Thekkatte: ಭತ್ತದ ಕಟಾವು ಆರಂಭ; ಎಲ್ಲೆಡೆ ಯಂತ್ರಗಳದೇ ಸದ್ದು!

ನಿರಂತರ ಮಳೆಯಿಂದಾಗಿ ಈ ಬಾರಿ ಉತ್ತಮ ಫಸಲು; ಕಟಾವು ಯಂತ್ರದ ಬಾಡಿಗೆ ಪ್ರತಿ ಗಂಟೆಗೆ 2,200 ರೂ. ನಿಗದಿ

Team Udayavani, Oct 21, 2024, 2:49 PM IST

7

ತೆಕ್ಕಟ್ಟೆ: ಕರಾವಳಿಯಲ್ಲಿ ಭತ್ತದ ಬೆಳೆ ಪೈರು ಕಟಾವಿಗೆ ಸಿದ್ಧಗೊಂಡಿದ್ದು, ಅಕಾಲಿಕ ಮಳೆಯ ಆತಂಕದ ನಡುವೆಯೂ ಕಟಾವು ಆರಂಭಗೊಂಡಿದೆ. ತೆಕ್ಕಟ್ಟೆ -ತೋಟದಬೆಟ್ಟು, ಕೊರ ವಡಿ, ಹರಪನಕೆರೆ, ಮಲ್ಯಾಡಿ, ಉಳ್ತೂರು, ಬೇಳೂರು, ಕುಂಭಾಶಿ ಸೇರಿದಂತೆ ಸುತ್ತಮುತ್ತಲಿನ ಕೃಷಿಕರು ಯಂತ್ರದ ಸಹಾಯದಿಂದ ಕಟಾವು ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

ಈ ಭಾಗದಲ್ಲಿ ಸಾಕಷ್ಟು ಹೊಲ ಗದ್ದೆಗಳು ಇರುವುದರಿಂದ ಹೊರ ಜಿಲ್ಲೆಗಳಿಂದ ಬಂದಿರುವ ಕಟಾವು ಯಂತ್ರಗಳು ಅಲ್ಲಲ್ಲಿ ಬೀಡು ಬಿಟ್ಟಿವೆ. ಮಧ್ಯವರ್ತಿಗಳ ಮಾರ್ಗದರ್ಶನದಂತೆ ಕೃಷಿ ಭೂಮಿಗಳಲ್ಲಿ ಯಂತ್ರಗಳ ಸದ್ದು ಪ್ರಾರಂಭಗೊಂಡಿದೆ.

ಪ್ರತೀ ಗಂಟೆಗೆ 2,200 ರೂ. ಬೆಲೆ ನಿಗದಿ
ಈಗಾಗಲೇ ತಮಿಳುನಾಡು, ಮೈಸೂರು ಭಾಗದಿಂದ ಕರ್ತರ್‌, ಕ್ಲಾಸ್‌ ಹಾಗೂ ಏಸ್‌ ಕಂಪೆನಿಗಳ ಕಟಾವು ಯಂತ್ರಗಳು ಬಂದಿವೆ. ಸ್ಪರ್ಧಾತ್ಮಕ ದರದಲ್ಲಿ ಕಟಾವು ಕಾರ್ಯವನ್ನು ಚುರುಕುಗೊಳಿಸಿದೆ. ಕರ್ತರ್‌ ಕಟಾವು ಯಂತ್ರಗಳ ಬಳಕೆಯಿಂದ ಒಣಹುಲ್ಲುಗಳು ಯಂತ್ರದ ಮಧ್ಯಭಾಗದಲ್ಲಿ ಕಟಾವಾಗುವುದರಿಂದ ಉದ್ದನೆಯ ಹುಲ್ಲುಗಳು ಹಾಳಾಗದೇ ಕೃಷಿಕರಿಗೆ ಬಳಕೆಗೆ ಯೋಗ್ಯವಾಗಿದೆ. ಅನಂತರ ಬೇಲರ್‌ ಯಂತ್ರಗಳ ಸಹಾಯದಿಂದ ಒಣಹುಲ್ಲುಗಳನ್ನು ಹೊರೆ ಕಟ್ಟುವ ಮೂಲಕ ಸಂರಕ್ಷಿಸಿಡಬಹುದಾಗಿದೆ.

