ಕೋವಿಡ್ ಸೋಂಕಿತರಿಗೆ ಯುವ ವೈದ್ಯರು ಆಶಾಕಿರಣ
Team Udayavani, May 21, 2021, 5:40 AM IST
ಕುಂದಾಪುರ: ಕೋವಿಡ್ ಕಾಲಘಟ್ಟದಲ್ಲಿ ಕೋವಿಡ್ ಸೋಂಕಿತರನ್ನು ನಾವು ಆರೈಕೆ ಮಾಡುತ್ತೇವೆ ಎನ್ನುವ ಸಮರ್ಪಣ ಮನೋಭಾವದ ಸೇವೆಯನ್ನು ಮಾಡುತ್ತಿರುವ ಯುವ ವೈದ್ಯರ ತಂಡವೊಂದು ಇಲ್ಲಿನ ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಇದೆ.
ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ :
ಚಿಕಿತ್ಸೆಗಾಗಿ ವೈದ್ಯರ ಕೊರತೆ ಕಂಡಾಗ ಸರಕಾರ ತಾತ್ಕಾಲಿಕ ನೆಲೆಯಲ್ಲಿ ಸೇವೆ ಸಲ್ಲಿಸಲು ಅರ್ಹ ವೈದ್ಯಕೀಯ ಪದವೀಧರರಿಂದ ಅರ್ಜಿ ಆಹ್ವಾನಿಸಿತ್ತು. ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಬೇಕು ಎನ್ನುವ ಕಾರಣಕ್ಕಾಗಿ ಅರ್ಜಿ ಸಲ್ಲಿಸಲು ದೊಡ್ಡ ಮಟ್ಟದ ಉತ್ಸಾಹಗಳಿರಲಿಲ್ಲ. ಈ ಸಂದರ್ಭದಲ್ಲಿಯೇ ಸೇವೆಗೆ ನಾವು ಸಿದ್ಧ ಎಂದು ಸೇವೆಗೆ ಟೊಂಕ ಕಟ್ಟಿ ನಿಂತವರು ಡಾ| ಆಶಿತ್, ಡಾ| ರಜತ್, ಡಾ| ರಚನಾ ಹಾಗೂ ಡಾ| ನಿವೇದಿತಾ ಎನ್ನುವ ನಾಲ್ವರು ಯುವ ವೈದ್ಯರು.
ಈ ವೈದ್ಯರು, ಪ್ರತಿಯೊಬ್ಬ ರೋಗಿಗಳ ಬಳಿಗೆ ಹೋಗಿ ಅವರ ಕುಶಲೋಪರಿ ವಿಚಾರಿಸುವ ಪರಿಯನ್ನು ಮೆಚ್ಚಲೇಬೇಕು. ಕುಂದಾಪ್ರ ಭಾಷೆಯಲ್ಲೇ ಸೋಂಕಿತರೊಂದಿಗೆ ಸಂವಹನ ನಡೆಸಿ ಅವರಲ್ಲಿ ಆತ್ಮವಿಶ್ವಾಸ ತುಂಬಿಸುತ್ತಿದ್ದಾರೆ.
ಸಹೋದರರಾದ ಡಾ| ಆಶಿತ್ ಹಾಗೂ ಡಾ| ರಜತ್ ಅವರ ತಂದೆ ಬಡಾಬೈಲ್ ರತ್ನಾಕರ ಶೆಟ್ಟಿ ಅವರು ಮುಂಬಯಿಯಲ್ಲಿ ಉದ್ಯಮಿ. ಕೆಲವು ತಿಂಗಳ ಹಿಂದಷ್ಟೇ ನಿಧನ ಹೊಂದಿದ್ದ,ರಚನಾ ಅವರ ತಂದೆ ಮರಾಠ ಸುರೇಶ್ ಶೆಟ್ಟಿ ಅವರ ತಂದೆಯೂ ಮುಂಬಯಿಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದರು. ನಿವೇದಿತಾ ಅವರು ಕುಂದಾಪುರದ ಹವಲ್ದಾರ್ ಕುಟುಂಬದವರು.
ಡಾ| ರಚನಾ ಅವರನ್ನು ಹೊರತುಪಡಿಸಿ ಉಳಿದ ಮೂವರು ಈ ಮೊದಲೇ ಕೊರೊನಾ ಸೋಂಕಿತರಿಗಾಗಿ ಸೇವೆ ಆರಂಭಿಸಿದ್ದರು. ಲಾಕ್‌ಡೌನ್ ಕಾರಣಕ್ಕಾಗಿ ಮುಂಬಯಿಯಿಂದ ಊರಿಗೆ ಬಂದಿದ್ದ ರಚನಾ ಅವರನ್ನು ಡಾ| ಆಶಿತ್ ಹಾಗೂ ಡಾ| ರಜತ್ ಅವರ ಸೇವಾ ಕಾರ್ಯ ಕುಂದಾಪುರದ ಕೋವಿಡ್ ಆಸ್ಪತ್ರೆ ಬಾಗಿಲೊಳಗೆ ಕರೆತಂದಿದೆ. ವೈದ್ಯಕೀಯ ಪದವಿ ಪಡೆದಿರುವುದು ಜನ ಸೇವೆಗಾಗಿ ಎನ್ನುವ ದೃಢಸಂಕಲ್ಪವನ್ನು ಹೊಂದಿರುವ ನಾಲ್ವರಲ್ಲಿಯೂ ತಾವು ಸಲ್ಲಿಸುತ್ತಿರುವ ಸೇವೆಯ ಬಗ್ಗೆ ಸಂಪೂರ್ಣ ತೃಪ್ತಿ ಇದೆ.
ಹಿರಿಯ ವೈದ್ಯರಾದ ಡಾ| ನಾಗೇಶ್, ಡಾ| ವಿಜಯಶಂಕರ್, ಡಾ| ಚಂದ್ರ ಮರಕಾಲ ಅವರು ವೈದ್ಯಕೀಯ ಮಾರ್ಗದರ್ಶನ ನೀಡುತ್ತಿದ್ದಾರೆ.
ತಂದೆಯೇ ಪ್ರೇರಣೆ : ಸಮಾಜಮಖೀ ಕಾರ್ಯದಲ್ಲಿ ಮುಂಚೂಣಿಯಲ್ಲಿ ಇದ್ದ ತಂದೆಯ ಸೇವಾ ಕಾರ್ಯಗಳೇ ನನಗೆ ಪ್ರೇರಣೆ. ಕೊರೊನಾ ಎನ್ನುವ ಆತಂಕದ ನಡುವೆಯೂ, ಅಮ್ಮ ಹಾಗೂ ಮನೆಯವರ ಪ್ರೋತ್ಸಾಹ ಉತ್ಸಾಹವನ್ನು ಹೆಚ್ಚಿಸುತ್ತಿದೆ ಎಂದು ಡಾ| ರಚನಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.