ಲೋವೋಲ್ಟೆಜ್‌ನಿಂದಾಗಿ ಪಂಪ್‌ಸೆಟ್‌ ಬಳಕೆಗೆ ಸಮಸ್ಯೆ: ಕೃಷಿ ನಾಶ

 ಎಲ್ಲೂರಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ವಿದ್ಯುತ್‌ ಸಬ್‌ಸ್ಟೇಷನ್‌ ಬಳಕೆಗೆ ಅಡ್ಡಿ ಆತಂಕ

Team Udayavani, Dec 8, 2021, 5:41 PM IST

ಲೋವೋಲ್ಟೆಜ್‌ನಿಂದಾಗಿ ಪಂಪ್‌ಸೆಟ್‌ ಬಳಕೆಗೆ ಸಮಸ್ಯೆ: ಕೃಷಿ ನಾಶ

ಕೊಲ್ಲೂರು : ಹಾಲ್ಕಲ್‌ ಸನಿಹದ ಎಲ್ಲೂರಿನಲ್ಲಿ 10 ಕೋಟಿ ರೂ. ಮಿಕ್ಕಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 33 ಕೆ.ವಿ. ಸಾಮರ್ಥ್ಯದ ವಿದ್ಯುತ್‌ ಉಪಕೇಂದ್ರ ಕಳೆದ ಎರಡು ವರ್ಷಗಳಿಂದ ತಾಂತ್ರಿಕ ಕಾರಣಗಳಿಂದ ತಟಸ್ಥ ಗೊಂಡಿರುವುದು ಲೋವೋಲ್ಟೆಜ್‌ನಿಂದ ಬಳಲುತ್ತಿರುವ ಗ್ರಾಮಸ್ಥರನ್ನು ಸಂಕಷ್ಟಕ್ಕೀಡು ಮಾಡಿದೆ.

ಲೋವೋಲ್ಟೆಜ್‌ ಸಮಸ್ಯೆ
ಕೊಲ್ಲೂರು, ಜಡ್ಕಲ್‌, ಮುದೂರು, ಯಳಜಿತ್‌, ಗೋಳಿಹೊಳೆ, ಇಡೂರು, ಹೊಸೂರು ಗ್ರಾಮ ನಿವಾಸಿಗಳಿಗೆ ಬಹಳಷ್ಟು ಉಪಯೋಗವಾಗುವುದೆಂಬ ನಿರೀಕ್ಷೆಯಿಂದ 2018ರ ಜನವರಿಯಲ್ಲಿ ಸಬ್‌ಸ್ಟೇಶನ್‌ ನಿರ್ಮಾಣ ಮಾಡ ಲಾಗಿತ್ತು. ಆದರೆ ಇದು ಇನ್ನೂ ಕಾರ್ಯಾ ರಂಭಿ ಸದಿರುವುದಿರು ವು ದ ರಿಂದ ವಿದ್ಯುತ್‌ ಇಲ್ಲದೇ ಈ ಭಾಗದ ಕೃಷಿಕ ಕೃಷಿ ಕಾರ್ಯಕ್ಕೆ ತೊಡ ಕಾ ಗಿದೆ. ಸುಮಾರು 1,745 ಮಿಕ್ಕಿ ಪಂಪ್‌ಸೆಟ್‌ಗಳ ಬಳಕೆ ಇಲ್ಲಿ ಇದ್ದು, ಲೋ ವೋಲ್ಟೆಜ್‌ ಸಮಸ್ಯೆಯಿಂದಾಗಿ ಅದನ್ನು ಬಳಸಲಾಗದೆ ಬವಣಿಸುವಂತಾಗಿದೆ.

ವಿದ್ಯಾರ್ಥಿಗಳಿಗೆ ತೊಂದರೆ
ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಈ ಭಾಗದ ವಿವಿಧ ಗ್ರಾಮಗಳ ವಿದ್ಯಾರ್ಥಿಗಳಿಗೆ ವಿದ್ಯುತ್‌ ಪ್ರಸರಣದಲ್ಲಿನ ಅಡಚಣೆಯಿಂದಾಗಿ ರಾತ್ರಿ ವೇಳೆಯಲ್ಲಿ ಪರೀಕ್ಷೆ ತಯಾರಿಗೆ ಬಹಳಷ್ಟು ತೊಂದರೆಯಾಗಿದೆ.

ಮನವಿ
ಅರಣ್ಯ ಇಲಾಖೆ, ಇಂಧನ ಸಚಿವರು, ಲೋಕಸಭೆ ಸದಸ್ಯ, ಶಾಸಕರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿ ಎದುರಾಗಿರುವ ಲೋವೋಲ್ಟೆಜ್‌ ಸಮಸ್ಯೆ ಬಗೆ ಹರಿಸುವಂತೆ ಆಗ್ರ ಹಿಸಿದ್ದರೂ, ಈವರೆಗೆ ಪರಿಹಾರ ದೊರಕಿಲ್ಲ.

