ಶ್ರಮದಾನದಡಿ ಮಳೆಕೊಯ್ಲು ಅಳವಡಿಸಿ ಮಾದರಿಯಾದ ಸಿಎಸ್‌ಐ ಚರ್ಚ್
ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು
Team Udayavani, Aug 10, 2019, 12:45 PM IST
ಕಮಲಾಕ್ಷ ಶೆಟ್ಟಿ ಅವರ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಕೆ ಮಾಡಲಾಗಿದೆ.
ಮಹಾನಗರ: ‘ಉದಯವಾಣಿ’ಯ ‘ಮನೆಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಣೆಗೊಂಡ ಇನ್ನಷ್ಟು ಮಂದಿ ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ. ಮನೆ, ಸಂಘ ಸಂಸ್ಥೆಗಳು ಮಾತ್ರವಲ್ಲದೆ, ಧಾರ್ಮಿಕ ಕೇಂದ್ರಗಳಲ್ಲಿಯೂ ಮಳೆಕೊಯ್ಲು ಮೂಲಕ ನೀರುಳಿತಾಯಕ್ಕೆ ಧನಾತ್ಮಕ ಹೆಜ್ಜೆ ಇಡುತ್ತಿರುವುದು ಜೀವಜಲದ ಉಳಿತಾಯಕ್ಕೆ ಹೊಸ ಮುನ್ನುಡಿಯಾಗಿದೆ.
ಎಂಆರ್‌ಪಿಎಲ್ ಉದ್ಯೋಗಿ ಅಶೋಕ್‌ಕುಮಾರ್ ಹೆಗ್ಡೆ ಅವರು ಕಾರ್ಕಳ ಕಡ್ತಲ ಗ್ರಾಮದಲ್ಲಿರುವ ತಮ್ಮ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ.
ಛಾವಣಿ ನೀರು ಬಾವಿಗೆ
ಮೂಡುಬಿದಿರೆಯ ಬಡಗ ಮಿಜಾರ್ ಮರಕಡ ಕ್ರಾಸ್ ನಿವಾಸಿ ಕಮಲಾಕ್ಷ ಶೆಟ್ಟಿ ಅವರ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಕೆ ಮಾಡಲಾಗಿದೆ.
ಅಂದಾಜು 12 ಸಾವಿರ ರೂ. ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಛಾವಣಿ ನೀರನ್ನು ಪೈಪ್ ಮುಖಾಂತರ ಟ್ಯಾಂಕ್‌ಗೆಬಿಟ್ಟು ಶುದ್ಧೀಕೃತ ನೀರನ್ನು ಬಾವಿಗೆ ಬೀಳುವಂತೆ ನೋಡಿಕೊಳ್ಳಲಾಗಿದೆ. ಕಮಲಾಕ್ಷ ಅವರಿಂದ ಪ್ರೇರಣೆಗೊಂಡು ಪಕ್ಕದ ಮನೆಯವರೂ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ.
‘ಉದಯವಾಣಿ’ ಮಳೆಕೊಯ್ಲು ಬಗ್ಗೆ ಪ್ರಕಟಿಸುತ್ತಿರುವ ಮಾಹಿತಿಯುಕ್ತ ಲೇಖನಗಳಿಂದ ಪ್ರೇರಿತನಾಗಿ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದೇನೆ. ಭವಿಷ್ಯದಲ್ಲಿ ನೀರಿನ ಸಮಸ್ಯೆ ಉಂಟಾಗದು ಎಂಬ ಭರವಸೆ ಇದೆ ಎನ್ನುತ್ತಾರೆ ಕಮಲಾಕ್ಷ ಶೆಟ್ಟಿ.
ಸಿಎಸ್‌ಐ ಚರ್ಚ್‌ನಲ್ಲಿ ಜಲ ಸಂರಕ್ಷಣೆ
ಈ ಬೇಸಗೆಯಲ್ಲಿ ಉಂಟಾದ ನೀರಿನ ಬವಣೆ ಮುಂದಿನ ದಿನಗಳಲ್ಲಿ ಆಗದಿರಲಿ ಎಂಬ ಸದಾಶಯದೊಂದಿಗೆ ಬೊಕ್ಕಪಟ್ಣದ ಸಿಎಸ್‌ಐ ವಿಶ್ರಾಂತಿ ದೇವಾಲಯದ ಸದಸ್ಯರು ದೇವಾಲಯದ ಆವರಣದಲ್ಲಿರುವ ಬಾವಿಗೆ ಮಳೆಕೊಯ್ಲು ಅಳವಡಿಸಿದ್ದಾರೆ. ಸ್ಯಾಮುವೆಲ್ ಜಾನ್ ಲೀ ಕರ್ಕಡ, ಜೋಶಿ ಜನಾಸ್, ಜೋಯಲ್ ಕರ್ಕಡ, ಸಂದೀಪ್ ಕೈರನ್ನ ಅವರು ಶ್ರಮದಾನದ ಮೂಲಕ ಒಂದು ವಾರದಲ್ಲಿ ಮಳೆಕೊಯ್ಲು ಅಳವಡಿಕೆ ಮಾಡಿದ್ದಾರೆ. ಸಭಾ ಪಾಲಕರಾದ ರೆ| ವಿಲಿಯಂ ಕುಂದರ್, ಗೊಡ್ವಿನ್ ಕಾರ್ಯಪ್ಪ ಅವರ ಪ್ರೋತ್ಸಾಹ ಮತ್ತು ಉತ್ಸಾಹಿ ಕುಟುಂಬಗಳ ಧನಸಹಾಯ ನೀಡಿರುವುದರಿಂದ ಇದು ಸಾಧ್ಯವಾಗಿದೆ. ‘ಉದಯವಾಣಿ ಮಳೆಕೊಯ್ಲು ಅಭಿಯಾನವೇ ನಮಗೆ ಪ್ರೇರಣೆಯಾಯಿತು’ ಎಂದು ಸಿಎಸ್‌ಐ ವಿಶ್ರಾಂತಿ ಸಭೆಯ ಸದಸ್ಯರು ತಿಳಿಸಿದ್ದಾರೆ.

ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.