![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jan 28, 2024, 12:13 AM IST
ಕುಂದಾಪುರ: ಕಾಂಗ್ರೆಸ್ ಸರಕಾರವು ಯಾವುದೇ ಕಾರಣಕ್ಕೂ ಕರಾವಳಿಯನ್ನು ಅವಗಣಿಸುತ್ತಿಲ್ಲ. ಇದು ತಪ್ಪು ಕಲ್ಪನೆ. ಈಗ ಶಾಸಕರಾದವರಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇತರರನ್ನು ಗುರುತಿಸುವಂತಹ ಕೆಲಸ ಪಕ್ಷ ಮಾಡುತ್ತದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.
ಅವರು ಶನಿವಾರ ಕುಂದಾಪುರದಲ್ಲಿ ಪತ್ರಕರ್ತರ ಜತೆ ಕರಾವಳಿಯವರಿಗೆ ಕಾಂಗ್ರೆಸ್ ಸರಕಾರ ಸಂಪುಟ ಹಾಗೂ ನಿಗಮ ಮಂಡಳಿ ನೇಮಕದಲ್ಲಿ ಪ್ರಾತಿನಿಧ್ಯ ನೀಡದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದರು. ನನ್ನ ಮೇಲೆ ವಿಶ್ವಾಸವಿಟ್ಟು ಉಡುಪಿ ಜಿಲ್ಲೆಯ ಹೊಣೆಗಾರಿಕೆ ಕೊಟ್ಟಿದ್ದಾರೆ. ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು. 136 ಮಂದಿ ಶಾಸಕರು ಇರುವಾಗ ಪರಿಷತ್ ಸದಸ್ಯರಿಗೆ ಸ್ವಲ್ಪ ಮಟ್ಟಿಗೆ ಈಗ ಪ್ರಾತಿನಿಧ್ಯ ಸಿಗುವುದು ಕಷ್ಟ ಎಂದವರು ತಿಳಿಸಿದರು.
You seem to have an Ad Blocker on.
To continue reading, please turn it off or whitelist Udayavani.