ನಗರ ಯೋಜನ ಪ್ರಾಧಿಕಾರದ ಮಾಸ್ಟರ್ ಪ್ಲ್ಯಾನ್ ಇನ್ನೂ ಇಲ್ಲ!
2009ರಲ್ಲಿ ಯೋಜನ ಪ್ರಾಧಿಕಾರ ರಚನೆ, 13 ವರ್ಷ ಕಳೆದರೂ ನಡೆಯದ ಮಹಾಯೋಜನೆ
Team Udayavani, Jan 22, 2022, 7:27 PM IST
ಕುಂದಾಪುರ: ಇಲ್ಲಿ ನಗರ ಯೋಜನ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು 13 ವರ್ಷಗಳಾದರೂ ನಗರದ ಸಮಗ್ರ ನಕ್ಷೆ ಮಹಾಯೋಜನೆ ಮಾಸ್ಟರ್ ಪ್ಲ್ಯಾನ್ ಇನ್ನೂ ಅಂತಿಮವಾಗಿಲ್ಲ. ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ಕಟ್ಟಡ ಕಟ್ಟುವವರಿಗೆ ನಿರಾಕ್ಷೇಪಣ ಪತ್ರ, ಭೂ ಪರಿವರ್ತನೆಗೆ ಅನುಮತಿ ದೊರೆಯುತ್ತಿಲ್ಲ. ಇದರಿಂದ ಕುಂದಾಪುರ ಪುರಸಭೆ ವ್ಯಾಪ್ತಿ, ಹಂಗಳೂರು ಪಂಚಾಯತ್ ವ್ಯಾಪ್ತಿಯ ವರಿಗೆ ತೊಂದರೆಯಾಗಿದೆ.
ಮಾಸ್ಟರ್ ಪ್ಲ್ಯಾನ್
ಸ್ಥಳೀಯ ಯೋಜನ ಪ್ರದೇಶ ಘೋಷಣೆ ಗೊಂಡಿರುವ ಸಂಬಂಧಿಸಿದ ಸ್ಥಳೀಯ ಯೋಜನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆಯಾಯ ಯೋಜನ ಪ್ರಾಧಿಕಾರಗಳ ಮಹಾ ಯೋಜನೆಯನ್ನು ತಯಾರಿಸಿ ಸರಕಾರದ ಅನುಮೋದನೆ ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಯೋಜನ ಪ್ರದೇಶಗಳ ಸದಸ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ. ಕುಂದಾಪುರದಿಂದ ಮಾಸ್ಟರ್ ಪ್ಲ್ಯಾನ್ ಸಲ್ಲಿಸಲಾಗಿದ್ದರೂ ಸರಕಾರದಿಂದ ಇನ್ನೂ ಅಂತಿಮ ಮೊಹರು ಬಿದ್ದಿಲ್ಲ.
ಏನೇನಿರುತ್ತದೆ?
ಮಾಸ್ಟರ್ ಪ್ಲ್ಯಾನ್ ನಲ್ಲಿ ಏನೇನಿರುತ್ತದೆ ಎಂದರೆ ನಗರದ ಸಮಗ್ರ ಮಾಹಿತಿ ಇರುತ್ತದೆ. ವಸತಿ, ವಾಣಿಜ್ಯ, ಕೈಗಾರಿಕೆ, ಆಟದ ಮೈದಾನ, ಸಾರ್ವಜನಿಕ, ಅರೆ ಸಾರ್ವಜನಿಕ, ಉದ್ಯಾನವನ, ಬಯಲು ಪ್ರದೇಶ, ಸಾರಿಗೆ ಸಂವಹನ, ಖಾಲಿ ಪ್ರದೇಶ, ಕೆರೆ, ಕೃಷಿ ಭೂಮಿ ಹೀಗೆ ಸಮಗ್ರ ಮಾಹಿತಿ ಇರುತ್ತದೆ. ಇದರ ಅನ್ವಯ ಮುಂದಿನ ಯೋಜನೆಗಳನ್ನು ಸಿದ್ಧಪಡಿಸಲು, ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗುತ್ತದೆ.
ಸ್ಥಗಿತ ಸ್ಥಳೀಯ ಯೋಜನ ಪ್ರದೇಶ ಘೋಷಣೆ ಗೊಂಡು ಮಹಾಯೋಜನೆ ತಯಾರಿಸದೇ ಇರುವ ಪ್ರಗತಿಯಲ್ಲಿರುವ ಪ್ರದೇಶಗಳಲ್ಲಿ ಮಹಾಯೋಜನೆ ಅಂತಿಮ ಅನುಮೋದನೆಯಾಗುವವರೆಗೆ ಭೂ ಪರಿವರ್ತನೆಗೆ ನಿರಾಕ್ಷೇಪಣ ಪತ್ರ ನೀಡುವುದನ್ನು ಸರಕಾರ 2 ವರ್ಷಗಳ ಹಿಂದೆ ನಿಲ್ಲಿಸಿದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನ ಕಾಯ್ದೆ 1961ರಡಿಯಲ್ಲಿ ರಾಜ್ಯದಲ್ಲಿ ಹಲವಾರು ಸ್ಥಳೀಯ ಯೋಜನ ಪ್ರದೇಶಗಳನ್ನು ಘೋಷಿಸಲಾಗಿದೆ. ಹೊಸದಾಗಿ ಸ್ಥಳೀಯ ಯೋಜನ ಪ್ರದೇಶಗಳನ್ನು ಆಗಿಂದಾಗ್ಗೆ ಘೋಷಿಸಲಾಗುತ್ತದೆ. ರಾಜ್ಯದಲ್ಲಿ ಸ್ಥಳೀಯ ಯೋಜನ ಪ್ರದೇಶ ಘೋಷಣೆಗೊಂಡು ಮಹಾಯೋಜನೆ ತಯಾರಿಸದೇ ಇರುವ ಪ್ರದೇಶಗಳಲ್ಲಿ ಮಹಾಯೋಜನೆ ಅಂತಿಮ ಅನುಮೋದನೆಯಾಗುವವರೆಗೆ ಭೂ ಪರಿವರ್ತನೆಗೆ ನಿರಾಕ್ಷೇಪಣ ಪತ್ರ ನೀಡುವುದನ್ನು ನಿಲ್ಲಿಸಲು ಸೂಚಿಸಲಾಗಿದೆ.
