Thekkatte: ಬೇಳೂರು ಶಿಲೆಕಲ್ಲು ಗಣಿಗಾರಿಕೆಯ ಗುತ್ತಿಗೆ ನವೀಕರಣ ಅರ್ಜಿ ತಡೆ ಹಿಡಿಯಲು ಆಗ್ರಹ
ತಹಶೀಲ್ದಾರರು ಗಣಿ ಇಲಾಖೆ, ಕಂದಾಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು
Team Udayavani, Dec 8, 2024, 2:51 PM IST
ತೆಕ್ಕಟ್ಟೆ: ಬೇಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಶಿಲೆ ಕಲ್ಲು ಗಣಿಗಾರಿಕೆ ನವೀಕರಣ ಮಾಡಲು ಅರ್ಜಿ ಸಂಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಗಣಿಗಾರಿಕೆಯ ಗುತ್ತಿಗೆ ಅರ್ಜಿ ತಡೆ ಹಿಡಿಯಬೇಕೆಂದು ಸ್ಥಳೀಯರು ಗಣಿ ಇಲಾಖೆ ಮೈಸೂರು, ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಗಣಿಗಾರಿಕಾ ಪ್ರದೇಶದ ಸಮೀಪದಲ್ಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇದೆ. ಅಲ್ಲದೆ ಜಿಲ್ಲಾ ಮುಖ್ಯ ರಸ್ತೆ ಹಾದು ಹೋಗುತ್ತಿದ್ದು, ಅಲ್ಲಿ ನಿತ್ಯ ವಾಹನಗಳು ಸಂಚರಿಸುತ್ತಿರುವ ಕಾರಣ ಶಿಲೆ ಕಲ್ಲು ಗಣಿಗಾರಿಕೆಯ ಮಾಲಿನ್ಯದಿಂದ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಿದ್ದು, ಈ ಹಿನ್ನೆಲೆ ಗುತ್ತಿಗೆ ನವೀಕರಣ ತಡೆ ಹಿಡಿಯುವಂತೆ ಆಗ್ರಹಿಸಿದರು.
ಅಕ್ರಮ ಕಲ್ಲು ಗಣಿಗಾರಿಕೆ ಮಾಡಿದ ಕುರಿತು ಕೋಟ ಪೋಲಿಸ್ ಠಾಣೆಯಲ್ಲಿ ಜು.27ರಂದು ಪ್ರಕರಣ ದಾಖಲಾಗಿದ್ದು, ಸದ್ರಿ ಪ್ರಕರಣವು ವಿಚಾರಣೆಗೆ ಬಾಕಿ ಇರುತ್ತದೆ. ಇದರಿಂದ ಸರಕಾರಕ್ಕೆ ಲಕ್ಷಾಂತರ ರೂ. ರಾಜಧನದ ನಷ್ಟ ವಾಗಿರುತ್ತದೆ. ಈ ಕುರಿತು ಸಂಬಂಧಪಟ್ಟ ಗಣಿ ಇಲಾಖೆಯ ಅಧಿಕಾರಿಗಳು ಹಾಗೂ ತಹಶೀಲ್ದಾರರು ಹಾಗೂ ಕಂದಾಯ ಅಧಿಕಾರಿಗಳ ವಿರುದ್ದ ಕರ್ನಾಟಕ ಲೋಕಾಯುಕ್ತದಲ್ಲಿ ನ. 15ರಂದು ದೂರು ನೀಡಲಾಗಿದೆ ಎಂದು ಅರ್ಜಿದಾರ ರವಿಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.
ಗ್ರಾಮಸಭೆಯಲ್ಲಿ ಪ್ರಸ್ತಾವ
ಬೇಳೂರಿನ ಗಣಿಗಾರಿಕಾ ಪ್ರದೇಶದಲ್ಲಿ ಅಪಾಯಕಾರಿ ಹೊಂಡಗಳು ಸೃಷ್ಟಿಯಾಗಿದ್ದು, ಮಳೆಗಾಲದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಶೇಖರಣೆಯಾಗುತ್ತಿರುವ ಪರಿಣಾಮ ಸೂಕ್ತವಾದ ತಡೆಬೇಲಿಗಳಿಲ್ಲದೇ ಈಗಾಗಲೇ ಹಲವು ಅಪಾಯ ಸಂಭವಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿ.5ರಂದು ಬೇಳೂರು ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಲಿಖೀತವಾಗಿ ದೂರು ನೀಡಿದ್ದಾರೆ.
-ಅವಿನಾಶ್ ಶೆಟ್ಟಿ ಬೇಳೂರು, ನ್ಯಾಯವಾದಿಗಳು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.