ಸಾಗಾಟ ಸಮಸ್ಯೆ: ಹಣ್ಣು- ತರಕಾರಿ ದರ ಏರಿಕೆ


Team Udayavani, Apr 30, 2021, 4:00 AM IST

ಸಾಗಾಟ ಸಮಸ್ಯೆ: ಹಣ್ಣು- ತರಕಾರಿ ದರ ಏರಿಕೆ

ಕುಂದಾಪುರ: ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬಿಗಿ ಕರ್ಫ್ಯೂ ನಿಯಮವನ್ನು ಜಾರಿಗೊಳಿಸಿದ್ದರಿಂದ ಹಣ್ಣು, ತರಕಾರಿಯಂತಹ ಅಗತ್ಯ ವಸ್ತುಗಳ ಸಾಗಾಟ ಹಾಗೂ ಪೂರೈಕೆಯಲ್ಲಿ ವ್ಯತ್ಯಯ, ಜತೆಗೆ ಆಗಾಗ ಬರುತ್ತಿರುವ ಮಳೆಯಿಂದಾಗಿ ತರಕಾರಿ, ಹಣ್ಣುಗಳ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದ್ದು, ಇದರ ನೇರ ಪರಿಣಾಮ ಗ್ರಾಹಕರ ಮೇಲೆ ಬೀಳುವಂತಾಗಿದೆ.

ಕುಂದಾಪುರದಲ್ಲಿ ಕೆಲವೇ ಕೆಲವು ಹಣ್ಣು, ತರಕಾರಿ ವ್ಯಾಪಾ ರಿಗಳಿರುವುದರಿಂದ ಇಲ್ಲಿಗೆ ಯಾವುದೇ ಹೋಲ್‌ಸೇಲ್‌ ಹಣ್ಣು, ತರಕಾರಿ ಸಾಗಾಟ ವಾಹನಗಳು ಬರುತ್ತಿಲ್ಲ. ಇಲ್ಲಿನ ವರ್ತಕರು ಪ್ರತೀ ದಿನ ಬೆಳಗ್ಗೆ ಬೇಗ ಆದಿ ಉಡುಪಿಯ ಎಪಿಎಂಸಿ ಮಾರುಕಟ್ಟೆಗೆ ಹೋಗಿ ಅಲ್ಲಿಂದ ತರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಈ ಹಿಂದೆ ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ, ಮತ್ತಿತರ ಕಡೆಗಳಿಂದ ಕುಂದಾಪುರ, ಕೋಟೇಶ್ವರ, ಬೈಂದೂರಿಗೆ ಹಣ್ಣು, ತರಕಾರಿಯನ್ನು ಸಾಗಾಟ ಮಾಡಲಾಗುತ್ತಿತ್ತು. ಇದಲ್ಲದೆ ಕುಂದಾಪುರ, ಉಡುಪಿ, ಬ್ರಹ್ಮಾವರ ಸಂತೆಯಿಂದಲೂ ಇಲ್ಲಿನ ವ್ಯಾಪಾರಿಗಳು ಹಣ್ಣು, ತರಕಾರಿಗಳನ್ನು ತರುತ್ತಿದ್ದರು. ಆದರೆ ಈಗ ಇಲ್ಲಿಗೆ ಯಾವುದೇ ತರಕಾರಿ, ಹಣ್ಣು- ಹಂಪಲುಗಳು ಪೂರೈಕೆಯಾಗುತ್ತಿಲ್ಲ.

ದರ ಏರಿಕೆಗೆ ಕಾರಣಗಳೇನು? :

ಕೆಲವು ವ್ಯಾಪಾರಿಗಳು ಕೋವಿಡ್ ಕಾರಣಕ್ಕೆ ಜನ ಎಷ್ಟೇ ದರ ನಿಗದಿಪಡಿಸಿದರೂ, ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಾರೆ ಎನ್ನುವ ನೆಪವೊಡ್ಡಿ ದರ ಏರಿಸುತ್ತಿದ್ದಾರೆ. ಆದರೆ

ಕುಂದಾಪುರದ ವರ್ತ ಕರು ಉಡುಪಿಗೆ ಹೋಗಿ ತರಕಾರಿ, ಹಣ್ಣು ತರಬೇಕಿದ್ದು, ಅದರ ಸಾಗಾಟ, ಕೂಲಿಯಾಳುಗಳು, ವೇಸ್ಟೇಜ್‌ ವೆಚ್ಚ ಇವುಗಳನ್ನೆಲ್ಲ  ಗಮನದಲ್ಲಿಟ್ಟುಕೊಂಡು ಕಳೆದ ಒಂದು ವಾರದಿಂದ ವಿವಿಧ ತರಕಾರಿ ಬೆಲೆಯನ್ನು ಏರಿಸಲಾಗಿದೆ. ಇನ್ನು ಹಸಿ ಮೆಣಸು, ಕ್ಯಾರೆಟ್‌, ಕ್ಯಾಲಿಫÉವರ್‌, ಕ್ಯಾಬೇಜ್‌ಗಳೆಲ್ಲ ಮಳೆ ಬಿದ್ದ ತತ್‌ಕ್ಷಣ ಕೊಳೆತು ಹೋಗುತ್ತಿದ್ದು, ಅಗತ್ಯದಷ್ಟು ಇಲ್ಲದ್ದರಿಂದ ಏಕಾಏಕಿ ಬೆಲೆ ಏರಿಕೆಯಾಗುತ್ತದೆ. ಇದಲ್ಲದೆ ಹಿಂದೆ ಉಡುಪಿಗೆ ಬೇರೆ ಬೇರೆ ಜಿಲ್ಲೆಗಳಿಂದ 15-20 ಮಂದಿ ಹೋಲ್‌ಸೇಲ್‌ ವ್ಯಾಪಾರಿಗಳು ಹಣ್ಣು, ತರಕಾರಿ ತರುತ್ತಿದ್ದರು. ಆದರೆ ಈಗ ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ 4-5 ಮಂದಿ ಮಾತ್ರ ಬರುತ್ತಿದ್ದು, ಕಡಿಮೆ ಸಾಮಗ್ರಿಯಿಂದಾಗಿ ಬೇಡಿಕೆ ಹೆಚ್ಚಿದ್ದು, ಅವರಿಂದಲೇ ನಾವು ದುಬಾರಿ ಬೆಲೆ ಕೊಟ್ಟು ಖರೀದಿಸಬೇಕಾಗಿದೆ ಎನ್ನುತ್ತಾರೆ ವರ್ತಕರು.

