Uppunda: ಮದುವೆ ಕಾರ್ಯಕ್ರಮಕ್ಕೆಂದು ತೆಗೆದುಕೊಂಡ ಚಿನ್ನ ಹಿಂದಕ್ಕೆ ನೀಡದೆ ಮೋಸ
Team Udayavani, Jun 6, 2024, 8:06 PM IST
ಉಪ್ಪುಂದ: ಮದುವೆ ಕಾರ್ಯಕ್ರಮಕ್ಕೆ ಹೋಗಲು ತಗೆದುಕೊಂಡು ಹೋದ ಚಿನ್ನವನ್ನು ವಾಪಸು ಕೊಡದೆ ಮೋಸ ಮಾಡಿರುವ ಘಟನೆ ಉಪ್ಪುಂದದಲ್ಲಿ ನಡೆದಿದೆ.
ಉಪ್ಪುಂದ ನಿವಾಸಿ ಜ್ಯೋತಿ ಅವರಿಗೆ ಶಶಿಕಲಾ ಅವರು 2019ರಲ್ಲಿ ಉಪ್ಪುಂದ ಬಟ್ಟೆ ಅಂಗಡಿಯಲ್ಲಿ ನನಗೆ ಮದುವೆ ಕಾರ್ಯಕ್ರಮಕ್ಕೆ ಹೋಗಲು ಇದೆ ಎಂದು ಹೇಳಿ ನಿನ್ನ ಬಳಿ ಇರುವ ಚಿನ್ನಾಭರಣ ಧರಿಸಲು ಕೊಡು ಮದುವೆಗೆ ಹೋಗಿ ಬಂದ ಅನಂತರ ಚಿನ್ನಾಭರಣ ವಾಪಸು ಕೊಡುವುದಾಗಿ ಹೇಳಿದ್ದರು. ಅದರಂತೆ ಅವರ ಮನೆಯಲ್ಲಿದ್ದ ಅವರ ಅಕ್ಕನ 3 ಚಿನ್ನದ ಸರ, 1 ಜತೆ ಕಿವಿಯೋಲೆ ಮತ್ತು ಮಾಟಿಯನ್ನು ಕೊಟ್ಟಿದ್ದರು.
ಬಳಿಕ ಚಿನ್ನ ನೀಡದೆ ಸತಾಯಿಸಿದ್ದು, 1 ವರ್ಷದ ಹಿಂದೆ ಸಖೀ ಒನ್ ಸ್ಟಾಪ್ ಸೆಂಟರ್ ಮಹಿಳಾ ನಿಲಯಕ್ಕೆ ದೂರು ನೀಡಿದ್ದು, ಅನಂತರದಲ್ಲಿ ನೀಡಿದ 3 ಚಿನ್ನದ ಸರಗಳಲ್ಲಿ ಬ್ಯಾಂಕ್‌ನಲ್ಲಿ ಅಡವಿಟ್ಟ 1 ಚಿನ್ನದ ಸರವನ್ನು ಬಿಡಿಸಿಕೊಟ್ಟಿದ್ದರು. ಬಾಕಿ ಉಳಿದ ಚಿನ್ನಾಭರಣಗಳನ್ನು ವಾಪಸು ನೀಡದೆ ಸತಾಯಿಸಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಳಾಗಿದೆ.
ಇದನ್ನೂ ಓದಿ: Gundlupete: ಭಾರಿ ಮಳೆಗೆ ಹೊಳೆಯಂತಾದ ರಸ್ತೆಗಳು… ಕೊಚ್ಚಿ ಹೋದ ಬೆಳೆಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.