ಬೇರೆಡೆ ವಾರಾಹಿ ನೀರು ಪೂರೈಕೆಗೆ ಅಪಸ್ವರ
ಕಾರ್ಕಳ- ಕುಡಿಯುವ ನೀರಿಗೆ 1,215 ಕೋ.ರೂ, ಕೃಷಿಗೆ 108 ಕೋ.ರೂ.
Team Udayavani, Feb 11, 2022, 6:05 PM IST
ಕುಂದಾಪುರ: ಕಳೆದ 42 ವರ್ಷಗಳಿಂದ ಉಡುಪಿ ಜಿಲ್ಲೆಯ ಜನತೆಗೆ, ಕೃಷಿಗೆ ನೀರುಣಿಸುವ ವಾರಾಹಿ ನೀರಾವರಿ ಯೋಜನೆಯೇ ಇನ್ನೂ ಪೂರ್ಣಗೊಂಡಿಲ್ಲ. ಅದಕ್ಕೂ ಮುನ್ನ ಉಡುಪಿ, ಹೆಬ್ರಿ, ಕಾರ್ಕಳ ತಾಲೂಕಿಗೂ ನೀರು ಹರಿಸಲು ಮುಂದಾಗಿದೆ. ಇದಕ್ಕಾಗಿ 1,215 ಕೋ.ರೂ. ಬಿಡುಗಡೆಯಾಗಿದೆ. ಯೋಜನೆ ಪೂರ್ಣವಾಗುವ ಮೊದಲು ಎಲ್ಲೆಡೆ ನೀರು ಕೊಂಡೊಯ್ಯುವುದಕ್ಕೆ ರೈತರ ಅಪಸ್ವರ ಕೇಳಿ ಬಂದಿದೆ.
ಕಾರ್ಕಳ, ಹೆಬ್ರಿಗೆ
ವಾರಾಹಿ ನೀರನ್ನು ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಜನರಿಗೆ ನೀಡುವ ಸಲುವಾಗಿ 1,215 ಕೋ.ರೂ. ಮಂಜೂರಾಗಿದೆ. 60 ಸಾವಿರ ಮನೆಗಳಿಗೆ 359 ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿ 1,115 ಜನವಸತಿ ಪ್ರದೇಶಕ್ಕೆ ಸರಬರಾಜು ಮಾಡುವ ಗುರಿ ಇದೆ.
ಕುಂದಾಪುರಕ್ಕೆ
ಜಪ್ತಿಯಿಂದ ಕುಂದಾಪುರ ಪುರಸಭೆ ವ್ಯಾಪ್ತಿ, 7 ಗ್ರಾ.ಪಂ.ಗಳ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತಿದೆ.
ಸೌಕೂರು: 1,350 ಹೆ.ಗೆ ನೀರು ವಾರಾಹಿ ನದಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗುಡ್ಡೆಕೊಪ್ಪದಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ 88 ಕಿ.ಮೀ. ಹರಿದು ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪ ಅರಬಿ ಸಮುದ್ರ ಸೇರುತ್ತದೆ. ಈ ನದಿ ಪಾತ್ರದಲ್ಲಿ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸುವ ಉದ್ದೇಶದಿಂದ ತಾಲೂಕಿನ ಬಳ್ಕೂರು ಎಂಬಲ್ಲಿ ನದಿಗೆ ಅಡ್ಡಲಾಗಿ ಉಪ್ಪು ನೀರು ತಡೆ ಅಣೆಕಟ್ಟು ರಚಿಸಲಾಗಿದೆ. ಸೌಕೂರು ಗ್ರಾಮದ ಹತ್ತಿರ ಜಾಕ್ವೆಲ್ ನಿರ್ಮಿಸಿ 0.589 ಟಿಎಂಸಿ ನೀರನ್ನು ಏರು ಕೊಳವೆ ಮುಖಾಂತರ ಹರಿಸಿ 1,350 ಹೆ. ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸೌಕೂರು ಏತ ನೀರಾವರಿ ಯೋಜನೆ ಚಾಲನೆಯಲ್ಲಿದೆ. 81 ಕೋ.ರೂ.ಗಳ ಈ ಯೋಜನೆಯಲ್ಲಿ 8 ಗ್ರಾಮಗಳ ಕೃಷಿಗೆ ನೀರು ದೊರೆಯುತ್ತದೆ. ಪ್ರಸ್ತುತ ಕಾಮಗಾರಿಯಡಿ ಡೆಲಿವರಿ ಚೇಂಬರ್, ಜಾಕ್ವೆಲ್ ಕಂ ಪಂಪ್‌ಹೌಸ್ ನಿರ್ಮಾಣ ಅಂತಿಮ ಘಟ್ಟ ತಲುಪಿದ್ದು ಚೆಕ್ ಡ್ಯಾಂ, ರೈಸಿಂಗ್ ಮೇನ್, ಗ್ಯಾನಿಟಿ ಮೇನ್, ಸಬ್‌ಸ್ಟೇಶನ್ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸ್ತುತ ಯೋಜನೆಯಡಿ ಕಾಮಗಾರಿಗೆ 22.26 ಕೋ.ರೂ. ವ್ಯಯವಾಗಿದೆ.
