Thekkatte; ಬೇಳೂರು ಗ್ರಾಮಸಭೆಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ದ ರೊಚ್ಚಿಗೆದ್ದ ಗ್ರಾಮಸ್ಥರು


Team Udayavani, Sep 29, 2023, 8:52 PM IST

1-sadasa-d

ತೆಕ್ಕಟ್ಟೆ : ಬೇಳೂರು ಗ್ರಾಮ ಪಂಚಾಯತ್‌ 2023-24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಸೆ.29ರಂದು ಗ್ರಾಮ ಪಂಚಾಯತ್‌ ಅಧ್ಯಕ್ಷ ಜಯಶೀಲ ಶೆಟ್ಟಿ ಗುಳ್ಳಾಡಿ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ನಡೆಯಿತು.

ಅಕ್ರಮ ಮರಳುಗಾರಿಕೆ ವಿರುದ್ದ ಗ್ರಾಮಸ್ಥರ ವಿರೋಧ
ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದಲೂ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ರೋಸಿ ಹೋಗಿರುವ ಗ್ರಾಮಸ್ಥರು ಗ್ರಾಮಸಭೆಯ ಆರಂಭವಾಗುತ್ತಿದ್ದಂತೆಯೇ ಅಕ್ರಮ ಮರಳುಗಾರಿಕೆಯ ವಿರುದ್ದ ತೀವ್ರ ತೆರನಾದ ವಿರೋಧ ವ್ಯಕ್ತಪಡಿಸಿ, ಗ್ರಾಮಸ್ಥರು ವೇದಿಕೆಯೆಡೆಗೆ ಆಗಮಿಸಿ, ಪ್ರತಿಭಟಿಸಿ ಗ್ರಾಮಕ್ಕೆ ಉಪಯೋಗವಿಲ್ಲದೆ ಈ ಮರಳುಗಾರಿಕೆಯನ್ನು ನಿಷೇಧಿಸುವಂತೆ ಬಿಗಿ ಪಟ್ಟು ಹಿಡಿಯುತ್ತಿದ್ದಂತೆ ಗ್ರಾ.ಪಂ. ಅಧ್ಯಕ್ಷರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಾಮಕಿ ಕೂಡಾ ನಡೆಯಿತು.

ಮರಳುಗಾರಿಕಾ ನಿಷೇಧದ ಬಗ್ಗೆ ಗ್ರಾಮಸಭೆಯಲ್ಲಿ ತತ್‌ಕ್ಷಣವೇ ಮಹತ್ವದ ನಿರ್ಣಯ ಕೈಗೊಳ್ಳಿ ಇಲ್ಲದಿದ್ದಲ್ಲಿ ಗ್ರಾಮಸಭೆ ನಡೆಸಲು ಬಿಡುವುದಿಲ್ಲ ಎಂದು ಸ್ಥಳೀಯರಾದ ನ್ಯಾಯವಾದಿ ಅವಿನಾಶ್‌ ಶೆಟ್ಟಿ ಬೇಳೂರು ,ದಯಾನಂದ ಕೊಠಾರಿ , ದಿನೇಶ್‌ ಶೆಟ್ಟಿ ಚಾವಡಿಮನೆ, ವಿನಯ ಶೆಟ್ಟಿ , ಅನಿಲ್‌ ಶೆಟ್ಟಿ, ಮಧುಕರ ಶೆಟ್ಟಿ, ರವಿಕುಮಾರ್‌ ಶೆಟ್ಟಿ , ಸದಾಶಿವ ಶೆಟ್ಟಿ, ಪ್ರಶಾಂತ್‌ ದೇಲಟ್ಟು, ಸುಕುಮಾರ್‌ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸುಜಾತ ಶೆಟ್ಟಿ ದೇಲಟ್ಟು, ನಂದಿನಿ ಶೆಟ್ಟಿ ಅವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ನೊಡೆಲ್‌ ಅಧಿಕಾರಿ ರವೀಂದ್ರ ಆಚಾರ್ಯ ಅವರು ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ಗಣಿ ಇಲಾಖೆಯಿಂದ ಮುಂದಿನ ಆದೇಶ ಬರುವವರೆಗೂ ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವುದೇ ಮರಳುಗಾರಿಕೆ ನಡೆಸುವಂತಿಲ್ಲ ಎಂದು ನಿರ್ಣಯಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಮಹತ್ವದ ಆದೇಶ ಹೊರಡಿಸಿದ ಘಟನೆ ಕೂಡಾ ನಡೆಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಉಷಾ ಕೊಠಾರಿ, ಗ್ರಾ.ಪಂ. ಸದಸ್ಯರಾದ ಕರುಣಾಕರ ಶೆಟ್ಟಿ, ದೇವಕಿ ವಿ.ಶೆಟ್ಟಿ, ಕರುಣಾಕರ ಶೆಟ್ಟಿ ಎಂ., ರಾಣಿ ಆರ್‌.ಶೆಟ್ಟಿ, ರಾಘವೇಂದ್ರ ಮರಕಾಲ, ಮುಕ್ತಾ, ನಿರ್ಮಲ ಹಾಗು ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ಜಯಂತ್‌ ಸ್ವಾಗತಿಸಿ, ವೀಣಾ ವರದಿ ವಾಚಿಸಿ, ಗ್ರಾ.ಪಂ. ಸಿಬಂದಿ ಮನೀಶ್‌ಶೆಟ್ಟಿ , ಸುರೇಖಾ, ವೀರೇಂದ್ರ ಸಹಕರಿಸಿ, ವಂದಿಸಿದರು.

