ಸಿದ್ದಾಪುರ: ಉಳ್ಳೂರು ಗ್ರಾಮದಲ್ಲಿ ಬೀಸಿದ ಸುಂಟರಗಾಳಿ… 50 ಲಕ್ಷಕ್ಕೂ ಹೆಚ್ಚು ಹಾನಿ
Team Udayavani, Aug 2, 2023, 12:59 PM IST
ಸಿದ್ದಾಪುರ: ಉಳ್ಳೂರು -74 ಗ್ರಾಮದ ಮಧುರಬಾಳು, ಮತ್ಕೋಡು, ಹೊಂಡದಗದ್ದೆ, ಅರ್ಜಿಲ್ ಪ್ರದೇಶದಲ್ಲಿ ಬೆಳಗಿನ ಜಾವಾ 3ಗಂಟೆ ಸಮಯದಲ್ಲಿ ಭಾರೀ ಸುಂಟರಗಾಳಿ ಬಿಸಿ ಅಪಾರ ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ.
ಸುಂಟರಗಾಳಿಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಅಡಿಕೆ ಮರ, ನೂರಕ್ಕೂ ಹೆಚ್ಚು ತೆಂಗು, ಬಾಳೆ, ಗೇರು, ಸಾಗುವಾನಿ, ಸೇರಿದಂತೆ ಅಪಾರ ಕೃಷಿ ಹಾನಿ. 4 ಮನೆಗಳು ಭಾಗಶ ಹಾನಿಯಾಗಿದ್ದು ಸುಮಾರು 50 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ.
ಮನೆ ಮೇಲೆ ಬಿದ್ದ ಮರ:
ಹಳ್ಳಿ ಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬ್ಬಿನಲ್ಲೇ ಕಟ್ಟಿನಾಡಿ ಮಮತಾ ಇವರ ಮನೆ ಮೇಲೆ ಮಂಗಳವಾರ ರಾತ್ರಿ 10:00ಗೆ ಮರ ಬಿದ್ದು ಮನೆ ಸಂಪೂರ್ಣ ಹಾನಿಗೊಂಡಿದ್ದು ಮಮತಾ ಹಾಗೂ ಅವರ ಮಗಳು ಗಾಯಗೊಂಡಿದ್ದಾರೆ.
ಉಳ್ಳೂರು ಗ್ರಾಮ ಪಂಚಾಯತ್ ತುರ್ತು ಪರಿಹಾರ ನೀಡಿದೆ. ಕಂದಾಯ ಅಧಿಕಾರಿ ಶೋಭಾಲಕ್ಷೀ, ಕಂದಾಯ ನೀರಿಕ್ಷಕ ರಾಘವೇಂದ್ರ, ಗ್ರಾಮಲೆಕ್ಕಿಗ ಕಿರಣ್, ಗ್ರಾಮ ಸಹಾಯಕ ಕೃಷ್ಣ ಪೂಜಾರಿ, ಗ್ರಾಮ. ಪಂಚಾಯತ್ ಅಧ್ಯಕ್ಷ ರಾಜೇಶ್ ಹೆಬ್ಬಾರ್, ಸದಸ್ಯರಾದ ಸುಧಾಕರ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕಾಮತ್, ಅರಣ್ಯ ಇಲಾಖೆಯ ಶಿವಕುಮಾರ್, ಮುಖಂಡರಾದ ಸಂಪಿಗೇಡಿ ಸಂಜೀವ ಶೆಟ್ಟಿ, ರೋಹಿತ್ ಶೆಟ್ಟಿ ಮೊದಲಾದವರು ಭೇಟಿ ಮಾಡಿ ಪರಿಶೀಲನೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.