ತೆನೆಗಳು ಉದುರುವ ಸಾಧ್ಯತೆ
ಈ ವರ್ಷ ಉತ್ತಮ ಭತ್ತದ ಫಸಲು ಇದೆ. ಅಕಾಲಿಕ ಮಳೆಯಿಂದಾಗಿ ಗದ್ದೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ತೆನೆಗಳು ಉದುರುವ ಸಾಧ್ಯತೆ ಹಿನ್ನೆಲೆಯಲ್ಲಿ ಭತ್ತ ಕಟಾವು ಕಾರ್ಯ ಚುರುಕುಗೊಳಿಸಿದ್ದೇವೆ.
-ಶೇಖರ್‌ ಕಾಂಚನ್‌ ಕೊಮೆ, ಪ್ರಗತಿಪರ ಕೃಷಿಕರು, ತೆಕ್ಕಟ್ಟೆ

ಗಂಟೆಗೆ ಒಂದು ಎಕ್ರೆ ಕಟಾವು ಸಾಮರ್ಥ್ಯ
ಕರ್ತರ್‌ ಕಟಾವು ಯಂತ್ರವು ಗಂಟೆಗೆ ಒಂದು ಎಕ್ರೆ ಜಾಗದ ಪೈರನ್ನು ಕಟಾವು ಮಾಡುವ ಸಾಮರ್ಥ್ಯ ಹೊಂದಿದೆ. ದಿನಕ್ಕೆ ಸುಮಾರು 8 ಗಂಟೆಗಳ ಕಾಲ ಕಟಾವು ಮಾಡಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಯಂತ್ರಗಳು ಹಾಗೂ ಕಾರ್ಮಿಕರ ನಿರ್ವಹಣೆ ವೆಚ್ಚ ಹೆಚ್ಚಾಗಿರುವುದರಿಂದ ಅಷ್ಟೇನೂ ಲಾಭ ತರುವಂತದಲ್ಲ .
-ಶಶಿಕುಮಾರ್‌, ಮ್ಯಾನೇಜರ್‌, ಕರ್ತರ್‌ ಕಟಾವು ಯಂತ್ರ, ಮೈಸೂರು

-ಟಿ. ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

ಟಾಪ್ ನ್ಯೂಸ್

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

IPL Mega Auction; 2 day event in Riyadh; IPL Mega Auction Date Revealed

IPL Mega Auction: ರಿಯಾದ್‌ ನಲ್ಲಿ 2 ದಿನದ ಇವೆಂಟ್; ಮೆಗಾ ಹರಾಜಿನ ದಿನಾಂಕ ಬಹಿರಂಗ

Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

2

Actress Oviya Helen: ನನ್ನ ಖಾಸಗಿ ವಿಡಿಯೋ ಲೀಕ್‌ ಮಾಡಿದ್ದು ಅವನೇ.. ನಟಿ ಓವಿಯಾ

Prajwal Revanna Case: High Court dismisses PIL against Rahul Gandhi

Prajwal Revanna Case: ರಾಹುಲ್‌‌ ಗಾಂಧಿ ವಿರುದ್ದದ ಪಿಐಎಲ್ ವಜಾ ಮಾಡಿದ ಹೈಕೋರ್ಟ್

High Court : ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Karkala: ಬಂಡಿಮಠ ಜಂಕ್ಷನ್‌ನಲ್ಲಿ ಅಪಘಾತಗಳ ಕಾಟ

fishermen

Banned ಮೀನುಗಾರಿಕೆ ಈಗಲೂ ಸಕ್ರಿಯ

14

Udupi: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ; ಮಲ್ಪೆ ಠಾಣೆಯಲ್ಲಿ ದೂರು ದಾಖಲು

court

Udupi; ಶ್ರೀಕೃಷ್ಣ ಮಠಕ್ಕೆ ಬಂದು ಮೋಸ ಮಾಡಿದ ವ್ಯಕ್ತಿಗೆ ಜಾಮೀನು

1-a-MLC

MLC Election; ಇಂದು ವಿಧಾನಪರಿಷತ್‌ ಉಪ ಚುನಾವಣೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

13

Dandeli: ಬೀದಿ ನಾಯಿಗಳ ನಿಯಂತ್ರಣಕ್ಕೆ ವಿಳಂಬ

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

Dandeli: ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್ ಬಿಡುವಂತೆ ಮನವಿ

Dandeli: ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್ ಬಿಡುವಂತೆ ಮನವಿ

12

Kavoor: ಒಳಚರಂಡಿಯಿಂದ ಹೊರಚಿಮ್ಮುವ ಮಲಿನ ನೀರು; ಸಾಂಕ್ರಾಮಿಕ ರೋಗ ಭೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.