Kundapura; ಸ್ಪರ್ಧೆಗೆ ತೆರಳಲು ವಿಮಾನ ಟೆಕೆಟ್‌ಗೂ ಹಣ ಇಲ್ಲ!

ಇದು ರಾಷ್ಟ್ರಮಟ್ಟದ ಕ್ರೀಡಾ ಸಾಧಕ ಆಲೂರಿನ ಯುವಕನ ಆರ್ಥಿಕ ಸಂಕಷ್ಟದ ಕಥೆ

Team Udayavani, Oct 15, 2024, 7:40 AM IST

1-kp

ಕುಂದಾಪುರ: ನೂರು ಮೀ. ಓಟದಲ್ಲಿ ರಾಷ್ಟ್ರಮಟ್ಟದಲ್ಲಿ 3 ಬೆಳ್ಳಿ, 1 ಕಂಚು ಪದಕ ಪಡೆದ ಓಟಗಾರನಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾಗವಹಿಸಲು ವಿಮಾನ ಟಿಕೆಟ್‌ಗೂ ಹಣ ಇಲ್ಲ! ಮುಂದಿನ ಫೆಬ್ರವರಿಯಲ್ಲಿ ದುಬಾೖಯಲ್ಲಿ ನಡೆಯುವ ಸೆಲೆಬ್ರಲ್‌ ಪಾಲ್ಸಿ ಗ್ರಾಂಡ್‌ ಪಿಕ್ಸ್‌ ಗೇಮ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಇದ್ದರೂ ಭಾಗವಹಿಸುವುದು ಹೇಗೆ ಎಂಬ ಚಿಂತೆ. ಇದು ಕ್ರೀಡಾ ಸಾಧಕ ಸೆಲೆಬ್ರಲ್‌ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿರುವ ಸಚ್ಚಿದಾನಂದ ದೇವಾಡಿಗ ಅವರ ಸ್ಥಿತಿ.

ಇವರು ಆಲೂರಿನ 5 ಸೆಂಟ್ಸ್‌ ನಿವಾಸಿ ಶ್ರೀನಿವಾಸ ದೇವಾಡಿಗ – ಶರಾವತಿ ದೇವಾಡಿಗರ ಪುತ್ರ. ಶ್ರೀನಿವಾಸರ ಇನ್ನೊಬ್ಬ ಪುತ್ರ, ಆಲೂರು ಶಾಲೆ 7ನೇ ತರಗತಿ ವಿದ್ಯಾರ್ಥಿ ಸೌರವ್‌ ದೇವಾಡಿಗ ಜಿಲ್ಲಾ ಮಟ್ಟದ ಚೆಸ್‌ ಪಂದ್ಯ ವಿಜೇತ.

ಕ್ರೀಡಾಸಕ್ತಿ
6ನೇ ತರಗತಿವರೆಗೆ ಬೆಂಗಳೂರಿನ ಹಿರಿಯೂರಿನಲ್ಲಿ ಓದಿರುವ ಇವರು 7ನೇ ತರಗತಿಗೆ ಆಲೂರಿಗೆ ಬಂದರು. ಇಲ್ಲಿ ಶಿಕ್ಷಕರಾಗಿದ್ದ ವೀರೇಂದ್ರ ಜೋಗಿ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಜಿಲ್ಲಾ ಮಟ್ಟ ದಲ್ಲಿ ಜಾವೆಲಿನ್‌ ಎಸೆತ ಹಾಗೂ ಶಾಟ್‌ಪುಟ್‌ನಲ್ಲಿ ಪದಕಗಳನ್ನು ಪಡೆದರು. ಅನಂತರ ಶಾಟ್‌ಪುಟ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಕಂಚಿನ ಪದಕ ಪಡೆದ ಇವರ ಬದುಕು ಕೊರೊನಾ ಬಳಿಕ ಬದಲಾಯಿತು. ಕ್ರೀಡೆ ನಿಂತ ನೀರಾಯಿತು. ಕ್ರೀಡೆಗೆ ತಿಲಾಂಜಲಿ ಇಡುವ ಯೋಚನೆ ಬಂತು. ಆಗ ಬೆಂಬಲ ಕೊಟ್ಟದ್ದು ತಾಯಿಯ ಸಹೋದರ, ಬೆಂಗಳೂರಿನಲ್ಲಿ ಸ್ಪೆಷಲ್‌ ಒಲಿಂಪಿಕ್ಸ್‌ನ ಆ್ಯತ್ಲಿಟ್‌ಗಳಿಗೆ ಕೋಚ್‌ ಆಗಿರುವ ಮಂಜುನಾಥ ದೇವಾಡಿಗರು. ಕುಂದಾಪುರ ಸರಕಾರಿ ಜೂನಿಯರ್‌ ಕಾಲೇಜಿನಲ್ಲಿ ಉಪನ್ಯಾಸಕಿ ಸಂಧ್ಯಾ ನಾಯಕ್‌ ಅವರು ಪ್ರೋತ್ಸಾಹ ನೀಡಿದರು. ಆದರೆ ಕೋಚ್‌ ಇರಲಿಲ್ಲ. ರಾಷ್ಟ್ರಮಟ್ಟ ದಲ್ಲಿ ಆಡಿದರೂ ಪೌಷ್ಟಿಕ ಆಹಾರ ಸೇವಿಸಲು ಆರ್ಥಿಕವಾಗಿ ಕಷ್ಟವಿದ್ದುದು ಹಾಗೂ ಮಾಹಿತಿ ಕೊರತೆಯಿದ್ದ ಕಾರಣ ಪದಕ ಸ್ವಲ್ಪದರಲ್ಲಿ ಕೈ ತಪ್ಪಿತು. ಆಗ ಸಂಧ್ಯಾ ನಾಯಕ್‌ ಅವರು ಅಜ್ಜರಕಾಡಿನ ಸಮರ್‌ ಅವರ ಮೂಲಕ ಉಚಿತ ತರಬೇತಿಗೆ ಏರ್ಪಾಟು ಮಾಡಿದರು. ಪ್ರಸ್ತುತ ಉಡುಪಿ ಎಂಜಿಎಂ ಕಾಲೇಜಿ ನಲ್ಲಿ ದ್ವಿತೀಯ ಬಿಎ ಓದುತ್ತಿದ್ದಾರೆ.

