Udupi District: ಪ್ರವಾಸಿ ತಾಣಗಳಲ್ಲಿ ಮೈಮರೆತರೆ ಪ್ರಾಣಕ್ಕೆ ಆಪತ್ತು

ಉಡುಪಿ ಜಿಲ್ಲೆ: ಎರಡು ವಾರಗಳಲ್ಲಿ ಇಬ್ಬರು ನೀರುಪಾಲು

Team Udayavani, Jul 25, 2023, 7:55 AM IST

Udupi District: ಪ್ರವಾಸಿ ತಾಣಗಳಲ್ಲಿ ಮೈಮರೆತರೆ ಪ್ರಾಣಕ್ಕೆ ಆಪತ್ತು

ಕುಂದಾಪುರ: ಎರಡು ವಾರಗಳಲ್ಲಿ ಕುಂದಾಪುರ ಭಾಗದ ಪ್ರವಾಸಿ ತಾಣಗಳಲ್ಲಿ ಇಬ್ಬರು ಯುವಕರು ನೀರುಪಾಲಾಗಿದ್ದು, ಎರಡೂ ಘಟನೆಗಳಲ್ಲಿ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಮಳೆಗಾಲದಲ್ಲಿ ಮಾತ್ರ ಜೀವಕಳೆ ಪಡೆಯುವ ಕರಾವಳಿಯ ಕೆಲವು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಜಾಗರೂಕತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬುದು ಸ್ಥಳೀಯರ ಆಗ್ರಹ.

ಕಳೆದ ವಾರ ಮರವಂತೆಯ ಬೀಚ್‌ನಲ್ಲಿ ಪ್ರವಾಸಿ ಯುವಕನೊಬ್ಬ ಸಮುದ್ರಕ್ಕೆ ಬೆನ್ನು ಹಾಕಿನ ಫೋಟೋ ತೆಗೆಯಲು ಹೋಗಿ ಅಲೆಗಳ ಅಬ್ಬರಕ್ಕೆ ಕೊಚ್ಚಿ, ಪ್ರಾಣ ಕಳೆದುಕೊಂಡರೆ, ಇದೇ ಸೋಮವಾರ ಕೊಲ್ಲೂರು ಸಮೀಪದ ಅರಿಶಿನ ಗುಂಡಿಯ ಜಲಪಾತದಲ್ಲಿ ಭದ್ರಾವತಿ ಮೂಲದ ಯುವಕನೊಬ್ಬ ಜಾರುವ ಕಲ್ಲು ಬಂಡೆಗಳಲ್ಲಿ ನಿಂತು ವಿಡಿಯೋ ಮಾಡುತ್ತಿದ್ದ ವೇಳೆ ಕಾಲು ಜಾರಿ ನೀರುಪಾಲಾದ ದುರ್ಘ‌ಟನೆ ಸಂಭವಿಸಿದೆ.
ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ಭಾಗದ ಪ್ರವಾಸಿ ತಾಣಗಳಲ್ಲಿ ಮಳೆಗಾಲದಲ್ಲಿ ಕಾಣ ಸಿಗುವ ಸೊಬಗು ಬೇರೆ ಯಾವತ್ತೂ ಕಾಣ ಸಿಗದು. ಇಲ್ಲಿನ ಜಲಪಾತಗಳು, ಕಡಲಿನ ಸೌಂದರ್ಯಕ್ಕೆ ಮನಸೋತು ಬೆಂಗಳೂರು, ಮೈಸೂರು, ಉತ್ತರ ಕನ್ನಡ ಮಾತ್ರವಲ್ಲದೆ ಉಡುಪಿ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಕುಂದಾಪುರ ಭಾಗದ ಪ್ರವಾಸಿ ಕೇಂದ್ರಗಳಿಗೆ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಆದರೆ ಬೀಚ್‌ಗಳು, ಜಲಪಾತಗಳಲ್ಲಿ ಮಳೆಗಾಲದಲ್ಲಿ ಎಚ್ಚರಿಕೆ ವಹಿಸುವುದು ಅತೀ ಅಗತ್ಯ. ಜಲಪಾತ ಮಾತ್ರವಲ್ಲ ಬೆಟ್ಟಗಳಿಗೆ ಚಾರಣ ಮಾಡುವವರೂ ಸಹ ಮುಂಜಾಗ್ರತೆ ವಹಿಸಲೇಬೇಕು. ಆದರೆ ಜಲಪಾತದ ನೀರಲ್ಲಿ ಮೋಜಿನಾಟ, ಮೊಬೈಲ್‌ ಫೋನ್‌ಗಳಲ್ಲಿ ಅಪಾಯಕಾರಿ ವೀಡಿಯೋ, ಫೋಟೋ ಕ್ಲಿಕ್ಕಿಸುವುದು, ಸಾಮಾಜಿಕ ಮಾಧ್ಯಮಗಳಿಗೆ ವೀಡಿಯೋ ಮಾಡುವುದೂ ಸಹ ಅಷ್ಟೇ ಅಪಾಯಕಾರಿ. ಸ್ವಲ್ಪ ಮೈ ಮರೆತರೂ ಪ್ರಾಣಕ್ಕೆ ಆಪತ್ತು ತರುವ ಅಪಾಯವೂ ಇದೆ.

