ಮೀನುಗಾರರ ಸಾಲ ಮನ್ನಾ ವಿತರಣೆಗೆ ತಾಂತ್ರಿಕ ಅಡ್ಡಿ
ಅರ್ಧಕ್ಕೂ ಹೆಚ್ಚು ಅರ್ಹರಿಗೆ ಪಾವತಿ ವಿಳಂಬ
Team Udayavani, Dec 22, 2020, 6:03 AM IST
ಕುಂದಾಪುರ: ರಾಜ್ಯ ಸರಕಾರ ಘೋಷಿಸಿದ ಮೀನುಗಾರರ ಸಾಲ ಮನ್ನಾ ಯೋಜನೆಯಡಿ ತಾಂತ್ರಿಕ ತೊಂದರೆಗಳಿಂದ ಎರಡೂ ಜಿಲ್ಲೆಗಳ 23 ಸಾವಿರ ಅರ್ಹ ಫಲಾನುಭವಿಗಳ ಪೈಕಿ ಈ ವರೆಗೆ ಕೇವಲ 11 ಸಾವಿರ ಮಂದಿಗೆ ಮಾತ್ರ ಹಣ ಪಾವತಿಯಾಗಿದೆ.
ಮೀನುಗಾರರು 2017- 18 ಮತ್ತು 2018- 19ರಲ್ಲಿ ವಾಣಿಜ್ಯ ಮತ್ತು ಗ್ರಾಮ ಅಭಿ ವೃದ್ಧಿ ಬ್ಯಾಂಕ್‌ಗಳಿಂದ ತಲಾ 50 ಸಾವಿರ ರೂ.ಗಳಂತೆ ಸ್ವಸಹಾಯ ಸಂಘಗಳ ಮೂಲಕ ಪಡೆದ ಸಾಲವನ್ನು ಮನ್ನಾ ಮಾಡಲು ಸರಕಾರ ಆದೇಶ ಹೊರಡಿಸಿತ್ತು. ನವೆಂಬರ್‌ನಿಂದ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವ ಪ್ರಕ್ರಿಯೆ ನಡೆದಿದೆ.
ಏನು ಸಮಸ್ಯೆ?
ಹಣ ಸಕಾಲದಲ್ಲಿ ಪಾವತಿ ಆಗದಿರಲು ಹಲವು ಸಮಸ್ಯೆ ಗಳು ಕಾರಣ. ಕೆಲವರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ.
ಮತ್ತೆ ಕೆಲವರ ಖಾತೆ ಖಾತೆ ಸ್ಥಗಿತಗೊಂಡಿದೆ. ಇನ್ನು ಕೆಲವರದು ಹೆಸರು ವ್ಯತ್ಯಾಸವಾಗಿದೆ. ಇಂತಹ ಇನ್ನೂ ಹಲವು ಕಾರಣಗಳಿವೆ. ಉಡುಪಿ ಯಲ್ಲಿ 4,050 ಮಂದಿಯ ಖಾತೆ ಸ್ಥಗಿತಗೊಂಡಿದ್ದರೆ, 7,300 ಮಂದಿಯ ಖಾತೆಗಳಲ್ಲಿ ಆಧಾರ್ ನೋಂದಣಿ, ಹೆಸರು ಬದಲಾವಣೆ ಗಳಾಗಿವೆ. ದಕ್ಷಿಣ ಕನ್ನಡದಲ್ಲಿ 329 ಮಂದಿಯ ಖಾತೆ ಸ್ಥಗಿತಗೊಂಡಿದ್ದರೆ, 891 ಮಂದಿಯ ಹೆಸರು ಬದಲಾವಣೆ, ಆಧಾರ್ ನೋಂದಣಿ ಆಗದಿರುವ ಸಮಸ್ಯೆಯಿದೆ.
ಈಗ ಬಾಕಿ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗದಿರುವುದರಿಂದ ಗೊಂದಲ ಸೃಷ್ಟಿ ಯಾಗಿದೆ. ಕುಂದಾಪುರ ಭಾಗ ದಲ್ಲಿ ಅಧಿಕ ಮಂದಿಗೆ ಪಾವತಿ ಬಾಕಿಯಿದ್ದು, ಮೀನುಗಾರರು ಸಹಕಾರಿ ಸಂಘಗಳು ಮತ್ತು ಬ್ಯಾಂಕ್‌ಗಳಿಗೆ ತೆರಳಿ ವಿಚಾರಿಸಿ, ಅಲವತ್ತು ಕೊಳ್ಳುತ್ತಿರುವುದು ಕಂಡುಬರುತ್ತಿದೆ.
ಮರು ಸರ್ವೇ ನಡೆಸಿ ಪರಿಶೀಲನೆ
ಈ ಗೊಂದಲ ನಿವಾರಿಸಿ ಅರ್ಹರಿಗೆ ಹಣ ಪಾವತಿಯಾ ಗುವಂತೆ ಮಾಡಲು ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಲೀಡ್ ಬ್ಯಾಂಕ್ ಮ್ಯಾನೇಜರ್, ಆ ಬ್ಯಾಂಕಿನ ಮುಖ್ಯಸ್ಥರನ್ನು ಒಳಗೊಂಡ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ಈ ಸಮಿತಿಯು ಪ್ರತೀ ಸಹಕಾರಿ ಸಂಘ ಅಥವಾ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಮರು ಸರ್ವೇ ನಡೆಸಿ, ಮತ್ತೂಮ್ಮೆ ಪರಿಶೀಲಿಸಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಸರಕಾರ ಶೀಘ್ರವಾಗಿ ಮೀನುಗಾರರ ಸಾಲ ಮನ್ನಾ ಹಣವನ್ನು ಬಿಡುಗಡೆ ಮಾಡಿದೆ. ಈಗಾಗಲೇ 60 ಕೋ.ರೂ. ಬಿಡುಗಡೆ ಮಾಡಲಾಗಿದೆ. ಆದರೆ ಕೆಲವು ತಾಂತ್ರಿಕ ತೊಂದರೆಗಳಿಂದ ಎಲ್ಲರ ಖಾತೆಗಳಿಗೂ ಸಕಾಲದಲ್ಲಿ ಹಣ ಜಮೆಯಾಗಿಲ್ಲ. ಅದನ್ನು ನಿವಾರಿಸಲು ಸಮಿತಿ ರಚಿಸಲಾಗಿದ್ದು, ಒಂದು ತಿಂಗಳೊಳಗೆ ಎಲ್ಲ ಗೊಂದಲ ನಿವಾರಣೆ ಗೊಂಡು ಬಾಕಿ ಮೀನುಗಾರರ ಖಾತೆಗಳಿಗೆ ಹಣ ಜಮೆಯಾಗಲಿದೆ.
– ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಸಚಿವರು
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
MUST WATCH
ಹೊಸ ಸೇರ್ಪಡೆ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.