ನಾಲ್ಕು ಪದಕ
ಗುಜರಾತ್‌, ದಿಲ್ಲಿ, ಗೋವಾದಲ್ಲಿ ಸಿಪಿಎಸ್‌ಎಫ್‌ಐ (ಸೆಲೆಬ್ರಲ್‌ ಪಾಲ್ಸಿ ನ್ಪೋರ್ಟ್ಸ್ ಇಂಡಿಯಾ) ನಡೆಸಿದ ರಾಷ್ಟ್ರ ಮಟ್ಟದ ಸೆಲೆಬ್ರಲ್‌ ಪಾಲ್ಸಿ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿ 19ರ ವಯೋಮಾನದ ಒಳಗಿನ 100 ಮೀ. ಹಾಗೂ 200 ಮೀ. ಓಟದ ಸ್ಪರ್ಧೆಯಲ್ಲಿ 3 ರಜತ, 1 ಕಂಚಿನ ಪದಕ ಪಡೆದಿದ್ದಾರೆ. ಸರಿಯಾದ ಮಾರ್ಗದರ್ಶನ, ತರಬೇತಿ ದೊರೆತ ಬಳಿಕ ಪದಕ ಗಳಿಸುತ್ತಿದ್ದು, ಅದಕ್ಕೂ ಮೊದಲು ಆಡುತ್ತಿದ್ದ ಶಾಟ್‌ಪುಟ್‌ ಬದಲಾಗಿ ಪೂರ್ಣಪ್ರಮಾಣದಲ್ಲಿ ಓಟಕ್ಕಾಗಿಯೇ ತರಬೇತಿಯಲ್ಲಿದ್ದಾರೆ. 100 ಮೀ. ಓಟವನ್ನು 13.37 ಸೆಕೆಂಡ್‌ನ‌ಲ್ಲಿ ಕ್ರಮಿಸಿದ್ದಾರೆ. ವಿಶ್ವದಾಖಲೆ ಇರುವುದು 10.82 ಸೆಕೆಂಡ್‌.

ಹಣಕಾಸಿನ ಮುಗ್ಗಟ್ಟು

ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಹೊಟೇಲ್‌ ಉದ್ಯಮ ನಡೆಸುತ್ತಿದ್ದ ಶ್ರೀನಿವಾಸ ದೇವಾಡಿಗರು ಈಗ ಆಲೂರಿನಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದಾರೆ. ಅವರ ಪತ್ನಿ ಗೃಹಿಣಿ. ಮಗನ ಓದಿಗೆ ತೊಂದರೆ ಮಾಡದೇ ಇದ್ದರೂ ಈಗ ಸ್ಪರ್ಧೆಗಾಗಿ ದುಬಾೖಗೆ ಕಳಿಸಲು ಇವರಲ್ಲಿ ಹಣ ಇಲ್ಲ. 2025ರ ಫೆಬ್ರವರಿಯ ಗ್ರ್ಯಾಂಡ್‌ ಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಕನಸಿಗೆ ಗರಿ ಮೂಡಿಸುವ ಸಹೃದಯರ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಸಂಪರ್ಕ ಸಂಖ್ಯೆ: 7619420649.

ಮಾತ್ರೆ ಇಲ್ಲದಿದ್ದರೆ ಸಮಸ್ಯೆ

ಸಚ್ಚಿದಾನಂದರಿಗೆ ಜೀವನಪೂರ್ತಿ ಔಷಧ ಬೇಕು. ಒಂದು ದಿನ ತಪ್ಪಿದರೂ ಸಮಸ್ಯೆ ಆಗುತ್ತದೆ. ಮಗುವಾಗಿದ್ದಾಗ ಬಿದ್ದು ತಲೆ, ಮೆದುಳಿಗೆ ಸಂಬಂಧಪಟ್ಟ ನರಕ್ಕೆ ಪೆಟ್ಟಾಗಿತ್ತು. ಆಗ ಶ್ರೀನಿವಾಸ ದೇವಾಡಿಗರಿಗೆ ಹೋಟೆಲ್‌ ಉದ್ಯಮ ಕೈ ಹಿಡಿದಿತ್ತು. ಅಲ್ಲೋ ಇಲ್ಲೋ ಹಣ ಒಟ್ಟು ಮಾಡಿ ತುಮಕೂರಿನಲ್ಲಿ ಚಿಕಿತ್ಸೆ ಕೊಡಿಸಿದರೂ ಜೀವನ ಪೂರ್ತಿ ಔಷಧ ಕೊಡುವುದು ತಪ್ಪಲಿಲ್ಲ.

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

3

Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.