ಉಡುಪಿಗೆ
ಉಡುಪಿ ನಗರಕ್ಕೆ ಕೊಳವೆ ಮೂಲಕ ವಾರಾಹಿ ನೀರು ಒದಗಿಸುವ 282 ಕೋ.ರೂ. ಅಮೃತ ಯೋಜನೆಯೂ ನಡೆಯುತ್ತಿದೆ. ಪೈಪ್‌ಲೈನ್ ಹಾದು ಹೋಗುವ ಗ್ರಾ.ಪಂ.ಗಳಿಗೆ ಶುದ್ಧನೀರು ಕೊಡುವ ಶರತ್ತಿನ ಮೇಲೆ ವಿಧಾನಸಭೆ ಅರ್ಜಿ ಸಮಿತಿ ಮೂಲಕ ರೈತಸಂಘದ ತಕರಾರು ಅರ್ಜಿ ಇತ್ಯರ್ಥಗೊಂಡು ಕಾಮಗಾರಿ ನಡೆಯುತ್ತಿದೆ.
ಕಾರ್ಕಳದ ಅಜೆಕಾರು ಗ್ರಾಮದ ಬಳಿ ವೆಂಟೆಡ್ ಡ್ಯಾಂ ನಿರ್ಮಿಸಿ ಬ್ಯಾರೇಜ್ ಹತ್ತಿರ ಏತ ನೀರಾವರಿ ರೂಪಿಸಿ ಏರುಕೊಳವೆಗಳ ಮೂಲಕ ನೀರಾವರಿ ಸೌಲಭ್ಯ ಒದಗಿಸುವ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಸಾಕಾರಗೊಳ್ಳಲಿದೆ. 1 ಕ್ಯೂಸೆಕ್ಸ್ ನೀರನ್ನು ಏರುಕೊಳವೆಗಳ ಮೂಲಕ ಹರಿಸಿ 1,500 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. 108 ಕೋಟಿ ರೂ. ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರಕಿದ್ದು ಟರ್ನ್ಕೀ ಆಧಾರದ ಮೇಲೆ 113.65 ಕೋಟಿ ರೂ.ಗೆ ಕಾಮಗಾರಿ ವಹಿಸಿಕೊಡಲಾಗಿದೆ.
ವಾರಾಹಿ ಮೇಲೆ ಕಣ್ಣು
ಜಿಲ್ಲೆಯಲ್ಲಿ ಹಲವಾರು ತುಂಬಿ ಹರಿಯುವ ನದಿಗಳಿರುವಾಗ ಎಲ್ಲರ ಕಣ್ಣು ವಾರಾಹಿ ನದಿ ಮೇಲೆ ಏಕೆ ಎಂದು ರೈತ ಸಂಘ ಪ್ರಶ್ನಿಸಿದೆ. ಸ್ವರ್ಣ, ಸೀತಾ, ಮಡಿಸಾಲು ಮುಂತಾದ ತುಂಬಿ ಹರಿಯುವ ನದಿಗಳು ಇರುವಾಗ ಜಿಲ್ಲೆಯ ಕುಡಿಯುವ ನೀರಿನ ಹೆಸರಿನಲ್ಲಿ ವಾರಾಹಿ ನದಿ ನೀರನ್ನು ಬೇರೆಡೆಗೆ ಕೊಂಡೊಯ್ಯುವ ಯೋಜನೆಗಳ ಹಿಂದೆ ವಾರಾಹಿ ನೀರಾವರಿ ಮೂಲ ಯೋಜನೆಯನ್ನು ಹಳ್ಳ ಹಿಡಿಸುವ ಷಡ್ಯಂತ್ರವಿದೆ ಎಂಬ ಆರೋಪವಿದೆ.
1979ರಲ್ಲಿ ಆರಂಭ
1979ರಲ್ಲಿ ಆರಂಭವಾಗಿ ಕುಂಟುತ್ತಾ ಸಾಗಿ ಎಡದಂಡೆಯಷ್ಟೇ ದೊರೆತಿದೆ. ಬಲದಂಡೆ ಪ್ರಗತಿಯ
ಲ್ಲಿದೆ. ಜಿಲ್ಲೆಯ 38,800 ಎಕರೆ ಭೂ ಪ್ರದೇಶಕ್ಕೆ ನೀರುಣಿಸಲು ಕುಂದಾಪುರ ಹಾಗೂ ಉಡುಪಿ ತಾಲೂಕನ್ನು ಕೇಂದ್ರೀಕರಿಸಿ ಆರಂಭಿಸಲಾಗಿತ್ತು. 9.43 ಕೋ.ರೂ.ಗಳಲ್ಲಿ ಆರಂಭವಾದ ಯೋಜನೆ 650 ಕೋ. ರೂ.ಗೆ ತಲುಪಿದೆ.
ರೈತ ವಿರೋಧಿ ಕ್ರಮ
ಎಡ ದಂಡೆ, ಬಲ ದಂಡೆ, ಏತ ನೀರಾವರಿ ವ್ಯಾಪ್ತಿಯ 15 ಸಾವಿರ ಹೆ.ಗೆ ಇನ್ನೂ ನೀರು ಹಾಯಿಸದೆ ಬೇರೆ ಬೇರೆ ಹೆಸರಿನಲ್ಲಿ ವಾರಾಹಿ ನೀರನ್ನು ಕೊಂಡೊಯ್ಯುವುದು ರೈತ ವಿರೋಧಿ ಕ್ರಮ.
-ಕೆ. ವಿಕಾಸ್ ಹೆಗ್ಡೆ ,ಉಡುಪಿ ಜಿಲ್ಲಾ ರೈತ ಸಂಘದ ಜಿಲ್ಲಾ ವಕ್ತಾರ
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.