ಈ ವರ್ಷವೂ ತಪ್ಪದ ಕುಡಿಯುವ ನೀರಿನ ಗೋಳು
ಸಿದ್ದಾಪುರ ಗ್ರಾಮ ಪಂಚಾಯತ್
Team Udayavani, Mar 21, 2020, 5:00 AM IST
ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ? ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ ಇದು.
ಸಿದ್ದಾಪುರ: ಇಲ್ಲಿನ ಗ್ರಾ.ಪಂ.ನ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಈ ವರ್ಷವೂ ಭಿನ್ನವಾಗಿಯೇನಿಲ್ಲ. ಕುಡಿಯುವ ನೀರಿನ ಸಮರ್ಥ ಪೂರೈಕೆಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡರೂ, ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕಾದ ಲಕ್ಷಣಗಳು ಗೋಚರಿಸುತ್ತಿವೆ.
ನೀರಿನ ಅಭಾವವಿರುವ ಪ್ರದೇಶಗಳು
ಜನತಾ ಕಾಲೋನಿ, ಜನ್ಸಾಲೆ, ಸೋಣು, ತಾರೆಕೊಡ್ಲುಗಳಲ್ಲಿ ನೀರಿನ ಅಭಾವ ಹೆಚ್ಚು. ಬೇಸಗೆಯಲ್ಲಿ ಇಲ್ಲಿನ ನಿವಾಸಿಗಳು ಕಷ್ಟಪಡುತ್ತಾರೆ. ಇಲ್ಲಿ ಪಂಚಾಯತ್‌ನಿಂದ ನಿರ್ಮಿಸಲಾದ ಬಾವಿ, ಕೊಳವೆ ಬಾವಿ ಇದ್ದರೂ, ಎಪ್ರಿಲ್-ಮೇ ತಿಂಗಳಲ್ಲಿ ಅಂತರ್ಜಲ ಕಡಿಮೆಯಾಗಿ ನೀರಿನ ಸಮಸ್ಯೆ ಕಾಡುತ್ತದೆ. ಇದರಿಂದ ಕೊನೆಗೆ ಟ್ಯಾಂಕರ್ ನೀರು ಗತಿಯಾಗಿದೆ.
ಸಮಸ್ಯೆಗಳು
ಗ್ರಾ.ಪಂ. ವ್ಯಾಪ್ತಿಯಲ್ಲಿ ಬೇಕಾಗುವಷ್ಟು ನೀರಿನ ವ್ಯವಸ್ಥೆ ಇದೆ. ಆದರೆ ಅದರ ನಿರ್ವಹಣೆ ಮತ್ತು ಬಳಕೆಯಲ್ಲಿ ಪಂಚಾಯತ್ ಎಡವುತ್ತಿದೆ. ಅನೇಕ ಕಡೆಗಳಲ್ಲಿ ಕೊಳವೆ ಬಾವಿಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಅಲ್ಲಲ್ಲಿ ನೀರಿನ ಪೈಪ್ ಲೈನ್‌ಗಳು ಓಡೆದು, ನೀರು ಪೊಲಾಗುತ್ತಿವೆ. ಬಾವಿ ನಿರ್ವಹಣೆಯೂ ಸರಿಯಾಗಿಲ್ಲ. ಮನೆಗಳಿಗೆ ಮೀಟರ್ ಅಳವಡಿಸಿಲ್ಲ.
ಕೆಲವೊಂದು ಕಡೆಗಳಲ್ಲಿ ಪಂಚಾಯತ್ ಸರಬರಾಜು ಮಾಡುವ ನೀರನ್ನು ತೋಟಕ್ಕೆ, ಮನೆ ಬಾವಿ ತುಂಬಿಸಲು ಬಳಸಲಾಗುತ್ತಿದೆ ಎಂಬ ಆರೋಪವಿದೆ. ಇದರಿಂದಲೂ ಕೃತಕ ನೀರಿನ ಅಭಾವ ಉಂಟಾಗುತ್ತಿದೆ.