ಎಲ್ಲೆಲ್ಲಿ ನಿಷೇಧವಿದೆ?
– ಹೆಬ್ರಿ ತಾಲೂಕಿನಲ್ಲಿರುವ ಜೋಮ್ಲು, ಕೂಡ್ಲು ಜಲಪಾತಗಳಲ್ಲಿ ಮಳೆಗಾಲದಲ್ಲಿ ಇಳಿಯುವುದಕ್ಕೆ ನಿಷೇಧ ಹೇರಲಾಗಿದೆ.
-ಕುಂದಾಪುರ ತಾಲೂಕಿನ ಹೊಸಂಗಡಿ ಸಮೀಪದ ತೊಂಬಟ್ಟು-ಇರ್ಕಿಗದ್ದೆ ಜಲಪಾತಗಳಿಗೆ ವೀಕ್ಷಣೆಗೆ ಅಷ್ಟೇ ಅವಕಾಶವಿದ್ದು, ನೀರಿಗೆ ಇಳಿಯುವಂತಿಲ್ಲ. ಕಲ್ಲು ಬಂಡೆಗಳು ಜಾರುವುದರಿಂದ ಆದಷ್ಟು ಮುನ್ನೆಚ್ಚರಿಕೆ ವಹಿಸುವುದು ಆವಶ್ಯಕ.
– ಕೊಡಚಾದ್ರಿಯಿಂದ ಹರಿಯುವ ಬೆಳ್ಕಲ್‌ತೀರ್ಥ ಸಂಪರ್ಕಿಸುವ ಹಾದಿಯೇ ದುರ್ಗಮವಾಗಿದ್ದು, ಇಲ್ಲಿಯೂ ದೂರದಿಂದಲೇ ನೋಡಿ ಆಸ್ವಾದಿಸಿದರೆ ಕ್ಷೇಮ.
– ಕೊಲ್ಲೂರು ಸಮೀಪದ ಮೂಕಾಂಬಿಕಾ ಅಭಯಾರಣ್ಯದೊಳಗೆ ಬರುವ ಅರಿಶಿನ ಗುಂಡಿ ಜಲಪಾತಕ್ಕೆ ಪ್ರವೇಶಕ್ಕೆ ಅರಣ್ಯ ಇಲಾಖೆಯವರು ನಿಷೇಧವನ್ನು ಹೇರಿದ್ದಾರೆ. ಆದರೂ ಇಲ್ಲಿಗೆ ಬೇರೆ ಬೇರೆ ದಾರಿಗಳ ಮೂಲಕ ಪ್ರವಾಸಿಗರು ಬರುತ್ತಾರೆ. ಇದರಿಂದ ಸಮಸ್ಯೆಯಾಗುತ್ತಿದೆ.
– ಶಿರೂರು ಸಮೀಪದ ತೂದಳ್ಳಿ ಹಾಗೂ ಕೋಸಳ್ಳಿ ಜಲಪಾತದಲ್ಲಿ ಈ ಹಿಂದೆ ದುರ್ಘ‌ಟನೆಗಳು ಸಂಭವಿಸಿದ್ದು, ಇಲ್ಲಿಯೂ ನೀರಿಗೆ ಇಳಿಯುವುದಕ್ಕೆ ನಿಷೇಧವಿದೆ.
– ಬಾಳೆಬರೆ, ನಾಗೋಡಿ ಘಾಟಿಗಳಲ್ಲಿ ಕಾಣ ಸಿಗುವ ಫಾಲ್ಸ್‌ ಗಳನ್ನು ಮಾತ್ರ ಹತ್ತಿರದಿಂದ ನೋಡಿ ಆನಂದಿಸಬಹುದು. ಇಲ್ಲಿ ಮೇಲೆ ಕಲ್ಲು – ಬಂಡೆಗಳಿಗೆ ಹತ್ತುವುದು ಅಸಾಧ್ಯ.
– ತ್ರಾಸಿ – ಮರವಂತೆ ಬೀಚ್‌ ಹೆಚ್ಚು ಆಳವಿರುವುದರಿಂದ ಇಲ್ಲಿ ಕಡಲಿಗೆ ಇಳಿಯುವುದಾಗಲಿ, ಅಪಾಯದ ಮಟ್ಟವನ್ನು ದಾಟಿ ಮುಂದೆ ಹೋಗಿ ಕಲ್ಲು ಬಂಡೆಗಳು ಜಾರುವುದರಿಂದ ಅದರ ಮೇಲೆ ನಿಂತು ಸೆಲ್ಫಿ ತೆಗೆಯುವುದನ್ನು ನಿರ್ಬಂಧಿಸಲಾಗಿದೆ.

