“ಲಾಭದ ಮನೋಭಾವದಿಂದಾಗಿ ಮಹಿಳಾ ಶೋಷಣೆ’
ಕುಂದಾಪುರ: ಮಹಿಳಾ ಕಾರ್ಮಿಕರ ಸಮಾವೇಶ
Team Udayavani, Apr 3, 2019, 6:30 AM IST
ಕುಂದಾಪುರ: ಬಡವರಿಗೆ ಮನೆ ಇಲ್ಲ, ನಿವೇಶನ ಇಲ್ಲ. ಮಹಿಳೆಗೆ ಪೌಷ್ಟಿಕ ಆಹಾರದ ಕೊರತೆಯಾಗುತ್ತಿದೆ. ಕನಿಷ್ಠ ವೇತನ ದೊರೆಯುತ್ತಿಲ್ಲ. ಲಾಭದ ಹಿಂದೆ ಬಿದ್ದ ವ್ಯಾವಹಾರಿಕ ರಾಕ್ಷಸೀ ಪದ್ಧತಿಯಿಂದ ಮಹಿಳೆಯರ ಶೋಷಣೆ ಆಗುತ್ತಿದೆ ಎಂದು ಕಟ್ಟಡ ಕಾರ್ಮಿಕರ ಸಂಘಟನೆಯ ಉಪಸಮಿತಿ ರಾಜ್ಯ ಸಂಚಾಲಕಿ ಸಿ. ಕುಮಾರಿ ಹೇಳಿದರು.
ಮಂಗಳವಾರ ಇಲ್ಲಿನ ಹೆಂಚು ಕಾರ್ಮಿಕ ಭವನದಲ್ಲಿ 109ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಮಾನತೆ, ಸಮಾನ ವೇತನ, ಸಮಾನ ಅವಕಾಶಗಳಿಗಾಗಿ ಕಟ್ಟಡ ನಿರ್ಮಾಣ ರಂಗದಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಆಶ್ವಾಸನೆ ಈಡೇರಿಲ್ಲ
ದೇಶದ ಆರ್ಥಿಕತೆಗೆ ಸವಾಲೊಡ್ಡಿ ಮೋಸ ಮಾಡಿ ಓಡಿ ಹೋದವರ ಆಸ್ತಿ ಮಾತ್ರ ಹೆಚ್ಚಾಗಿದೆ. ಬಡವರ, ದುಡಿಯುವ ವರ್ಗದ ಆದಾಯ ಹೆಚ್ಚಾಗಲೇ ಇಲ್ಲ. ಮರಳು ಸಮಸ್ಯೆ, ನೋಟ್‌ಬ್ಯಾನ್‌ನಿಂದಾಗಿ ಉದ್ಯೋಗ ಸಮಸ್ಯೆ ಉಂಟಾಗಿದೆ. ದುಡಿಯುವ ಜನರ ಶ್ರಮಜೀವಿಗಳ ಕೂಲಿಕಾರ್ಮಿಕರ ಆದಾಯದಲ್ಲಿ ಇಳಿಕೆಯಾಗಿದೆ. ನಮಗೆ ಉದ್ಯೋಗ ಭದ್ರತೆ ಬೇಕು. ವೇತನ ಭದ್ರತೆ ಬೇಕು. ಪ್ರಧಾನಿ ಮೋದಿ ಅವರು ಆಶ್ವಾಸನ ಮಾತ್ರ ಕೊಟ್ಟಿದ್ದು ಏನನ್ನೂ ಈಡೇರಿಸಿಲ್ಲ. ಯಾರ ಖಾತೆಗೂ 15 ಲಕ್ಷ ರೂ. ಬಂದಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದರು.
ಕಟ್ಟಡ ಕಾರ್ಮಿಕರ ರಾಜ್ಯ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಕೆ. ಸನ್ನದು ಬಿಡುಗಡೆ ಮಾಡಿದರು. ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ಅಧ್ಯಕ್ಷ ಯು. ದಾಸ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಕೃಷಿ ಕೂಲಿ ಕಾರ್ಮಿಕರ ಸಂಘಟನೆ ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರತ್ನಾ ನಾಡ, ಜನವಾದಿ ಮಹಿಳಾ ಸಂಘಟನೆ ಸಂಚಾಲಕಿ ಶೀಲಾವತಿ ಪಡುಕೋಣೆ, ಬೈಂದೂರು ತಾಲೂಕು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಉಪಾಧ್ಯಕ್ಷ ಗಣೇಶ್ ಮೊಗವೀರ ಉಪಸ್ಥಿತರಿದ್ದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.