ಮಾವಿನಕಾರು ಬಾವಡಿಯಲ್ಲಿ ಸಂಪರ್ಕ
ಅಭಯಾರಣ್ಯದ ನಡುವಿನ ಮಾವಿನಕಾರು ಹಾಗೂ ಬಾವಡಿ ಪ್ರದೇಶದಲ್ಲಿ ವಿದ್ಯುತ್‌ ಕಂಬ ತಂತಿ ಸಹಿತ ವಿದ್ಯುದೀಕರಣಕ್ಕೆ ಅವಕಾಶ ನೀಡಲಾ ಗಿದೆ. ಹಾಗಿ ರು ವಾಗ ಏಳೆಂಟು ಗ್ರಾಮ ನಿವಾಸಿಗಳಿಗೆ ಉಪಯೋಗ ವಾಗಲಿರುವ ಅತೀ ಅಗತ್ಯದ 10 ಕೋಟಿ ರೂ. ವೆಚ್ಚದ ವಿದ್ಯುತ್‌ ಸಬ್‌ಸ್ಟೇಷನ್‌ಗೆ ಕಾಲ್ತೋಡು ಬಳಿ ತಂತಿ ಜೋಡಣೆಗೆ ಯಾಕೆ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ ಎಂಬು ದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ಮುಖ್ಯಮಂತ್ರಿಯ ಕಚೇರಿಯಲ್ಲಿ ಕಡತ?
ಹತ್ತು ಹಲವು ತಾಂತ್ರಿಕ ಸಮಸ್ಯೆಗಳ ನಡುವೆ ಸಬ್‌ಸ್ಟೇಷನ್‌ ಆರಂಭಕ್ಕೆ ಅನುಮತಿಯ ಕಡತ ಮುಖ್ಯಮಂತ್ರಿಯ ಕಚೇರಿಯಲ್ಲಿದ್ದು, ಅಲ್ಲಿ ಗ್ರೀನ್‌ ಸಿಗ್ನಲ್‌ ಲಭಿಸಿದಲ್ಲಿ ಅತೀ ಶೀಘ್ರ ಲೋವೋಲ್ಟೆಜ್‌ನಿಂದ ಮುಕ್ತಿ ಕಾಣುವ ಭಾಗ್ಯ ಈ ಭಾಗದ ನಿವಾಸಿ ಗಳಿಗೆ ಸಿಗಬಹುದಾಗಿದೆ.

ಕಾಲ್ತೋಡು ಬಳಿ ತಾಂತ್ರಿಕ ಸಮಸ್ಯೆ
ಕಾಲ್ತೋಡಿನ 3 ಕಿ.ಮೀ ವ್ಯಾಪ್ತಿಯ ಅಭಯಾರಣ್ಯದ ದಾರಿಯ ನಡುವೆ ವಿದ್ಯುತ್‌ ತಂತಿಗಳ ಜೋಡಣೆಗೆ ಆಕ್ಷೇಪ ವ್ಯಕ್ತಪಡಿಸಿರುವ ಅರಣ್ಯ ಇಲಾಖೆಯ ನೀತಿ ಕಳೆದ ಕೆಲವು ವರ್ಷಗಳಿಂದ ವಿದ್ಯುತ್‌ ಸಂಪರ್ಕಕ್ಕೆ ತೊಡಕು ಉಂಟುಮಾಡಿತ್ತು. ದೀರ್ಘ‌ಕಾಲದ ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ. ಮೆಸ್ಕಾಂ, ಗ್ರಾಮಸ್ಥರ ಮನವಿಗೆ ಅರಣ್ಯ ಇಲಾಖೆಯ ಕಾನೂನು ಚರ್ಚೆಗೆ ಗ್ರಾಸವಾಗಿದೆ. ಟಿ.ಸಿ. ಹಾಕಿ 2 ವರ್ಷ ಕಳೆದರೂ ತಂತಿ ಜೋಡಣೆಯಾಗದಿರುವುದು ಕೃಷಿಕರಲ್ಲಿ ನಿರಾಸೆ ಉಂಟುಮಾಡಿದೆ.

ಗೊಂದಲಕ್ಕೆ ಕಾರಣ
ಮೆಸ್ಕಾಂ ಇಲಾಖೆಯಿಂದ ಎಲ್ಲೂರಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿದ್ಯುತ್‌ ಸಬ್‌ ಸ್ಟೇಷನ್‌ ಬಳಕೆಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಅರಣ್ಯ ಇಲಾಖೆಯ ತಾಂತ್ರಿಕ ಸಮಸ್ಯೆ ಗೊಂದಲಕ್ಕೆ ಕಾರಣವಾಗಿದೆ.
– ರಾಕೇಶ, ಮೆಸ್ಕಾಂ, ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌.

ರೈತರ ಪರವಾಗಿ ಮನವಿ
ಗ್ರಾಮೀಣ ಪ್ರದೇಶದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಲಿರುವ ಪೂರ್ಣಗೊಂಡ ವಿದ್ಯುತ್‌ ಸಬ್‌ಸ್ಟೇಷನ್‌ ಬಳಕೆಗೆ ಎದುರಾಗಿರುವ ತಾಂತ್ರಿಕ ಸಮಸ್ಯೆ ನಿಭಾಯಿಸುವಂತೆ ಸಂಬಂಧಪಟ್ಟ ಸಚಿವರಿಗೆ ರೈತರ ಪರವಾಗಿ ಮನವಿ ಸಲ್ಲಿಸಲಾಗಿದೆ.
 - ನಾರಾಯಣ ಶೆಟ್ಟಿ , ಕೃಷಿಕ ಹಾಗೂ ಜಡ್ಕಲ್‌ ಗ್ರಾ.ಪಂ. ಸದಸ್ಯ

– ಡಾ| ಸುಧಾಕರ ನಂಬಿಯಾರ್‌

ಟಾಪ್ ನ್ಯೂಸ್

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ

siddaramaiah

MUDA ಹಗರಣ: ನ.23ಕ್ಕೆ ಸಿಎಂ ಮೇಲ್ಮನವಿ ವಿಚಾರಣೆ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.