Temperature Rise: ಉಷ್ಣಾಂಶ ಏರಿಕೆ ಪರಿಣಾಮ ಈಗ ಹೂವು ಬಿಡುತ್ತಿದೆ ಮಾವು
ಮಾವು, ಹಲಸು, ಗೇರು ಬೆಳೆಯಲ್ಲಿ ವ್ಯತ್ಯಯ
Team Udayavani, Apr 7, 2023, 8:20 AM IST
ಕುಂದಾಪುರ: ಬಿಸಿಲಿನ ತಾಪ ದಿನೇ ದಿನೆ ಹೆಚ್ಚಾಗುತ್ತಿದ್ದು, ಗೇರು, ಮಾವು, ಹಲಸಿನ ಬೆಳೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಕರಾವಳಿ ಭಾಗದಲ್ಲಿ ಈ ಬಾರಿ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು, ಇದರಿಂದ ಕೆಲವೆಡೆ ಮಾವು, ಗೇರು ಮರಗಳಲ್ಲಿ ಈಗ ತಡವಾಗಿ ಹೂವು ಬಿಡಲು ಆರಂಭಿಸಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು, ಮಲೆನಾಡಿನ ಶಿವಮೊಗ್ಗ ಭಾಗದಲ್ಲಿ ನವೆಂಬರ್, ಡಿಸೆಂಬರ್, ಜನವರಿ ತಿಂಗಳಲ್ಲಿ ಮಾವು, ಹಲಸು, ಗೇರು ಚಿಗುರಿ, ಹೂವು ಬಿಡುವುದು ಸಾಮಾನ್ಯ. ಆದರೆ ಹೂವು ಬಿಡುವ ಕಾಲದಲ್ಲಿ ಹೂವು ಬಿಡದೆ ತಡವಾಗಿ ಈಗ ಸೆಕೆ ಜಾಸ್ತಿ ಆಗಿರುವುದ ರಿಂದ ಹೂವು ಬಿಡಲು ಆರಂಭಗೊಂಡಿದೆ.
ಮಾವು, ಗೇರು ಈಗ ಹೂವು ಬಿಡುತ್ತಿದ್ದು, ಇದರಿಂದ ಬೆಳೆಗಾರರಿಗೆ ಏನೂ ಲಾಭವಿಲ್ಲ. ಮಳೆಗಾಲದಲ್ಲಿ ಫಸಲು ಕೈಗೆ ಬರುವುದರಿಂದ ಆಗ ಅಷ್ಟೇನೂ ಬೇಡಿಕೆಯೂ ಇರುವುದಿಲ್ಲ. ಇದರಿಂದ ರೈತರಿಗೆ ನಷ್ಟ. ಬೆಳಗ್ಗೆ ಇಬ್ಬನಿ ಬೀಳುತ್ತಿರುವುದರಿಂದ ಹೂವು ಎಲ್ಲ ಕರಟಿ ಹೋಗುತ್ತಿದೆ. ಮಧ್ಯಾಹ್ನ ಜಾಸ್ತಿ, ರಾತ್ರಿ ಕಡಿಮೆ ಯಾಗುತ್ತಿದೆ. ಬೆಳಗ್ಗೆ ಮತ್ತೂ ಕನಿಷ್ಠ ಉಷ್ಣಾಂಶವಿದೆ.
ಮಧ್ಯಾಹ್ನ ಮತ್ತೆ ಗರಿಷ್ಠ ಉಷ್ಣಾಂಶವಿದ್ದು, ಇದು ಎಲ್ಲ ರೀತಿಯ ಬೆಳೆಗಳಿಗೆ ಪರಿಣಾಮ ಬೀಳುತ್ತದೆ ಎನ್ನುವುದಾಗಿ ಕೃಷಿಕರಾದ ಚಂದ್ರಶೇಖರ್ ಉಡುಪ ಕೆಂಚನೂರು ಹೇಳಿದ್ದಾರೆ.
ಮುಂದಿನ ಸೀಸನ್‌ಗೂ ತೊಂದರೆ
ಈಗ ಹೂವು ಬಿಡುತ್ತಿರುವುದು ತುಂಬಾ ತಡವಾಗುತ್ತಿದೆ. ಉಷ್ಣಾಂಶ ಏರಿಕೆಯಿಂದಾಗಿ ವಾತಾವರಣ ತುಂಬಾ ಡ್ರೈ ಆಗುತ್ತಿದೆ. ಅದರಿಂದ ಈಗ ಹೂವು ಬಿಡುತ್ತಿದೆ. ಇದು ಬರುವ ವರ್ಷದ ಹೂವು ಈಗ ಬರುತ್ತಿದೆ. ಮುಂದಿನ ವರ್ಷದ ಸೀಸನ್‌ಗೂ ಇದರಿಂದ ವ್ಯತ್ಯಯವಾಗಲಿದೆ.
