ಭತ್ತದ ರೈತರ ಕೈ ಹಿಡಿದ ಯಂತ್ರ ಶ್ರೀ ಯೋಜನೆ; ರಾಜ್ಯದ 30 ಜಿಲ್ಲೆಗಳಲ್ಲಿ ಅನುಷ್ಠಾನ
Team Udayavani, Aug 14, 2020, 6:24 AM IST
ಕುಂದಾಪುರ: ಲಾಭ- ನಷ್ಟದ ತಖೆ¤ಯಿಲ್ಲದೇ ಭತ್ತ ಕೃಷಿ ಮಾಡ ಲಾಗುತ್ತಿತ್ತು. ಕೂಲಿ ಅಲಭ್ಯತೆ, ವೆಚ್ಚ ಅಧಿಕ ಎಂದು ಕೆಲವರು ಕೃಷಿಯಿಂದ ವಿಮುಖರಾಗುತ್ತಿದ್ದರು. ರೈತರನ್ನು ಭತ್ತ ಬೇಸಾಯದತ್ತ ಸೆಳೆಯಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೃಷಿ ಇಲಾಖೆ ಜತೆಗೂಡಿ ಬೆಂಬಲ ನೀಡುತ್ತಿದ್ದು “ಯಂತ್ರಶ್ರೀ ಯೋಜನೆ’ಯನ್ನು ರಾಜ್ಯದ 30 ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದೆ.
2,200 ಎಕರೆ ಗುರಿ
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ರಿಯಾಯಿತಿ ದರದಲ್ಲಿ ಬಾಡಿಗೆ ಆಧಾರಿತ ಕೃಷಿ ಯಂತ್ರಗಳನ್ನು ರೈತರಿಗೆ ದೊರಕಿಸುವ ವ್ಯವಸ್ಥೆ ಮಾಡಿದೆ. ಪ್ರಸಕ್ತ¤ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2,200 ಎಕರೆ ಗುರಿ ಹೊಂದಿ 1,902 ಎಕರೆ ಪ್ರದೇಶದಲ್ಲಿ ರೈತರು ಯಾಂತ್ರಿಕ ಪದ್ಧತಿಯ ಶ್ರೀ ಭತ್ತ ಬೇಸಾಯ ಕ್ರಮವನ್ನು ಅನುಷ್ಠಾನಗೊಳಿಸಿದ್ದಾರೆ.
ಪ್ರೋತ್ಸಾಹಧನ
ಕುಂದಾಪುರ ತಾಲೂಕಿನಲ್ಲಿ 279 ರೈತರು 480 ಎಕರೆಯಲ್ಲಿ ಮುಂಗಾರಿನಲ್ಲಿ ಯಂತ್ರಶ್ರೀ ಅನುಷ್ಠಾನಿಸಿದ್ದು, 50 ಲಕ್ಷ ರೂ. ಪ್ರಗತಿನಿಧಿ ವಿತರಿಸಲಾಗಿದೆ. ಜತೆಗೆ 5 ಲಕ್ಷ ರೂ. ಪ್ರೋತ್ಸಾಹಧನ ಮೀಸಲಿಡಲಾಗಿದೆ. ರೈತರಿಗೆ ನರ್ಸರಿ ತಯಾರಿಗೆ ಅನುಕೂಲವಾಗುವಂತೆ 7,700 ಟ್ರೇ
ಒದಗಿಸಲಾಗಿದೆ ಎಂದು ಯೋಜನೆಯ ತಾ| ಹಿರಿಯ ನಿರ್ದೇಶಕ ಮುರಳೀಧರ ಕೆ. ಶೆಟ್ಟಿ ತಿಳಿಸಿದ್ದಾರೆ.
