ಕೋಟೆರಾಯನ ಬೆಟ್ಟ ಕುಸಿತ; 3 ಕಿ.ಮೀ ದೂರ ಜರಿದ ಗುಡ್ಡ; ಹಳ್ಳ ನಿರ್ಮಾಣ
Team Udayavani, Sep 22, 2020, 1:19 AM IST
ಸಿದ್ದಾಪುರ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ರವಿವಾರ ರಾತ್ರಿ ಕೋಟೆರಾಯನ ಬೆಟ್ಟ ಕುಸಿದು ಘಟ್ಟದ ಪರಿಸರದಲ್ಲಿ ಆತಂಕಕ್ಕೆ ಕಾರಣವಾಗಿವೆ. ಪಶ್ಚಿಮ ಘಟ್ಟದ ಮಧ್ಯಭಾಗದಿಂದ ಸುಮಾರು 3 ಕಿ.ಮೀ. ತನಕ ಗುಡ್ಡ ಜರಿದು ಹಳ್ಳ ನಿರ್ಮಾಣಗೊಂಡಿದೆ.
ಕೋಟೆರಾಯನ ಬೆಟ್ಟವು ಉಡುಪಿ ಮತ್ತು ಶಿವಮೊಗ್ಗ ಗಡಿ ಭಾಗದಲ್ಲಿರುವ ದುರ್ಗಮವಾದ ಕಾಡಿನ ಪ್ರದೇಶವಾಗಿದೆ. ಮಡಾಮಕ್ಕಿಯಿಂದ 5 ಕಿ.ಮೀ. ಮತ್ತು ಶೇಡಿಮನೆ ಗ್ರಾಮದ ಅಗಳಿಬೈಲಿನಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಬೆಟ್ಟದ ಬುಡದಲ್ಲಿ ಮನ್ನಾಡಿ ಮತ್ತು ಅಗಳಿಬೈಲು ಹಳ್ಳಿಗಳಿವೆ. ಗುಡ್ಡದ ಮಣ್ಣು ಮನ್ನಾಡಿಯ ತನಕ ಜರಿದು ಬಂದಿದೆ. ಇನ್ನಷ್ಟು ಕುಸಿತ ಸಂಭವಿಸಿದರೆ ಮನ್ನಾಡಿ ಭಾಗದ ಸುಮಾರು 50 ಮನೆಗಳಿಗೆ ಹಾಗೂ ಕೃಷಿ ಭೂಮಿ ಮತ್ತು ತೋಟಗಳಿಗೆ ಹಾನಿಯಾಗುವ ಸಾಧ್ಯತೆಗಳು ಇವೆ.
ಬೆಟ್ಟದ ಮೇಲೆ ಕೋಟೆರಾಯನ ವಿಗ್ರಹ, ದೇವಸ್ಥಾನ, ಕೋಟೆಗಳು ಮುಂತಾದ ಕುರುಹುಗಳಿವೆ. ಹಿಂದಿನ ಕಾಲದಲ್ಲಿ ವಾಹನಗಳ ಸಂಪರ್ಕ ವ್ಯವಸ್ಥೆ ಇಲ್ಲದ ಕಾಲದಲ್ಲಿ ಘಟ್ಟದ ಮೇಲಿನವರು ಹಾಗೂ ಕೆಳಗಿನವರು ಸಂಪರ್ಕಿಸುವ ಕಾಲು ದಾರಿ ಇದಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅನೇಕ ಕುರುಹುಗಳು ಇಲ್ಲಿವೆ. ಕುಸಿತದಿಂದ ಐತಿಹಾಸಿಕ ಕುರುಹುಗಳಿಗೆ ಹಾಗೂ ದೇವಸ್ಥಾನಕ್ಕೆ ಹಾನಿ ಸಂಭವಿಸಿಲ್ಲ. ಕೋಟೆರಾಯನ ಬೆಟ್ಟದಲ್ಲಿ ಹಿಂದೆ ಢಕ್ಕೆಬಲಿ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ರಿಕ್ಷಾದಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.