ಆಮ್ರಕಲ್ಲು-ಸೂರ್ಗೋಳಿ ರಸ್ತೆ ಜರ್ಜರಿತ: ಸಂಚಾರ ದುಸ್ತರ
ಬೆಳ್ವೆ - ಸೂರ್ಗೋಳಿ ರಸ್ತೆಯು ಹೊಂಡಮಯ
Team Udayavani, Jul 26, 2022, 11:30 AM IST
ಗೋಳಿಯಂಗಡಿ: ಆಮ್ರಕಲ್ಲು – ಸೂರ್ಗೋಳಿ ಕ್ರಾಸ್ ರಸ್ತೆ ಹಾಗೂ ಬೆಳ್ವೆಯಿಂದ ಸೂರ್ಗೋಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಬಹಳಷ್ಟು ಹೊಂಡಗಳು ಉಂಟಾಗಿದ್ದು ಸಂಚಾರ ದುಸ್ತರಗೊಂಡಿದೆ. ಒಟ್ಟು 6 ಕಿ.ಮೀ. ದೂರದವರೆಗೆ ವಾಹನ ಸವಾರರು ಪರದಾಡುವಂತಾಗಿದೆ.
ಬೆಳ್ವೆ, ಹಿಲಿಯಾಣ, ನಾಲ್ಕೂರು ಈ 3 ಗ್ರಾಮಗಳನ್ನು ಬೆಸೆಯುವ ಆಮ್ರಕಲ್ಲು – ಸೂರ್ಗೋಳಿ 4 ಕಿ.ಮೀ. ದೂರದ ರಸ್ತೆಯಲ್ಲಿ ಅಲ್ಲಲ್ಲಿ ಬೃಹತ್ ಹೊಂಡ ಬಿದ್ದಿದ್ದು, ಈ ರಸ್ತೆಯಲ್ಲಿ ಸಂಚಾರ ಪ್ರಯಾಸ ತರುವಂತಿದೆ. ಬೇರೆ ಬೇರೆ ಕಡೆಗಳಿಗೆ ಸಂಚರಿಸಲು ಹಲವರು ಇದೇ ಮಾರ್ಗ ಆಶ್ರಯಿಸಿದ್ದಾರೆ.
ಬೆಳ್ವೆ – ಸೂರ್ಗೋಳಿ ರಸ್ತೆ
ಈ ಆಮ್ರಕಲ್ಲು – ಸೂರ್ಗೋಳಿ ರಸ್ತೆ ಸಂಪರ್ಕಿಸುವ ಬೆಳ್ವೆಯಿಂದ ಸೂರ್ಗೋಳಿ ಕಡೆಗೆ ತೆರಳುವ ಸುಮಾರು 2 ಕಿ.ಮೀ. ದೂರದ ರಸ್ತೆಯು ಸಂಪೂರ್ಣ ಹೊಂಡಮಯವಾಗಿದೆ.
ಈ ಮಾರ್ಗದಲ್ಲಿ ನಿತ್ಯ ನೂರಾರು ಮಂದಿ ಸಂಚರಿಸುತ್ತಾರೆ. ಆಮ್ರಕಲ್ಲು – ಸೂರ್ಗೋಳಿ ರಸ್ತೆಯು ಆಮ್ರಕಲ್ಲು, ತಾರಿಕಟ್ಟೆ ಹಾಗೂ ಸೂರ್ಗೋಳಿ ಭಾಗದ ಜನರಿಗೆ ಬೇರೆ ಬೇರೆ ಕಡೆಗಳಿಗೆ ಸಂಚರಿಸಲು ಮುಖ್ಯ ರಸ್ತೆಯಾಗಿದೆ. ಇನ್ನು ಬೆಳ್ವೆ – ಸೂರ್ಗೋಳಿ ಹಾಗೂ ಸೂರ್ಗೋಳಿ – ಆಮ್ರಕಲ್ಲು ರಸ್ತೆಯು ಬೆಳ್ವೆ, ಆರ್ಡಿ- ಅಲಾºಡಿ, ಮಡಾಮಕ್ಕಿ, ಮಾಂಡಿ ಮೂರುಕೈ ಭಾಗದ ಜನರಿಗೆ ಮಂದಾರ್ತಿ ದೇವಸ್ಥಾನಕ್ಕೆ ತೆರಳಲು ಹತ್ತಿರದ ಮಾರ್ಗವಾಗಿದೆ. ಬೆಳ್ವೆಯಿಂದ ಮಂದಾರ್ತಿಗೆ ಬೇರೆ ರಸ್ತೆಯಿದ್ದರೂ ಈ ಮಾರ್ಗವಾಗಿ ಸುಮಾರು 2 ಕಿ.ಮೀ.ನಷ್ಟು ಹತ್ತಿರವಾಗಲಿದೆ.
