ತಲ್ಲೂರು: ಬಿರುಕು ಬಿಟ್ಟ ಹೆದ್ದಾರಿ; ಏಕಮುಖ ಸಂಚಾರ
Team Udayavani, Jun 27, 2019, 5:06 AM IST
ಕುಂದಾಪುರ: ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ತಲ್ಲೂರು ಪೇಟೆಯಿಂದ ರಾಜಾಡಿ ಸೇತುವೆಯವರೆಗಿನ ರಸ್ತೆಯ ಒಂದು ಬದಿ ಕುಸಿದಿರುವುದರಿಂದ ಆ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಈಗ ತಲ್ಲೂರು – ಹೆಮ್ಮಾಡಿಯವರೆಗೆ ಒಂದೇ ಕಡೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ರಾಜಾಡಿಯ ಹಳೆಯ ಸೇತುವೆ ದುರಸ್ತಿ ಕಾರ್ಯವೂ ಪೂರ್ಣಗೊಳ್ಳದ ಹಾಗೂ ಒಂದು ಬದಿಯ ರಸ್ತೆಯೇ ಬಿರುಕು ಬಿಟ್ಟಿರುವುದರಿಂದ ಈ ಹೆದ್ದಾರಿಯಲ್ಲಿ ಸಂಚರಿಸುವುದು ಅಪಾಯ ಎನ್ನುವ ಕಾರಣಕ್ಕೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಸ್ವತಃ ಕುಂದಾಪುರ ಡಿವೈಎಸ್‌ಪಿ ಬಿ.ಪಿ. ದಿನೇಶ್ ಕುಮಾರ್ ಭೇಟಿ ನೀಡಿ ವೀಕ್ಷಿಸಿದ್ದು, ಅವರೇ ಈ ರಸ್ತೆಯಲ್ಲಿ ಸಂಚಾರ ಸಾಧ್ಯವಿಲ್ಲ. ಒಂದೇ ಮಾರ್ಗದಲ್ಲಿ ಎರಡು ಕಡೆಗಳಿಂದ ಬರುವ ವಾಹನಗಳು ತೆರಳಲು ಅನುಕೂಲ ಮಾಡಿಕೊಡ ಲಾಗಿದೆ ಎಂದವರು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಬಿರುಕು ಬಿಟ್ಟ ಬಗ್ಗೆ, ರಸ್ತೆ ಬದಿ ಹಾಕಲಾದ ಮಣ್ಣು ಕುಸಿದಿರುವ ಬಗ್ಗೆ ಜೂ. 25ರಂದು ‘ಉದಯವಾಣಿ’ಯು ‘ಅಪಾಯದಲ್ಲಿದೆ ರಾಷ್ಟ್ರೀಯ ಹೆದ್ದಾರಿ’ ಎನ್ನುವ ವಿಸ್ತೃತವಾದ ವರದಿಯನ್ನು ಪ್ರಕಟಿಸುವ ಮೂಲಕ ವಾಸ್ತವ ವಿಚಾರ ವನ್ನು ಬೆಳಕಿಗೆ ತಂದಿತ್ತು.
ಈಗ ಬಿರುಕು ಬಿಟ್ಟ ಹೆದ್ದಾರಿಗೆ ಜಲ್ಲಿ ಮಿಶ್ರಿತ ಮರಳನ್ನು ಹಾಕಿ ಮುಚ್ಚಲಾಗಿದೆ. ಇದಲ್ಲದೆ ಮಣ್ಣು ಹಾಗೂ ಬೃಹತ್ ಬಂಡೆ ಕಲ್ಲುಗಳನ್ನು ತಂದು ರಸ್ತೆ ಬದಿ ಹಾಕಲಾದ ಮಣ್ಣು ಮತ್ತಷ್ಟು ಕುಸಿಯದಂತೆ ದುರಸ್ತಿ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.