ಸುರಕ್ಷತೆಗೆ ಆದ್ಯತೆ ನೀಡಿ
-ಅರಶಿನಗುಂಡಿ ಪ್ರವಾಸಿ ತಾಣವಾಗಿದ್ದರೂ, ಕಾಡುಪ್ರದೇಶವಾದ ಇಲ್ಲಿ ಮಳೆಗಾಲದ ಆರಂಭದಿಂದ ಮುಗಿಯುವ ತನಕ ಮಳೆ ಸಾಮಾನ್ಯ. ಆಗ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ನಿರ್ಬಂಧ ಹೇರುವುದು ಸೂಕ್ತ.
-ಪೋಲಿಸ್‌ ಹಾಗೂ ಅರಣ್ಯ ಇಲಾಖೆಯವರು ಕಾವಲು ಪಡೆ ನೇಮಿಸಿ ಪ್ರದೇಶದ ಸುತ್ತಮುತ್ತ ತಡೆಬೇಲಿ ನಿರ್ಮಿಸುವುದರಿಂದ ಎದುರಾಗುವ ದುರಂತವನ್ನು ತಪ್ಪಿಸಲು ಸಾಧ್ಯ.

ನೀರಿಗಿಳಿಯದಿರುವುದೇ
ಅತ್ಯಂತ ಸುರಕ್ಷಿತ
ಕೆಲವು ಜಲಪಾತಗಳಲ್ಲಿ ನಿಷೇಧವಿಲ್ಲದಿದ್ದರೂ, ನೀರಿಗೆ ಇಳಿಯದಿರುವುದೇ ಉತ್ತಮ ಹಾಗೂ ಸುರಕ್ಷಿತ. ಈಜಲು ಬರುವವರೂ ಸಹ ನೀರಿನ ಆಳ ತಿಳಿಯದಿದ್ದರೆ ಅಥವಾ ನೀರಿನೊಳಗೆ ಕಲ್ಲುಗಳಿರುವುದು ತಿಳಿಯದಿದ್ದರೆ ಕಷ್ಟ. ಕಲ್ಲು ಬಂಡೆಗಳು ಪಾಚಿಗಟ್ಟಿ ಜಾರುತ್ತಿರುವುದರಿಂದ ಕಾಲು ಜಾರಿ ಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ ಕಲ್ಲು ಬಂಡೆಗಳ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುವ ದುಸ್ಸಾಹಸಕ್ಕೆ ಹೋಗಲೇಬಾರದು. ದೂರದಿಂದಲೇ ನೋಡಿ ಖುಷಿ ಪಡುವುದಷ್ಟೆ ಒಳ್ಳೆಯದು. ಇಂತಹ ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ದೇವರಗುಂಡಿ ಜಲಪಾತ
ಸುಳ್ಯದ ತೊಡಿಕಾನ ಬಳಿಯ ದೇವರಗುಂಡಿ ಜಲಪಾತ ಪ್ರವಾಸಿ ತಾಣದ ಜೊತೆಗೆ ಪಾವಿತ್ರತೆಯ ಸ್ಥಳವೂ ಹೌದು. ಇಲ್ಲಿಗೆ ಧಾರ್ಮಿಕ ಹಿನ್ನಲೆಯೂ ಇದೆ. ಜಲಪಾತ ವೀಕ್ಷಣೆಗೆ ಮಳೆಗಾಲದಲ್ಲಿಯೇ ತುಸು ಹೆಚ್ಚು. ಇಲ್ಲಿನ ಜಲಪಾಲದ ಕೆಳಗೆ ಸುಳಿಯಿದ್ದು, ಅಪಾಯಕಾರಿ ಸ್ಥಳ. ಇಲ್ಲಿ ನೀರಿಗೆ ಇಳಿಯುವುದು