ದಶಕದ ಹಿಂದೆ ಡಾಮರು
ಈ ಮಾರ್ಗಕ್ಕೆ ಶಾಸಕರ ಮುತು ವರ್ಜಿಯಲ್ಲಿ 10 ವರ್ಷಗಳಿಗೂ ಹಿಂದೆ ಡಾಮರು ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಮಾರ್ಗದ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಕೆಲವೊಮ್ಮೆ ಹೊಂಡಗಳಿಗೆ ತೇಪೆ ಹಾಕುವ ಕಾರ್ಯ ಆಗಿದ್ದು, ಬಿಟ್ಟರೆ, ರಸ್ತೆ ಮರು ಡಾಮರು ಕಾಮಗಾರಿ ಈವರೆಗೆ ನಡೆದಿಲ್ಲ. ಕಳೆದ ಬಾರಿಯೂ ತೇಪೆ ಹಾಕದೇ, ಈಗ ಸಂಚರಿಸಲು ಸಾಧ್ಯವಿಲ್ಲದಷ್ಟು ಹೊಂಡ ಬಿದ್ದಿದೆ.
ಅಭಿವೃದ್ಧಿಗೆ ಬೇಡಿಕೆ
ಆಮ್ರಕಲ್ಲು – ತಾರಿಕಟ್ಟೆ- ಸೂರ್ಗೋಳಿ ಕ್ರಾಸ್ ರಸ್ತೆ ಹಾಗೂ ಬೆಳ್ವೆ – ಸೂಗೋಳಿ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯ ಅಲ್ಲಲ್ಲಿ ದೊಡ್ಡ ಹೊಂಡ ಬಿದ್ದಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಇದೆ. ಶೀಘ್ರ ಈ ರಸ್ತೆಯ ಮರು ಡಾಮರು ಕಾಮಗಾರಿ ಆಗಲಿ ಎಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
50 ಲ.ರೂ. ಅನುದಾನ: ಬೆಳ್ವೆ – ಸೂರ್ಗೋಳಿ ರಸ್ತೆಯ ಅಭಿವೃದ್ಧಿಗೆ ಕುಂದಾಪುರ ಶಾಸಕರ ಮುತುವರ್ಜಿಯಲ್ಲಿ 50 ಲಕ್ಷ ರೂ. ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಇನ್ನು ಆಮ್ರಕಲ್ಲು – ಸೂರ್ಗೋಳಿ ರಸ್ತೆಯು ಕುಂದಾಪುರ ಹಾಗೂ ಉಡುಪಿ ಎರಡು ಕ್ಷೇತ್ರಗಳ ವ್ಯಾಪ್ತಿಯಾಗಿದ್ದು, ಇಬ್ಬರು ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ. 3-4 ಕಿ.ಮೀ. ಆಗಿರುವುದರಿಂದ ದೊಡ್ಡ ಅನುದಾನದ ಅಗತ್ಯವಿದೆ. – ಸೂರ್ಗೋಳಿ ಚಂದ್ರಶೇಖರ ಶೆಟ್ಟಿ, ಬೆಳ್ವೆ ಗ್ರಾ.ಪಂ. ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಅಂಬರ್‌ಗ್ರೀಸ್ ಮಾರಾಟ ಜಾಲ: ಅಧಿಕಾರಿಗಳಿಗೆ ಹಲ್ಲೆಗೈದ ನಾಲ್ವರ ಬಂಧನ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Shiroor: ಡಿವೈಡರ್‌ಗೆ ಕಾರು ಢಿಕ್ಕಿ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.