ಬೇಡಿಕೆ ಈಡೇರಿಸಿ: ಜಿಲ್ಲಾಧಿಕಾರಿಗೆ ದ್ವೀಪವಾಸಿಗಳ ಮೊರೆ
Team Udayavani, Apr 11, 2023, 7:42 AM IST
ಕುಂದಾಪುರ: ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದ್ವೀಪದಂತಿರುವ ಉಪ್ಪಿನಕುದ್ರು ಗ್ರಾಮದ ಬೇಡರಕೊಟ್ಟಿಗೆ ಪ್ರದೇಶಕ್ಕೆ ಸೋಮವಾರ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರನ್ನು ಅಲ್ಲಿನ ನಿವಾಸಿಗರು ಸಾಲು – ಸಾಲು ಸಮಸ್ಯೆಗಳನ್ನು ಹೇಳುವ ಮೂಲಕವೇ ಸ್ವಾಗತಿಸಿದರು.
ಮತಜಾಗೃತಿಗಾಗಿ ಉಪ್ಪಿನಕುದ್ರು ವಿಗೆ ಆಗಮಿಸಿದ ಜಿಲ್ಲಾಧಿಕಾರಿಯನ್ನು ಅಲ್ಲಿನ ನಿವಾಸಿಗರು ನಾವು ಅನೇಕ ವರ್ಷ ಗಳಿಂದ ರಿಂಗ್ ರೋಡ್‌ಗಾಗಿ ಬೇಡಿಕೆ ಇಡುತ್ತಿದ್ದೇವೆ. ಇನ್ನೂ ಈಡೇ
ರಿಲ್ಲ. ರಿಂಗ್ ರೋಡ್ ಆದರೆ ಇಲ್ಲಿನ ಹತ್ತಾರು ಮನೆಗಳಿಗೆ ಅನುಕೂಲ ವಾಗ ಲಿದೆ. ಇನ್ನು ಮುಖ್ಯ ರಸ್ತೆಯ ಸಮಸ್ಯೆಯೂ ಇದ್ದು, ಅದನ್ನು ನೀವೇ ಪರಿಹರಿಸಿಕೊಡಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಪಿಡಿಒ ಹಾಗೂ ವಿಎ ಅವರಿಗೆ ಪರಿಶೀಲಿಸಿ ತಿಳಿಸುವಂತೆ ಹೇಳಿದರಲ್ಲದೆ, ರಸ್ತೆ ಸಾಧ್ಯತೆ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ನೀರು ಪೂರೈಕೆಯಾಗುತ್ತಿಲ್ಲ
ನಮ್ಮ ಪ್ರದೇಶ ಉಪ್ಪು ನೀರಿನಿಂದ ಆವೃತವಾಗಿದ್ದು, ಬಾವಿ ನೀರು ಪೂರ್ತಿ ಉಪ್ಪಾಗಿದೆ. ಕುಡಿಯಲು ಸಹಿತ ಯಾವುದಕ್ಕೂ ಬಳಸಲು ಸಾಧ್ಯವಿಲ್ಲ. ಪಂಚಾಯತ್‌ನಿಂದ 2 ದಿನಕ್ಕೊಮ್ಮೆ ನೀರು ಕೊಡುತ್ತಿದ್ದು, ಅದು ಸಹ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಜೆಜೆಎಂ ಆಗುತ್ತಿದ್ದರೂ ಈಗ ಈ ಭಾಗಕ್ಕೆ ತಾತ್ಕಾಲಿಕ ನೀರಿನ ವ್ಯವಸ್ಥೆ ಮಾಡಬೇಕೆಂದು ಇಲ್ಲಿನ ಮನೆಯವರು ಮನವಿ ಮಾಡಿದರು. ತಾ.ಪಂ. ಇಒಗೆ ಗಮನಹರಿಸುವಂತೆ ಡಿಸಿ ಸೂಚಿಸಿದರು.
ಇನ್ನು ಪೈಪ್‌ಲೈನ್‌ಗಾಗಿ ಉತ್ತಮ ಕಾಂಕ್ರೀಟ್ ರಸ್ತೆಯನ್ನು ಅಗೆಯಲು ಗುರುತು ಮಾಡಿದ್ದು, ಅದನ್ನು ಅಗೆ ಯದೇ ಮೋರಿಯಿದ್ದಲ್ಲಿ ಅಲ್ಲಿಂದ ಪೈಪ್‌ಲೈನ್ ಮಾಡಲಿ ಎನ್ನುವ ಸಲಹೆಯನ್ನು ಸ್ಥಳೀಯರು ನೀಡಿದರು. ಇದು ಉತ್ತಮ ಸಲಹೆಯಾಗಿದ್ದು, ರಸ್ತೆಯನ್ನು ಅಗೆಯದೇ ಈ ರೀತಿಯ ಕಾಮಗಾರಿ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ. ಸಿಇಒ ಪ್ರಸನ್ನ ಎಚ್., ಕುಂದಾ ಪುರ ಎಸಿ ರಶ್ಮಿ ಎಸ್.ಆರ್., ಕುಂದಾಪುರ ತಹಶೀಲ್ದಾರ್ ಶೋಭಾ ಲಕ್ಷ್ಮೀ, ತಾ.ಪಂ. ಇಒ ಮಹೇಶ್ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕರನ್ನು ಕೊಡಿ: ಚಿಣ್ಣರ ಮನವಿ
ಉಪ್ಪಿನಕುದ್ರುವಿನಿಂದ ಹೊರಡುವ ವೇಳೆ ಎದುರಾದ ಚಿಣ್ಣರನ್ನು ಮಾತಾಡಿಸಿದ ಜಿಲ್ಲಾಧಿಕಾರಿಗಳಿಗೆ ಶಿಕ್ಷಕರ ಸಮಸ್ಯೆ ಕುರಿತು ಮಕ್ಕಳಿಂದ ಪ್ರಸ್ತಾವ ಕೇಳಿ ಬಂತು. ನಮ್ಮ ಶಾಲೆಯಲ್ಲಿ 112 ಮಂದಿ ಮಕ್ಕಳಿದ್ದೇವೆ. ಆದರೆ ಶಿಕ್ಷಕರ ಕೊರತೆಯಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಕರನ್ನು ಕೊಡಿ ಎಂದು ಮೊರೆಯಿಟ್ಟರು. ಈಗ ರಾಜ್ಯದ ಹಂತದಲ್ಲಿ ಶಿಕ್ಷಕರ ಕೌನ್ಸೆಲಿಂಗ್ ನಡೆಯುತ್ತಿದ್ದು, ಅದರಲ್ಲಿ ಶಿಕ್ಷಕರ ನಿಯೋಜನೆ ಹಾಗೂ ಅಗತ್ಯ ಬಿದ್ದರೆ ಅತಿಥಿ ಶಿಕ್ಷಕರನ್ನು ಒದಗಿಸಲು ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.