ಬಾಕಿ
ಸಾರ್ವಜನಿಕರಿಗೆ ಆಗುವ ಅನನು ಕೂಲತೆಯನ್ನು ತಡೆಯಲು ಆದ್ಯತೆ ಮೇಲೆ ಸ್ಥಳೀಯ ಯೋಜನ ಪ್ರದೇಶಗಳು ಮಹಾ ಯೋಜನೆ ತಯಾರಿಸಿ, ಯೋಜನ ಪ್ರಾಧಿಕಾರ ರಚನೆಯಾದ ವರ್ಷಗಳೊಳಗೆ ಮಹಾಯೋಜನೆಯನ್ನು ಸರಕಾರದ ಅನು ಮೋದನೆಗೆ ಸಲ್ಲಿಸಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ನಿಯಮ ಇದೆ. ಆದರೆ ಪಾಲನೆ ಮಾತ್ರ ಆಗುತ್ತಿಲ್ಲ ಎನ್ನುವುದು ಅಷ್ಟೇ ಸತ್ಯ. ಕೆಲವು ಪ್ರಾಧಿಕಾರಿಗಳು ಮಾಡುವುದಿಲ್ಲ, ಪ್ರಾಧಿಕಾರ ಮಾಡಿದ್ದನ್ನು ಸರಕಾರ ಸಕಾಲದಲ್ಲಿ ಅನುಮೋದಿಸುವುದಿಲ್ಲ ಎಂದಾಗಿದೆ.
ಯಾಕಾಗಿ?
ಮಹಾಯೋಜನೆ ತಯಾರಿಸದೆ ಇರುವ, ಪ್ರಗತಿಯಲ್ಲಿರುವ ಪ್ರದೇಶಗಳಿಗೆ ಭೂ ಪರಿವರ್ತನೆಗೆ ಅವಕಾಶ ನೀಡಿದರೆ, ಹೊಸ ಅಭಿವೃದ್ಧಿಗಳಿಗೆ ಅನುಮತಿ ತಡೆಯದೆ ಇದ್ದಲ್ಲಿ ಮಹಾಯೋಜನೆಯ ತಯಾರಿಗೆ ತೊಂದರೆಯಾಗುತ್ತದೆ. ಮಹಾಯೋಜನೆ ಅಂತಿಮ ಅನುಮೋದನೆಯಾಗುವವರೆಗೆ ಭೂ ಪರಿವರ್ತನೆಗೆ ನಿರಾಕ್ಷೇಪಣ ಪತ್ರ ನೀಡುವುದು ಸೂಕ್ತವಲ್ಲ ಎಂದು 15.7.2019ರಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನೂರಾರು ಮಂದಿ ನಿರಾಕ್ಷೇಪಣ ಪತ್ರ ದೊರೆಯದೆ ಅರ್ಜಿ ಸಲ್ಲಿಸಿ ಬಾಕಿಯಾಗಿದ್ದಾರೆ.
ವಾರದೊಳಗೆ ಅನುಮತಿ
ಈ ಸಮಸ್ಯೆ ಕುರಿತು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಸರಕಾರದ ಗಮನ ಸೆಳೆದಿದ್ದು ನಿರಾಕ್ಷೇಪಣ ಪತ್ರ ನೀಡುವಂತೆ ವಾರದೊಳಗೆ ಸೂಚನೆ ಬರಲಿದೆ. ಮಹಾಯೋಜನೆ ಸರಕಾರಕ್ಕೆ ಕಳುಹಿಸಿದ್ದು ಅನುಮತಿ ದೊರೆತಿಲ್ಲ. ಹಾಗಿದ್ದರೂ ಎನ್‌ಒಸಿ ನೀಡಲು ತೊಂದರೆಯಾಗದಂತೆ ಮೌಖಿಕ ಆದೇಶ ಬಂದಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು.
-ವಿಜಯ್ ಎಸ್. ಪೂಜಾರಿ,
ಅಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರ, ಕುಂದಾಪುರ
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಭೇಟಿ
Kundapura: ಬಾವಿಗೆ ಬಿದ್ದು ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.