ಅಪಾಯಕಾರಿ. ಇಲ್ಲಿ ಈ ಹಿಂದೆ ನೀರಿಗೆ ಇಳಿದು ಮೂವರು ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬೆಳ್ತಂಗಡಿ: ತಾಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿರುವ ಬಂಡಾಜೆ ಜಲಪಾತ ಆಕರ್ಷಕವಾಗಿದ್ದು 200 ಅಡಿಗಿಂತ ಮೇಲಿಂದ ಧುಮ್ಮಿಕ್ಕಿ ಹರಿಯು ತ್ತಿದೆ. ಕಡಿರುದ್ಯಾವರದಿಂದ ಮುಂದಕ್ಕೆ ಸಾಗಿ ಬಳಿಕ, 9 ಕಿ.ಮೀ. ಚಾರಣ ನಡೆಸಿ ತೆರಳಬೇಕಿದೆ. ಅಪಾಯಕಾರಿ ಜÇಪಾತವಾದ ಕಾರಣ ಎಚ್ಚರಿಕೆ ಅತೀ ಆವಶ್ಯಕ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆ ಬಳಿಯ ಎರ್ಮಾಯಿ ಜಲಪಾತ. ಸುಮಾರು 120 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತ ಪ್ರಕೃತಿ ಪ್ರಿಯರ ಸುಂದರ ತಾಣವೂ ಆಗಿದೆ. ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರು ವುದರಿಂದ ಕಾಡು ರಸ್ತೆಯ ಮೂಲಕ ಈ ಜಲಪಾತವನ್ನು ನೋಡಲು ಸಾಗ ಬೇಕಿದೆ. ರಾಜ್ಯಾದ್ಯಂತ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಅಪಾಯ ಸಂಭವಿಸಿದಲ್ಲಿ
ಸಂಪರ್ಕ ಸಂಖ್ಯೆ
101 (ಅಗ್ನಿಶಾಮಕ, 112(ಪೊಲೀಸ್‌)

ಟಾಪ್ ನ್ಯೂಸ್

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಟ್ರಾಫಿಕ್ ಮೇಲೆ ಪರಿಣಾಮ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kundapura: ಕಾರು ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಟ್ರಾಫಿಕ್ ಮೇಲೆ ಪರಿಣಾಮ

accident

Kundapura: ಕಾರು ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.