ಮುಳ್ಳಿಕಟ್ಟೆ: ಮದುವೆ ಮನೆಯಾದ ಕಾರ್ಮಿಕರ ಡೇರೆ
Team Udayavani, Dec 31, 2020, 12:09 AM IST
ಹೆಮ್ಮಾಡಿ: ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಖಾಲಿ ಖಾಸಗಿ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿರುವ ಕಾರ್ಮಿಕರ ಡೇರೆಯೇ ಮದುವೆ ಮನೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿಂಧಿ ಮತ್ತು ಇಂಗೋಲಿ ಎನ್ನುವ ಅಲೆಮಾರಿ ಜನಾಂಗವು ಮುಳ್ಳಿಕಟ್ಟೆ, ಹಟ್ಟಿಯಂಗಡಿ ಕ್ರಾಸ್‌ನಲ್ಲಿ ರಸ್ತೆ ಪಕ್ಕದಲ್ಲಿ ಗೂಡಿಸಲುಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಮೀನು ಹಿಡಿಯುವುದು ಇವರ ಕುಲಕಸುಬಾಗಿದ್ದು, ಕಿಳ್ಳಿಕ್ಯಾತರು ಎಂದು ಇವರನ್ನು ಈ ಭಾಗದಲ್ಲಿ ಗುರುತಿಸುತ್ತಾರೆ. ಹಲವಾರು ವರ್ಷಗಳಿಂದ ಮೀನು ಹಿಡಿದು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ಊರಿಗೆ ತೆರಳಲಾಗದೆ ಮುಳ್ಳಿಕಟ್ಟೆಯಲ್ಲೇ ವಾಸವಾಗಿದ್ದ ವಲಸಿಗ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ತಳಿರು ತೋರಣದಿಂದ ಕಂಗೊಳಿಸಿದ ವೇದಿಕೆಯಲ್ಲಿ ಎರಡು ಜೋಡಿ ಮದುವೆಯು ಬ್ರಾಹ್ಮಣರ ಉಪಸ್ಥಿತಿಯಲ್ಲಿ ಸಂಪ್ರದಾಯದ ರೀತಿಯಲ್ಲಿ ಸರಳವಾಗಿ ನಡೆದಿದೆ. ಸ್ಥಳೀಯರಾದ ಸೀತಾರಾಮ ಶೆಟ್ಟಿ ಕೇರಿಕೊಡ್ಲು, ಲೊಕೇಶ್ ಪೂಜಾರಿ ಮುಳ್ಳಿಕಟ್ಟೆ, ಶ್ರೀಶ ಭಟ್ ಉಪಸ್ಥಿತರಿದ್ದರು.
ಹೊಳೆಯಲ್ಲಿ ಮೀನು ಸಹ ಸಿಗುತ್ತಿಲ್ಲ. ಸಂಪಾದನೆ ಬೇರೆ ಇಲ್ಲ. ಬೇರೆ ಕೆಲಸ ಮಾಡಲು ನಮಗೆ ಕೆಲಸವಿಲ್ಲ. ಊರಿಗೆ ತೆರಳಿ ಅದ್ದೂರಿಯಾಗಿ ಮದುವೆ ಮಾಡಲು ನಮ್ಮಿಂದ ಸಾಧ್ಯವಾಗದೆ ಇರುವುದರಿಂದ ನಾವು ವಾಸವಾಗಿದ್ದ ಈ ಪರಿಸರದಲ್ಲೆ ಸರಳವಾಗಿ ನನ್ನ ಎರಡು ಗಂಡು ಮಕ್ಕಳ ಮದುವೆಯನ್ನು ಮಾಡಲಾಗಿದೆ. ಊರಿನವರು ನಮಗೆ ಎಲ್ಲ ರೀತಿಯಲ್ಲಿ ಸಹಕರಿಸಿದ್ದು ಸಂತೋಷ ತಂದಿದೆ ಎನ್ನುವುದಾಗಿ ಮದುಮಗನ ತಂದೆ ಪ್ರಕಾಶ ಇಂಗೋಲಿ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.