ಹಳ್ಳಿಗಳಿಂದಲೂ ಬರುತ್ತಿಲ್ಲ : ಕುಂದಾಪುರ ನಗರಕ್ಕೆ ಕುಂದಬಾರಂದಾಡಿ, ನೂಜಾಡಿ, ಹಳ್ಳಿಹೊಳೆ, ಅಮಾಸೆಬೈಲು ಮತ್ತಿತರ ಕಡೆಗಳಿಂದ ರೈತರು ತಾವು ಬೆಳೆದ ತರಕಾರಿಗಳನ್ನು ತರುತ್ತಿದ್ದರು. ಆದರೆ ಈಗ ಪ್ರಮುಖವಾಗಿ ಅವರಿಗೆ ಬರಲು ಬಸ್‌ ಇಲ್ಲ. ಕುಂದಾಪುರದಿಂದ ತುಂಬಾ ದೂರ ಇರುವುದರಿಂದ ಬಾಡಿಗೆ ಮಾಡಿಕೊಂಡು ಬಂದರೆ ಅದರಲ್ಲೇನು ಲಾಭವೂ ಇಲ್ಲ. ಹೀಗಾಗಿ ರೈತರು ತಾವು ಬೆಳೆದ ಬೆಂಡೆ, ತೊಂಡೆ, ಅಲಸಂಡೆ, ಬಸಳೆ, ಸೌತೆಕಾಯಿ, ಬದನೆ, ಮತ್ತಿತರ ತರಕಾರಿಗಳನ್ನು ಕುಂದಾಪುರಕ್ಕೆ ತರಲಾಗದೇ, ಮನೆ ಅಕ್ಕ- ಪಕ್ಕ ಮಾತ್ರ ಮಾರುವಂತಾಗಿದ್ದು, ಕೆಲವೆಲ್ಲ ಕೊಳೆತು ಹೋಗುವಂತಹ ಸ್ಥಿತಿ ಇದೆ. ಹಳ್ಳಿಗಳಿಂದ ಊರ ತಾಜಾ ತರಕಾರಿಗಳ ಪೂರೈಕೆಯಾಗದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಇದು ಎಲ್ಲರಿಗೂ ಕಷ್ಟದ ಸಮಯವಾಗಿದ್ದು, ಆದಷ್ಟು ಎಲ್ಲ ವರ್ತಕರಲ್ಲಿಯೂ ಭಾರೀ ಪ್ರಮಾಣದಲ್ಲಿ ಬೆಲೆ ಏರಿಸದಂತೆ ಮನವಿ ಮಾಡಿಕೊಳ್ಳಲಾಗಿದೆ. ಅದಾಗಿಯೂ ದರ ಮಿತಿಗಿಂತ ಗರಿಷ್ಠ ಪ್ರಮಾಣದಲ್ಲಿ ತರಕಾರಿ, ಹಣ್ಣು ಬೆಲೆ ಏರಿಸುತ್ತಿದ್ದರೆ, ಆ ಬಗ್ಗೆ ನಿಗಾ ವಹಿಸಲಾಗುವುದು. ಕೆ. ರಾಜು, ಕುಂದಾಪುರ 

ಟಾಪ್ ನ್ಯೂಸ್

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Kundapura: ಗುಲ್ವಾಡಿ; ಗಾಯಾಳು ಸಾವು

3

Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್‌ ಇಲ್ಲ!

ರೈಲಿನಲ್ಲಿ ಹೃದಯಾಘಾತ ಕೇರಳ ಮೂಲದ ವ್ಯಕ್ತಿ ಸಾವು

ರೈಲಿನಲ್ಲಿ ಹೃದಯಾಘಾತ ಕೇರಳ ಮೂಲದ ವ್ಯಕ್ತಿ ಸಾವು

Siddapura: ಪಾದಚಾರಿ ಮಹಿಳೆಗೆ ಕಾರು ಢಿಕ್ಕಿ; ಗಂಭೀರ

Siddapura: ಪಾದಚಾರಿ ಮಹಿಳೆಗೆ ಕಾರು ಢಿಕ್ಕಿ; ಗಂಭೀರ

Kundapura: ಪತಿ, ತಾಯಿಯಿಂದ ಕಿರುಕುಳ; ಪತ್ನಿ ದೂರು

Kundapura: ಪತಿ, ತಾಯಿಯಿಂದ ಕಿರುಕುಳ; ಪತ್ನಿ ದೂರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrest-woman

Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.