ಅಪಘಾತಗಳಿಗೆ ಆಹ್ವಾನ ನೀಡುತ್ತಿರುವ ವತ್ತಿನೆಣೆ ತಿರುವು
Team Udayavani, Jan 15, 2021, 2:20 AM IST
ಬೈಂದೂರು: ಕೇಂದ್ರ ಸರಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಗಮ ಸಂಚಾರದ ಹಿತದೃಷ್ಟಿಯಿಂದ ಚತುಷ್ಪಥ ಕಾಮಗಾರಿ ಹಾಗೂ ಉತ್ತಮ ತಂತ್ರಜ್ಞಾನದ ರಸ್ತೆಗಳನ್ನು ನಿರ್ಮಿಸುತ್ತಿದೆ. ಆದರೆ ಈ ಚತುಷ್ಪಥ ಕಾಮಗಾರಿಯ ಅವಾಂತರದಿಂದಾಗಿ ಬೈಂದೂರು ಸಮೀಪದ ವತ್ತಿನೆಣೆ ಬಳಿ ಅಪಘಾತಗಳು ನಿರಂತರ ಸಂಭವಿಸುತ್ತಿವೆ.
ನಿರಂತರ ರಸ್ತೆ ಅಪಘಾತ :
ಹೆದ್ದಾರಿ ಕಾಮಗಾರಿ ನಡೆಸುವ ಕಂಪೆನಿಗೆ ಬೈಂದೂರು ವತ್ತಿನೆಣೆ ಸವಾಲಾಗಿ ಪರಿಣಮಿಸಿದೆ. ಜೇಡಿ ಮಣ್ಣಿನಿಂದಾವೃತವಾದ ಗುಡ್ಡವನ್ನು ಕೊರೆದು ರಸ್ತೆ ನಿರ್ಮಾಣ ಮಾಡಿರುವುದು ಆರಂಭದಲ್ಲಿ ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿತ್ತು. ಗುಡ್ಡ ಕುಸಿತ ಉಂಟಾಗಿ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳ ನಿರಂತರ ಒತ್ತಡದಿಂದ ಸುಗಮ ರಸ್ತೆ ನಿರ್ಮಾಣವಾದರೂ ಅವೈಜ್ಞಾನಿಕ ಚಿಂತನೆಯಿಂದಾಗಿ ನಿರಂತರ ಅಪಘಾತಗಳು ನಡೆಯುತ್ತಿದೆ. ಹೀಗಾಗಿ ಹೆದ್ದಾರಿ ಪ್ರಾಧಿಕಾರ ಅಪಾಯಕಾರಿ ತಿರುವುಗಳನ್ನು ಸರಿಪಡಿಸಿ ರಸ್ತೆ ಪ್ರಯಾಣಿಕರಿಗೆ ಅಪಘಾತ ನಿಯಂತ್ರಿಸುವ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ. ಶಿರೂರು ಕಡೆಯಿಂದ ಬೈಂದೂರು ಮಾರ್ಗವಾಗಿ ಸಾಗುವಾಗ ಎಡಭಾಗದ ರಸ್ತೆ ಸಾಕಷ್ಟು ಎತ್ತರದಲ್ಲಿದೆ. ಇಳಿಜಾರಿನಲ್ಲಿ ಒಮ್ಮೆಲೆ ತಿರುವು ಎದುರಾಗುವುದರಿಂದ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಬಲಭಾಗದ ರಸ್ತೆಗೆ ಉರುಳುತ್ತಿದೆ.ಕಳೆದ ಆರು ತಿಂಗಳುಗಳಲ್ಲಿ ಎಂಟಕ್ಕೂ ಅಧಿಕ ಘಟನೆಗಳು ನಡೆದಿವೆ.
ಹೀಗಾಗಿ ಇಲಾಖೆ ಮತ್ತು ಕಾರ್ಯನಿರ್ವಾಹಕ ಕಂಪೆನಿ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ವತ್ತಿನೆಣೆ ಅಪಾಯದ ತಿರುವು ಹಾಗೂ ಅವೈಜ್ಞಾನಿಕ ಕಾಮಗಾರಿ ಕುರಿತು ಈ ಹಿಂದೆ ಆರಕ್ಷಕ ಇಲಾಖೆ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದಿದೆ. ನಿರಂತರ ಅಪಘಾತ ನಡೆಯುವುದಕ್ಕೆ ಹೆದ್ದಾರಿ ಅಸಮರ್ಪಕತೆ ಕಾರಣವಾಗಿತ್ತು. ಹೀಗಾಗಿ ಶೀಘ್ರ ಸರಿಪಡಿಸಲು ತಿಳಿಸಿದ್ದು ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ. -ಸಂತೋಷ ಕಾಯ್ಕಿಣಿ, ವೃತ್ತನಿರೀಕ್ಷಕರು ಬೈಂದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.