ಧರ್ಮಸ್ಥಳ ಯೋಜನೆ, ರಾಜ್ಯ ಸರಕಾರದ ಕೃಷಿ ಇಲಾಖೆಯ ‘ಕೃಷಿ ಯಂತ್ರಧಾರಾ’ ಮೂಲಕ ಉಳುಮೆಯಿಂದ ಹಿಡಿದು ಕಟಾವಿನ ತನಕ ಯಂತ್ರಗಳನ್ನು ಬಾಡಿಗೆ ನೀಡಲಾಗುತ್ತಿದೆ ಎನ್ನುತ್ತಾರೆ ಕೃಷಿ ಯಂತ್ರಧಾರೆ ಕೇಂದ್ರದ ಪ್ರಬಂಧಕ ರಾಜೇಶ್. ಅಧಿಕ ಖರ್ಚು ಹಾಗೂ ಕೂಲಿ ಸಮಸ್ಯೆಯಿಂದ ನನ್ನ ಜಾಗವನ್ನು ಹಡಿಲು ಬಿಟ್ಟದ್ದನ್ನು ಈಗ ಕೃಷಿ ಮಾಡಿದ್ದೇನೆ ಎನ್ನುತ್ತಾರೆ ಪ್ರಗತಿಪರ ಕೃಷಿಕ ಸುಜೀತ್ ಕುಮಾರ್ ಶೆಟ್ಟಿ ಅಸೋಡು.
ಜಿಲ್ಲೆಯಲ್ಲಿ 3 ಕೋ.ರೂ. ಪ್ರಗತಿನಿಧಿ , 25 ಲಕ್ಷ ರೂ. ಪ್ರೋತ್ಸಾಹಧನವನ್ನು ಕ್ರಿಯಾ ಯೋಜನೆಯಲ್ಲಿ ನಿಗದಿಗೊಳಿಸಲಾಗಿದೆ. ಯಾಂತ್ರಿಕ ಪದ್ಧತಿ ಅಳವಡಿಸಿಕೊಂಡ ರೈತರಿಗೆ 20,000 ರೂ. ಬೆಳೆ ಸಾಲ, ಎಕರೆಗೆ 500ರಿಂದ 2,500 ರೂ.ವರೆಗೆ ಪ್ರೋತ್ಸಾಹಧನ ನೀಡುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 750 ಎಕರೆಯಲ್ಲಿ ಹಡಿಲು ಭೂಮಿಗೆ ಹಸುರುಸ್ಪರ್ಶ ನೀಡಲಾಗಿದೆ. ಕುಂದಾಪುರ-480 ಎಕರೆ, ಬೈಂದೂರು -650 ಎಕರೆ, ಬ್ರಹ್ಮಾವರ- 250 ಎಕರೆ, ಉಡುಪಿ – 250 ಎಕರೆ, ಕಾರ್ಕಳ-172 ಎಕರೆ, ಮೂಡಬಿದಿರೆ-100 ಎಕರೆಯಲ್ಲಿ ಅನುಷ್ಠಾನಿಸಲಾಗಿದೆ.
ಹಡಿಲು ಭೂಮಿಯಲ್ಲೂ ಕೃಷಿ
ಉಡುಪಿ ಜಿಲ್ಲೆಯಲ್ಲಿ ಈ ವರ್ಷ ಸುಮಾರು 2,200 ಎಕರೆಯಲ್ಲಿ ಯಾಂತ್ರೀಕೃತ ಭತ್ತ ಬೇಸಾಯದ ಗುರಿ ಇಟ್ಟುಕೊಳ್ಳಲಾಗಿದೆ. ಹಲವು ಕಾರಣಗಳಿಂದ ಬೇಸಾಯ ಮಾಡಲಾಗದೇ ಹಡಿಲು ಬಿಟ್ಟ ಸುಮಾರು 750 ಎಕ್ರೆಯಲ್ಲಿ ಭತ್ತ ಬೇಸಾಯ ಮಾಡಿಸಲಾಗಿದೆ.
-ಗಣೇಶ್ ಬಿ., ಹಿರಿಯ ನಿರ್ದೇಶಕರು, ಧ.ಗ್ರಾ. ಯೋಜನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.