Uppunda ಜಾತ್ರೆ ಸಂಪನ್ನ: ಓಕುಳಿಯಾಟ, ತೆಪ್ಪೋತ್ಸವ
Team Udayavani, Nov 19, 2024, 3:09 PM IST
ಉಪ್ಪುಂದ: ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಉಪ್ಪುಂದ ಶ್ರೀ ಮನ್ಮಹಾರಥೋತ್ಸವ ಅಂಗವಾಗಿ ನ.17ರಂದು ರಾತ್ರಿ ದೇವಸ್ಥಾನದ ಎದುರುಗಡೆಯಿರುವ ಓಕುಳಿ ಕೆರೆಯಲ್ಲಿ ಓಕುಳಿಯಾಟ ಹಾಗೂ ನ.18ರಂದು ಮುಂಜಾನೆ ಬಿಜೂರಿನಲ್ಲಿ ಸುಮನಾವತಿ ನದಿಯಲ್ಲಿ ತೆಪ್ಪೋತ್ಸವ ಸಂಪ್ರದಾಯ ಬದ್ಧವಾಗಿ ನಡೆಯಿತು.
ವೈಭವದ ಜಲ ವಿಹಾರ
ಬಂಟ ಸಮುದಾಯದವರಿಂದ ಓಕುಳಿಯಾಟ ನಡೆಯಿತು. ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯ ಮೂಲಕ ಬಿಜೂರು ಸುಮಾನವತಿ ನದಿ ತೀರಕ್ಕೆ ತೆರಳಿ ವೇದಮೂರ್ತಿ ಶೀನಿವಾಸ ಅಡಿಗ ನೇತೃತ್ವದಲ್ಲಿ ಸಕಲ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ವಾದ್ಯ ಘೋಷಗಳೊಂದಿಗೆ, ಸಂಗೀತದೊಂದಿಗೆ ಸುಮನಾವತಿ ನದಿಯಲ್ಲಿ ದೋಣಿಯ ಮೂಲಕ ಅಮ್ಮನವರ ವೈಭವದ ಜಲ ವಿಹಾರ ನಡೆಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ದೇವರ ತೆಪ್ಪೋತ್ಸವದ ಬಳಿಕ ಸುಮನಾವತಿ ನದಿಯಲ್ಲಿ ತೀರ್ಥ ಸ್ನಾನ ಮಾಡಿ ಪುನೀತರಾದರು. ಬಳಿಕ ಬ್ರಹ್ಮನ ಕಟ್ಟೆ ಬಿಜೂರು ಅರೆಕಲ್ಲು ಹಿರೇ ಮಹಾಲಿಂಗೈಶ್ವರ ದೇವಸ್ಥಾನ (ಅಮ್ಮನವರ ಪತಿ ಮನೆ), ಬಿಜೂರು ದುರ್ಗಾಪರಮೇಶ್ವರೀ ದೇವಸ್ಥಾನ (ತಂಗಿ ಮನೆ), ಹೊಳ್ಳರ ಮನೆ ಬಳಿಯ ಬಸ್ರೂರು ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಿತು. ಬಳಿಕ ನಗರೋತ್ಸವ ನಡೆಯಿತು.
ಧ್ವಜಾವರೋಹಣದೊಂದಿಗೆ ಉಪ್ಪುಂದ ದುರ್ಗಾಪರಮೇಶ್ವರೀ ದೇವಸ್ಥಾನದ ಈ ಬಾರಿಯ ಮನ್ಮಹಾ ರಥೋತ್ಸವ ಸಂಭ್ರಮದಿಂದ ನಡೆಯಿತು. ದೇವಸ್ಥಾನದ ಆಡಳಿತ ಧರ್ಮದರ್ಶಿ ಯು.ಸತೀಶ್ ಶೆಟ್ಟಿ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸದಸ್ಯರ ಸಹಕಾರದೊಂದಿಗೆ ಜಾತ್ರಾ ಮಹೋತ್ಸವವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಎರಡು ಬೈಕ್ , ನಾಲ್ಕು ಮೊಬೈಲ್ ಕಳವು
ಕೋಟೇಶ್ವರ ಹಬ್ಬ ಹಾಗೂ ರಜಾ ದಿನ ಉಪ್ಪುಂದ ಕೊಡಿ ಹಬ್ಬ ಬಂದಿರುವುದರಿಂದ ಜನಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿತ್ತು. ಜಾತ್ರೆಗೆ ಹೋಗುವಾಗ ರಾ.ಹೆದ್ದಾರಿ ನಿಲ್ಲಿಸಿ ಹೋಗಿದ್ದ ಎರಡು ಬೈಕುಗಳು ನಾಪತ್ತೆ ಆಗಿತ್ತು. ಇದರಲ್ಲಿ ಒಂದು ಬೈಕ್ ಹಳ್ಳಕ್ಕೆ ಎಸೆದು ಹೋಗಿದ್ದರು. ಹುಡುಕಾಟದ ಬಳಿಕ ಸಿಕ್ಕಿದೆ. ಕದ್ದ ಬೈಕನ್ನು ಸ್ವಲ್ಪ ದೂರದಲ್ಲಿ ಬಿಟ್ಟು ಹೋದ ಬಗ್ಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಇನ್ನೊಂದು ಬೈಕ್ ನಾಪತ್ತೆಯಾಗಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾತ್ರೆಯಲ್ಲಿ ಕಳವು ಮಾಡಿರುವ 4 ಮೊಬೈಲ್ ಸಿಕ್ಕಿದ್ದು, ಕದ್ದ ಕಳ್ಳನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.