ಟಾಪ್ ನ್ಯೂಸ್

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

1-ammi

J&K Assembly polls; ಈಗ ಪಾಕಿಸ್ಥಾನವು ಮೋದಿಗೆ ಹೆದರುತ್ತಿದೆ: ಅಮಿತ್ ಶಾ ವಾಗ್ದಾಳಿ

Achraya-das

Tirupati laddoo: ʼಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಲಡ್ಡು ಪ್ರಸಾದ ಹಂಚಿದ್ದೆವುʼ

1-ewqewqe

AtishiAAP; ದೆಹಲಿಯ ಮೂರನೇ ಮಹಿಳಾ ಸಿಎಂ ಆದ ಆತಿಷಿ

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

1-frr

Munirathna ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರಕಾರ

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppunda: ಸಿನಿಮಾ ರೀತಿಯಲ್ಲಿ ಕಾರುಗಳ ಮೇಲಾಟ ಅಪರಾಧ ಕೃತ್ಯಕ್ಕೆ ಬಳಕೆ ಶಂಕೆ

Uppunda: ಸಿನಿಮಾ ರೀತಿಯಲ್ಲಿ ಕಾರುಗಳ ಮೇಲಾಟ ಅಪರಾಧ ಕೃತ್ಯಕ್ಕೆ ಬಳಕೆ ಶಂಕೆ

29

Gujjadi: ನಾಪತ್ತೆಯಾಗಿದ್ದ ವ್ಯಕ್ತಿ ಶವ ಹೊಳೆಯಲ್ಲಿ ಪತ್ತೆ

14

Siddapura: ಪತ್ನಿಯ ಮೇಲೆ ಪತಿ ಹಲ್ಲೆ; ಕೊಲೆ ಬೆದರಿಕೆ

Thekkatte: ಇಸ್ಪೀಟು ಜುಗಾರಿ ಅಡ್ಡೆಯ ಮೇಲೆ ದಾಳಿ

Thekkatte: ಇಸ್ಪೀಟು ಜುಗಾರಿ ಅಡ್ಡೆಯ ಮೇಲೆ ದಾಳಿ

POlice

Kundapura: ನಿಂದನೆ, ಜೀವ ಬೆದರಿಕೆ: ಕೇಸು ದಾಖಲು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

Uppunda: ಸಿನಿಮಾ ರೀತಿಯಲ್ಲಿ ಕಾರುಗಳ ಮೇಲಾಟ ಅಪರಾಧ ಕೃತ್ಯಕ್ಕೆ ಬಳಕೆ ಶಂಕೆ

Uppunda: ಸಿನಿಮಾ ರೀತಿಯಲ್ಲಿ ಕಾರುಗಳ ಮೇಲಾಟ ಅಪರಾಧ ಕೃತ್ಯಕ್ಕೆ ಬಳಕೆ ಶಂಕೆ

29

Gujjadi: ನಾಪತ್ತೆಯಾಗಿದ್ದ ವ್ಯಕ್ತಿ ಶವ ಹೊಳೆಯಲ್ಲಿ ಪತ್ತೆ

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

AFC U20 Asian Cup Qualifiers: ಅಂಡರ್‌-20 ಏಷ್ಯಾ ಅರ್ಹತಾ ಫುಟ್‌ಬಾಲ್‌ಗೆ ಭಾರತ ತಂಡ

AFC U20 Asian Cup Qualifiers: ಅಂಡರ್‌-20 ಏಷ್ಯಾ ಅರ್ಹತಾ ಫುಟ್‌ಬಾಲ್‌ಗೆ ಭಾರತ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.