ಮಾತನಾಡುವ ಮಹಾಲಿಂಗ: ಉಳ್ತೂರು ಮಹಾಲಿಂಗೇಶ್ವರ ದೇವಸ್ಥಾನ
Team Udayavani, Mar 11, 2021, 4:23 PM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮ ಮತ್ತದರ ಸುತ್ತಲಿನ ಪ್ರದೇಶದ ಜನರ ಆರಾಧ್ಯ ಮೂರ್ತಿ, ಎತ್ತರದ ಜಾಗದಲ್ಲಿ ನೆಲೆನಿಂತ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರು ಮಾತನಾಡುವ ಮಹಾಲಿಂಗ ಎಂದೇ ಪ್ರಖ್ಯಾತ. ದೇವರ ಮುಂದೆ ನಿಂತು ಗಟ್ಟಿ ಧ್ವನಿಯಲ್ಲಿ ಕೋರಿಕೆಗಳನ್ನು ಹೇಳಿಕೊಳ್ಳುತ್ತ ಪ್ರಾರ್ಥನೆ ಸಲ್ಲಿಸಿದರೆ ಇಷ್ಟಾರ್ಥಗಳನ್ನೆಲ್ಲ ಈಡೇರಿಸುತ್ತಾನೆ ಎನ್ನುವ ಕಾರಣಕ್ಕಾಗಿ ಮಾತನಾಡುವ ಮಹಾಲಿಂಗ ಎನ್ನುವ ಹೆಸರು ಬಂದಿದೆ.
ಈ ಶಿವಾಲಯದ ಗರ್ಭಗುಡಿ ಇರುವುದು ಬೃಹದಾಕಾರದ ಬಂಡೆಯ ಮೇಲೆ. ಹಾಗಾಗಿ ಹಿಂದೆಲ್ಲ ಊರಲ್ಲಿ ಯಾರಾದರೂ ಏನಾದರೂ ತಪ್ಪು ಮಾಡಿದಾಗ ಅರೆಕಲ್ಲ ಮೇಲೆ ಕೂತವ ನೋಡುತ್ತಾನೆ ಎನ್ನುತ್ತಿದ್ದರು.
ಇದನ್ನೂ ಓದಿ:ಈ ಶಿವಲಿಂಗಕ್ಕೆ ವರ್ಷದ ಎರಡು ಬಾರಿ ಮಾತ್ರ ಪೂಜೆ! ಹೆಬ್ರಿ ಸೀತಾನದಿಯಲ್ಲಿದೆ ಈ ಉದ್ಭವ ಲಿಂಗ
ಈ ದೇವಸ್ಥಾನದ ಪುರಾತತ್ವದ ಬಗ್ಗೆ 800- 900 ವರ್ಷಗಳ ಹಿಂದಿನ ಶಿಲಾ ಶಾಸನಗಳು ಸಾಕ್ಷಿ ನೀಡಿದೆ. ಮಹಾಲಿಂಗನನ್ನು ನಂಬಿ ಬಂದವರಿಗೆ ಇಲ್ಲಿಯ ತನಕ ಒಳಿತಷ್ಟೇ ಆಗಿದೆ. ದೇವರನ್ನೇ ಧಿಕ್ಕರಿಸಿದ ಮಂದಿ ಅದರ ಪರಣಾಮಗಳನ್ನು ಎದುರಿಸಿ ಮತ್ತೇ ದೇವರ ಮುಂದೆ ಮಂಡಿ ಊರಿ ಒಳಿತನ್ನು ಕಂಡಿದ್ದಾರೆ ಎನ್ನುವುದು ಭಕ್ತರ ನಂಬಿಕೆ.
ಇದನ್ನೂ ಓದಿ: ಶಿವ ಸೃಷ್ಟಿ, ಸ್ಥಿತಿ, ಲಯಗಳ ಕಾರಣಿಕರ್ತ
ಎತ್ತರದಲ್ಲಿರುವ ಕೆಲವೇ ಕೆಲವು ಶಿವನ ದೇವಾಲಯಗಳಲ್ಲಿ ಈ ದೇವಸ್ಥಾನ ಕೂಡ ಒಂದು. ಆಗಮ ಶಾಸ್ತ್ರಗಳಂತೆ ಮೂರು ಸಮಯಗಳಲ್ಲಿ ಬಲಿ ಪೂಜೆ ಪಡೆಯುವ ಮಹಾಲಿಂಗೇಶ್ವರ ಅತ್ಯಂತ ಶಕ್ತಿದಾಯಕ.
ಇದನ್ನೂ ಓದಿ: ರುದ್ರಾಕ್ಷಿ ರೂಪದ ಕೋಟಿ ಶಿವಲಿಂಗ; ಇದು ಪ್ರಸಿದ್ಧ ಕೋಟೇಶ್ವರದ ಕೋಟಿಲಿಂಗೇಶ್ವರ ಸನ್ನಿಧಿ
ರಾಷ್ಟ್ರೀಯ ಹೆದ್ದಾರಿಯ ತೆಕ್ಕಟ್ಟೆಯಿಂದ 3 ಕಿ.ಮೀ ಉತ್ತರಕ್ಕೆ ಇರುವ ದೇವಾಲಯಕ್ಕೆ ಉತ್ತಮ ರಸ್ತೆಯ ವ್ಯವಸ್ಥೆ ಇದೆ. ತಲುಪುವುದು ಅತ್ಯಂತ ಸುಲಭ.
ಅಜಿತ್ ಶೆಟ್ಟಿ ಕಟ್ಟೆಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.