ಉಪ್ಪುಂದ : ಸಾವಿನಲ್ಲೂ ಒಂದಾದ ವೃದ್ಧ ಜೋಡಿ !
Team Udayavani, Dec 28, 2022, 6:45 AM IST
ಉಪ್ಪುಂದ : ಪತಿ ಸಾವಿನ ನಡುವೆಯೇ ಪತ್ನಿ ನಿಧನ ಹೊಂದಿದ ಘಟನೆ ಡಿ.25ರಂದು ರಾತ್ರಿ ಸಂಭವಿಸಿದೆ.
ಉಪ್ಪುಂದ ಗ್ರಾಮದ ಸಣ್ಣ ಬೆಸ್ಕೂರು ಮನೆ ನಿವಾಸಿ ಮುಡೂರ ದೇವಾಡಿಗ (85) ಮತ್ತು ಅವರ ಪತ್ನಿ ಬಿಜೂರು ಗ್ರಾಮದ ನಿವಾಸಿ ಸೊರೆಬೆಟ್ಟು ಕ್ರಿಶ್ನಿ ದೇವಾಡಿಗ (77) ನಿಧನ ಹೊಂದಿದವರು.
ಉಪ್ಪುಂದ ಗ್ರಾಮದ ಸಣ್ಣ ಬೆಸ್ಕೂರು ಮನೆ ನಿವಾಸಿ ಮುಡೂರ ದೇವಾಡಿಗರಿಗೆ ವಯೋಸಹಜ ಅನಾರೋಗ್ಯ ಕಾಡಿತ್ತು. ರವಿವಾರ ರಾತ್ರಿ ಅವರ ಪತ್ನಿ ಮನೆಯಾದ ಬಿಜೂರಿನಲ್ಲಿ ಸಾವನ್ನಪ್ಪಿದ್ದರು. ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡುತ್ತಿದ್ದ ವೇಳೆ ಶವದ ಮುಂದೆ ಕುಳಿತಿದ್ದ ಅವರ ಪತ್ನಿ ಅಲ್ಲಿಯೇ ಕುಸಿದು ಬಿದ್ದರು. ನೆರೆದವರು ಏನಾಯಿತು ಎಂದು ನೋಡುವಷ್ಟರಲ್ಲಿ ಕ್ರಿಶ್ನಿ ಪತಿಯ ಹಾದಿ ತುಳಿದಾಗಿತ್ತು!. ಸಂಸಾರದ ನೊಗವನ್ನು ಜತೆಯಾಗಿಯೇ ಹೊತ್ತವರು ಸಾವಿನಲ್ಲಿಯೂ ಜತೆಯಾಗಿ ಪ್ರಯಾಣಿಸಿದ್ದರು. ಮೃತರು ಐವರು ಪುತ್ರರನ್ನು ಅಗಲಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್: ದೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.