– ಡಾ| ಧನಂಜಯ, ಹಿರಿಯ ಕೃಷಿ ವಿಜ್ಞಾನಿ, ಕೆವಿಕೆ ಬ್ರಹ್ಮಾವರ
ಈಗ ಚಳಿ, ಸೆಖೆ ಹೀಗೆ ಪ್ರತಿಕೂಲ ವಾತಾವರಣವಿರುವುದರಿಂದ ಈ ರೀತಿಯಾಗುತ್ತದೆ ಕೆಲವೊಮ್ಮೆ. ಇದಲ್ಲದೆ ಈಗ ಅಕ್ಟೋಬರ್, ನವೆಂಬರ್‌ವರೆಗೂ ನಿರಂತರ ಮಳೆಯಾಗಯಾತ್ತಿದೆ. ಇದರಿಂದ ಹೂವು ಬಿಡುವ ಪ್ರಕ್ರಿಯೆ ವಿಳಂಬವಾಗುತ್ತದೆ. ಚಳಿ ಇರುವುದರಿಂದ ಸೂಕ್ತವಾಗಿದ್ದರೂ, ಮಧ್ಯಾಹ್ನದ ವೇಳೆಗೆ ಉಷ್ಣಾಂಶ ಜಾಸ್ತಿಯಾಗುವುದರಿಂದ ಸಮಸ್ಯೆಯಾಗಬಹುದು. ಡ್ರೆ„ ವಾತಾವರಣವಿದೆ.
– ಡಾ| ಚೈತನ್ಯ ಎಸ್., ತೋಟಗಾರಿಕಾ ವಿಜ್ಞಾನಿ
ಅಡಿಕೆಗೆ ಜೇಡ ನುಸಿ ಬಾಧೆ: ಮುಂಜಾಗ್ರತೆಯೇ ಪರಿಹಾರ
ಕಾರ್ಕಳ: ವಿಪರೀತ ಸೆಕೆಯ ಪರಿ ಣಾಮ ಅಡಿಕೆ ಕೃಷಿಗೂ ತಟ್ಟಿದ್ದು, ಅಡಿಕೆ ಹಿಂಗಾರದಿಂದ ಸಣ್ಣ -ಸಣ್ಣ ಅಡಿಕೆ ಉದುರು ತ್ತಿರುವುದು ಸಾವಿರಾರು ಮಂದಿ ಅಡಿಕೆ ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ. ವಿವಿಧ ಭಾಗಗಳ ಅಡಿಕೆ ಕೃಷಿ ತೋಟ ಗಳಲ್ಲಿ ಜೇಡ ನುಸಿ ಬಾಧೆ ಕಂಡು ಬಂದಿದೆ. ಜೇಡ ನುಸಿಗಳ ನಿಯಂತ್ರಣಕ್ಕೆ ರೈತರು ಪ್ರಮುಖವಾಗಿ ಸಾಕಷ್ಟು ನೀರಾವರಿ ಸೌಲಭ್ಯ ಒದಗಿಸುವುದು ಅಗತ್ಯ. ಬಾಧೆ ನಿಯಂ ತ್ರಣಕ್ಕೆ ನೀರಿನ ಕೊರತೆಯೂ ಅಡ್ಡಿ ಯಾಗಿದೆ. ಹೆಚ್ಚು ಬಾಧೆಗೆ ಒಳಗಾದ ಗರಿ ಗಳನ್ನು ಕತ್ತರಿಸುವುದರೊಂದಿಗೆ ಕೀಟ ನಾಶಕ ಗಳ ಸಿಂಪಡಣೆ ಕೈಗೊಳ್ಳಬಹುದು.
ಬಾಧೆ ಕಡಿಮೆ ಇರುವಲ್ಲಿ ಬೇವಿನ ಎಣ್ಣೆಯನ್ನು 15 ದಿನಗಳ ಅಂತರದಲ್ಲಿ ಸಿಂಪಡಿಸಬಹುದು. ತೀವ್ರ ಬಾಧೆ ಇರುವಲ್ಲಿ ಇಥಿಯಾನ್/ ಪ್ರೋವಾಗ್ಲೆìಟ್ ಅಥವಾ ಸ್ಪರೋಮ ಸಿಫನ್ ಔಷಧಗಳನ್ನು ಲೀ. ನೀರಿಗೆ 2 ಎಂಎಲ್ ಬೆರೆಸಿ ಗರಿಗಳ ತಳಭಾಗಕ್ಕೆ ಸಿಂಪಡಿಸಬೇಕು. 15 ದಿನ ಅಂತರದಲ್ಲಿ ಮತ್ತೂಮ್ಮೆ ಸಿಂಪಡಿಸಬೇಕು ಎನ್ನು ವುದು ತೋಟಗಾರಿಕೆ ಇಲಾಖೆಯ ಹಿ. ಸಹಾಯಕ ನಿರ್ದೇಶಕ ಶ್ರೀನಿವಾಸ ಬಿ.ವಿ. ಅವರ ಸಲಹೆಯಾಗಿದೆ.
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.