ಸ್ವತ್ಛತಾ ಕಾರ್ಯದ ಮೂಲಕ ಕಾಶಿಕಲ್ಲು ಕೆರೆಗೆ ಕಾಯಕಲ್ಪ
Team Udayavani, May 21, 2019, 6:10 AM IST
ಸಿದ್ದಾಪುರ: ಗ್ರಾಮ ವಿಕಾಸ ಸಮಿತಿ ಸಿದ್ದಾಪುರ, ಜಲಭಾರತಿ ಕರ್ನಾಟಕ ಮತ್ತು ವಿವಿಧ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಗ್ರಾಮದ ಅಂತರ್ಜಲ ವೃದ್ಧಿಗಾಗಿ ಪುರಾಣ ಪ್ರಸಿದ್ಧ ಸಿದ್ದಾಪುರ ಕಾಶಿಕಲ್ಲು ಕೆರೆಯನ್ನು ಸ್ವತ್ಛಗೊಳಿಸುವುದಕ್ಕಾಗಿ ಆಯೋಜಿಸಿದ ಶ್ರಮದಾನಕ್ಕೆ ಚಾಲನೆ ನೀಡಲಾಯಿತು.
ಮಣಿಪಾಲ ಎಂಐಟಿ ಇದರ ಪ್ರೊ| ಹಾಗೂ ಉಡುಪಿ ಜಿಲ್ಲಾ ಸಂಘ ಚಾಲಕ ಡಾ| ನಾರಾಯಣ ಶೆಣೈ ಅವರು ಸ್ವತ್ಛತೆ ಕುರಿತಂತೆ ಮಾರ್ಗದರ್ಶನ ನೀಡಿದರು.
ಜಲಭಾರತಿ ಕುಂದಾಪುರ ತಾಲೂಕು ಪ್ರಮುಖ್ ಶ್ರೀಕಾಂತ ನಾಯಕ್ ಐರಬೈಲು, ಸದಸ್ಯ ಪ್ರತಾಪ ಕಿಣಿ, ಶ್ರಮದಾನ ಸಮಿತಿಯ ಉಸ್ತುವಾರಿ ಚಂದ್ರಾನಂದ ಶೆಟ್ಟಿ, ತಾ. ಪಂ. ಸದಸ್ಯ ಎಸ್.ಕೆ. ವಾಸುದೇವ ಪೈ, ಉದ್ಯಮಿ. ಡಿ. ಗೋಪಾಲಕೃಷ್ಣ ಕಾಮತ್, ಸಿದ್ದಾಪುರ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಎಸ್. ಪಾಂಡುರಂಗ ಪೈ, ಜಲಭಾರತೀಯ ಉಡುಪಿ ಜಿಲ್ಲಾ ಪ್ರಮುಖ್ ಅಶೋಕ್, ಕರ್ಣಾಟಕ ಬ್ಯಾಂಕ್‌ನ ಪ್ರಬಂಧಕ ಶ್ರೀನಿವಾಸ ಶೆಣೈ, ಗ್ರಾ. ಪಂ. ಸದಸ್ಯ ಕೃಷ್ಣ ಪೂಜಾರಿ ಸೇರಿದಂತೆ ಗ್ರಾಮ ವಿಕಾಸ ಸಮಿತಿ ಸಿದ್ದಾಪುರ, ಜಲಭಾರತಿ ಕರ್ನಾಟಕ ಇದರ ನೂರಾರು ಸದಸ್ಯರು ಹೂಳು ತುಂಬಿದ ಕೆರೆಗೆ ಇಳಿದು ಸ್ವತ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಹಿರಿಯ ವೆಂಕಟರಾಯ ಶೆಣೈ, ಜಿ. ಪಂ. ಸದಸ್ಯ ರೋಹಿತ್‌ಕುಮಾರ ಶೆಟ್ಟಿ, ಸಿದ್ದಾಪುರ ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಶೆಟ್ಟಿ, ಉಪಾಧ್ಯಕ್ಷ ಭರತ್ ಕಾಮತ್, ಸದಸ್ಯರಾದ ಕೆ. ಸತೀಶ ಕುಮಾರ ಶೆಟ್ಟಿ, ಮಂಜುನಾಥ ಕುಲಾಲ ಜನ್ಸಾಲೆ, ಪ್ರದೀಪ ಹೆಗ್ಡೆ, ಶೇಖರ ಕುಲಾಲ, ವೈ. ಸದಾನಂದ ಶೆಟ್ಟಿ, ಗೋಪಾಲ ಶೆಟ್ಟಿ, ಉಷಾ ಕಿಣಿ, ಜಲಜ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿದ್ದಾಪುರ ವಲಯ ಮೇಲ್ವಿಚಾರಕ ಗಿರೀಶ್, ಭಾರತೀಯ ಕಿಸಾನ್ ಸಂಘದ ಸಿದ್ದಾಪುರ ಘಟಕದ ಅಧ್ಯಕ್ಷ ವಿ. ನಾಗಪ್ಪ ಶೆಟ್ಟಿ ಬಾಳೆಬೇರು, ಹಿರಿಯ ನಾಗರಿಕರ ವೇದಿಕೆಯ ಕೋಶಾಧಿಕಾರಿ ಎಚ್. ರಂಗನಾಥ ಉಡುಪ ಮೊದಲಾದವರು ಉಪಸ್ಥಿತರಿದ್ದರು.
ಕಾಶಿಕಲ್ಲು ಕೆರೆ
ಸಿದ್ದಾಪುರವನ್ನು ಒಂದು ಧಾರ್ಮಿಕ ಕೇಂದ್ರವಾಗಿಸುವ ನಿಟ್ಟಿನಲ್ಲಿ ಬಸವಪ್ಪ ನಾಯಕನ ಕೊಡುಗೆ ಅಪಾರವಾದುದು. ಈತನ ಆಡಳಿತಾವಧಿಯಲ್ಲಿ ಸಿದ್ದಾಪುರವು ಗಮನಾರ್ಹವಾಗಿ ಬೆಳವಣಿಗೆ ಕಂಡಿದೆ. ಇವರ ಆಡಳಿತದಲ್ಲಿ ನಿರ್ಮಿತವಾದ ಸಿದ್ದಾಪುರ ಕೆಳಪೇಟೆಯಲ್ಲಿ ಕಾಶಿಕಲ್‌ಕೆರೆ, ಮುಸುರೆ ಕೆರೆ, ಬ್ರಹ್ಮನ ಕೆರೆ, ಛತ್ರದ ಕೆರೆ, ಬೀದಿಕೆರೆ, ನಾಗತೀರ್ಥ ಕೆರೆ ಹೀಗೆ ಮುಂತಾದ ಕೆರೆಗಳು ಇಂದಿಗೂ ಇವೆ. 6 ಕೆರೆಗಳಲ್ಲಿ ಒಂದಾದ ಬೀದಿ ಕೆರೆಯ ಹೂಳನ್ನು ಕಳೆದ ವರ್ಷ ಮೇಲೇತ್ತಲಾಗಿದೆ. ಕಾಶಿಕಲ್ಲು ಕೆರೆಯ ಹೂಳೆತ್ತಲು ಚಾಲನೆ ದೊರಕಿದೆ. ಇನ್ನುಳಿದ 4 ಕೆರೆಗಳ ಹೂಳನ್ನು ಮೇಲಕ್ಕೆ ಎತ್ತಿದಲ್ಲಿ ಸಿದ್ದಾಪುರಕ್ಕೆ ಸಮೃದ್ಧವಾದ ನೀರು ಉಣಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.