ನೀರಿನ ಅಭಾವ:
ಕೈಗೊಳ್ಳಬೇಕಾದ ಕ್ರಮವೇನು?
ನೀರಿನ ಸಮಸ್ಯೆ ಸರಿಪಡಿಸಲು ಶಾಶ್ವತ ಪರಿಹಾರ ಅಗತ್ಯ. ಸಿದ್ದಾಪುರ ಕಾಶಿಕಲ್ಲು ಕೆರೆಗೆ ವಾರಾಹಿ ನೀರು ಹಾಯಿಸಬೇಕಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಾಕಾರವಾಗಬೇಕು. ಗ್ರಾಮದ ಸುತ್ತಲು ಹರಿಯುವ ನದಿಗಳಿಗೆ ವೆಂಟೆಂಡ್ ಡ್ಯಾಂ ನಿರ್ಮಾಣಗೊಳ್ಳಬೇಕು.
ಈ ಬೇಡಿಕೆಗಳು ಸಾಕಾರಗೊಂಡಲ್ಲಿ ಗ್ರಾಮದ ನೀರಿನ ಸಮಸ್ಯೆಗಳಿಗೆ ಸಂಪೂರ್ಣ ಮುಕ್ತಿ ಸಿಗಲಿದೆ.
ಸುತ್ತಲೂ ನೀರಿನ ಮೂಲಗಳಿದ್ದರೂ, ಬೇಸಗೆಯಲ್ಲಿ ನೀರಿಲ್ಲದೆ ಸಿದ್ದಾಪುರ ಪರಿತಪಿಸುತ್ತಿದೆ. ಜಲಮೂಲಗಳ ಸಮರ್ಥ ನಿರ್ವಹಣೆ, ಅಂತರ್ಜಲ ಮಟ್ಟ ಹೆಚ್ಚಿಸಲು ಪೂರಕ ಕ್ರಮಗಳಿಂದ ಇಲ್ಲಿನ ನೀರಿನ ಸಮಸ್ಯೆ ಬಗೆಹರಿಸಬಹುದಾಗಿದೆ.
ಲಕ್ಷಗಟ್ಟಲೆ ರೂ. ವೆಚ್ಚ
ನೀರಿಗಾಗಿ ಪಂಚಾಯತ್ ವರ್ಷವೂ ಲಕ್ಷಗಟ್ಟಲೆ ರೂ. ವ್ಯಯಿಸುತ್ತಿದೆ. 2017-18ನೇ ಸಾಲಿನಲ್ಲಿ ಟ್ಯಾಂಕರ್ ನೀರು ಸರಬರಾಜಿಗೆ 5.92 ಲಕ್ಷ ರೂ. ವೆಚ್ಚಮಾಡಲಾಗಿದೆ. 2018-19ನೇ ಸಾಲಿನಲ್ಲಿ 7 ಲಕ್ಷ ರೂ. ವೆಚ್ಚ ಮಾಡಲಾಗಿದೆ.
ಯೋಜನೆಗಳು ಜಾರಿಯಲ್ಲಿ
ಹೊಳೆ ಶಂಕರನಾರಾಯಣ ರಸ್ತೆಯ ಹತ್ತಿರ ಜಿ.ಪಂ. ನಿಧಿಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ನೆಲದಡಿ ನೀರಿನ ಟ್ಯಾಂಕ್ ನಿರ್ಮಿಸಲು ಟೆಂಡರ್ ಆಗಿದೆ. ಪೈಪ್ ಲೈನ್‌ಗಾಗಿ 24 ಲಕ್ಷ ರೂ. ಮೀಸಲಿರಿಸಲಾಗಿದೆ. ಇದರಿಂದ ಗ್ರಾಮದ ನೀರಿನ ಸಮಸ್ಯೆ ಬಗೆಹರಿಯಲಿದೆ.
-ರವೀಂದ್ರ ರಾವ್, ಪಿಡಿಒ
ಸತೀಶ ಆಚಾರ್ ಉಳ್ಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.