ಕಲ್ ಸ್ಮಾರಕಶಿಲೆ, ಕಲ್ಗುಳಿ, ಮುರಕಲ್ಲಿನಲ್ಲಿ ಕೊರೆದು ಮಾಡಿರುವ ಬಾವಿ ಮತ್ತು ಮಡಕೆಯ ಅವಶೇಷಗಳು ಇತ್ತೀಚೆಗೆ ನಡೆಸಿದ ಪುರಾತತ್ವ ಅನ್ವೇಷಣೆಯಲ್ಲಿ ಪತ್ತೆಯಾಗಿವೆ ಎಂದು ಶಿರ್ವ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಸಹ ಪ್ರಾಧ್ಯಾಪಕ ಪೊ›| ಟಿ. ಮುರುಗೇಶಿ ತಿಳಿಸಿದ್ದಾರೆ.
ಕೊಲ್ಲೂರಿನ ಬೃಹತ್ ಶಿಲಾಯುಗ ನಿವೇಶನದ ಶೋಧ, ಕೊಲ್ಲೂರು ಮತ್ತು ಕೊಲ್ಲೂರಿನ ಮೂಕಾಂಬಿಕೆಯ ಪ್ರಾಚೀನತೆಯನ್ನು ಸುಮಾರು ಕ್ರಿ.ಪೂ. 1000 ವರ್ಷಗಳಷ್ಟು ಪ್ರಾಚೀನ ಪರಂಪರೆ ಎಂಬುದನ್ನು ದೃಡೀಕರಿಸಲಿದೆ. ದೇವಿ ಪುರಾಣದ ಪ್ರಕಾರ ಮೂಕಾಸುರನನ್ನು ದೇವಿ ಸಂಹರಿಸಿ ಮೂಕಾಂಬಿಕೆ ಎಂಬ ಅಭಿದಾನವನ್ನು ಪಡೆದುಕೊಂಡು ಕೊಲ್ಲೂರಿನಲ್ಲಿ ನೆಲೆಸಿದ್ದಾಳೆ. ಬಹುಶಃ ಮೂಕಾಸುರನ ಸಮಾಧಿಯ ಸಮೀಪ ಆತನ ಸ್ಮಾರಕವಾಗಿ ಈ ಶಿಲೆಯನ್ನು ನಿಲ್ಲಿಸಿರಬಹುದು.
ಕೊಲ್ಲೂರಿಗೆ ಸಮೀಪದಲ್ಲಿರುವ ಹೊಸನಗರ ತಾಲೂಕಿನ ಬೈಸೆ, ನಿಲ್ಸ್‌ಕಲ್ ಮತ್ತು ಹೆರಗಲ್‌ನಲ್ಲಿ ಸುಮಾರು 40 ನಿಲ್ಸ್‌ಕಲ್ ಮಾದರಿ ಸ್ಮಾರಕಶಿಲೆಗಳು ವಿಶೇಷವಾಗಿ ಕಂಡುಬಂದಿರುವುದನ್ನು ವಿದ್ವಾಂಸರು ಈಗಾಗಲೇ ವರದಿ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಸುಭಾಸ್‌ನಗರದ ಬಗ್ಗಡಿಕಲ್ ಸಮೀಪ 4, ನಿಟ್ಟೂರಿನ ಅಡ್ಕದಕಟ್ಟೆಯಲ್ಲಿ 1 ಹಾಗೂ ಬುದ್ಧನಜೆಡ್ಡುವಿನಲ್ಲಿ 1, ಕೊಡಗಿನ ಅರಸಿಣಗುಪ್ಪೆಯಲ್ಲಿ 1 ಹಾಗೂ ಹಾಸನದ ಅರಸೀಕೆರೆಯಲ್ಲಿ 3 ನಿಲ್ಸ್‌ಕಲ್ ಮಾದರಿ ಸ್ಮಾರಕಶಿಲೆಗಳನ್ನು ಸಂಶೋಧಿಸಿ ವರದಿ ಮಾಡಿದ್ದೇನೆ. ಉಡುಪಿ ಜಿಲ್ಲೆಯಲ್ಲಿ ಇದು 7ನೇ ಶೋಧವಾಗಿದೆ ಎಂದವರು ತಿಳಿಸಿದ್ದಾರೆ.
ನಿಲ್ಸ್‌ಕಲ್ ಎಂದರೆ ಏನು?
ಬೃಹತ್ ಶಿಲಾಯುಗ ಕಾಲದ ಸಮಾಧಿಗಳ ಸಮೀಪದಲ್ಲಿ ಮೃತ ವ್ಯಕ್ತಿಗಳ ನೆನಪಿಗಾಗಿ ನೆಟ್ಟಿರುವ ಸ್ಮಾರಕಶಿಲೆಗಳಿವು. ಸುಮಾರು 1.5 ಮೀ.ನಿಂದ 3 ಮೀ. ಎತ್ತರದವರೆಗಿನ ಕಲ್ಲುಗಳನ್ನು ಬಹುತೇಕ ಪೂರ್ವದ ದಿಕ್ಕಿಗೆ ಸ್ವಲ್ಪ ವಾಲಿದಂತೆ ನಿಲ್ಲಿಸಲಾಗಿದೆ. ನಿಲ್ಸ್‌ಕಲ್ ಹೆಸರೇ ಸೂಚಿಸುವಂತೆ ಇವು ನಿಲ್ಲಿಸಿದ ಕಲ್ಲು. ಇವು ಸುಮಾರು 2.10 ಮೀ. ಎತ್ತರವಾಗಿದ್ದು, ಬುಡದಲ್ಲಿ 0.65 ಮೀ., ತುದಿಯಲ್ಲಿ 0.55 ಮೀ. ಅಗಲವಾಗಿದೆ. ಗ್ರಾನೈಟ್ ಶಿಲೆಯನ್ನೇ ಈ ನಿಲ್ಸ್‌ಕಲ್‌ಗೆ ಬಳಸಲಾಗಿದೆ. ಬೃಹತ್ ಶಿಲಾಯುಗದ ಜನ ದಕ್ಷಿಣ ಭಾರತದಾದ್ಯಂತ ಗ್ರಾನೈಟ್ ಶಿಲೆಯನ್ನೇ ಸಮಾಧಿಗಳ ರಚನೆಗಾಗಿ ಬಳಸಿಕೊಂಡಿರುವುದು ಸಂಸ್ಕೃತಿಯ ವೈಶಿಷ್ಟ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.