ಕಂಬಳ ಗದ್ದೆಯಲ್ಲಿ ಭತ್ತದ ಕೊಯ್ಲು ಸಂಭ್ರಮ
ಯುವವಾಹಿನಿ ಮಾಣಿ ಘಟಕದ ವಿನೂತನ ಕಾರ್ಯ
Team Udayavani, May 1, 2019, 11:44 AM IST
ಅನಂತಾಡಿ ಗ್ರಾಮದ ಬಾಕಿಲಗುತ್ತು ಮನೆತನದ ಕಂಬಳ ಗದ್ದೆಯಲ್ಲಿ ಯುವವಾಹಿನಿ ಮಾಣಿ ಘಟಕದವರು ರವಿವಾರ ಗದ್ದೆಯಲ್ಲಿ ಸುಗ್ಗಿಯ ಸಾಗುವಳಿಯ ವಿನೂತನ ಚಟುವಟಿಕೆ ಹಮ್ಮಿಕೊಂಡಿದ್ದರು.
ಮಾಣಿ : ಅನಂತಾಡಿ ಗ್ರಾಮದ ಬಾಕಿಲಗುತ್ತು ಮನೆತನದ ಕಂಬಳ ಗದ್ದೆಯಲ್ಲಿ ರವಿವಾರ ಯುವಕರ ಕಲರವ. ಗದ್ದೆಯಲ್ಲಿ ಸುಗ್ಗಿಯ ಸಾಗುವಳಿ ಬಹಳ ಉತ್ಸಾಹದಿಂದ ನಡೆಯಿತು.
ಯುವವಾಹಿನಿ ಮಾಣಿ ಘಟಕ ಈ ವಿನೂತನ ಚಟುವಟಿಕೆ ಹಮ್ಮಿಕೊಂಡಿತ್ತು.
ಕಳೆದ ವರ್ಷ ಡಿ. 23ರಂದು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಹಕಾರದಲ್ಲಿ ಯುವವಾಹಿನಿ ಘಟಕ ಈ ಗದ್ದೆಯಲ್ಲಿ ಕೋಟಿ-ಚೆನ್ನಯ ಕೆಸರುಗದ್ದೆ ಕ್ರೀಡಾಕೂಟ ಹಮ್ಮಿಕೊಂಡಿತ್ತು. ಘಟಕದ ಅಧ್ಯಕ್ಷ ಹರೀಶ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಇದೇ ಕಂಬಳ ಗದ್ದೆಯಲ್ಲಿ ಭತ್ತದ ಕೃಷಿ ಕೈಗೊಳ್ಳುವ ಕುರಿತು ತೀರ್ಮಾನಿಸಿದರು. ಬಾಕಿಲ ಕುಟುಂಬದ ಹಿರಿಯರ ಅನುಮತಿ ಪಡೆದು ಕಂಬಳ ಗದ್ದೆಯಲ್ಲಿ ಸುಗ್ಗಿಯ ಸಾಗುವಳಿ ಉತ್ಸಾಹದಿಂದ ನಡೆಯಿತು.
ಗದ್ದೆಯಲ್ಲಿ ಬಿತ್ತಿದ ಭತ್ತದ ಬೀಜಗಳು ಸಸಿಗಳಾಗಿ, ಹಚ್ಚ ಹಸುರಿನಿಂದ ನಳನಳಿಸಿದವು. ಯುವ ವಾಹಿನಿ ಸದಸ್ಯರ ಕನಸುಗಳಂತೆ ಭತ್ತ ತೆನೆ ಕಟ್ಟಿ, ತೆನೆಗಳು ತೂಗಿ, ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡಿದವು. ಎ 28ರಂದು ಇದರ ಕೊಯ್ಲು ಸಂಭ್ರಮ ನಡೆಯಿತು.
ರವಿವಾರ ಬೆಳಗ್ಗೆ 7ರಿಂದಲೇ ಕೊಯ್ಲು ಕಾರ್ಯ ಆರಂಭವಾಯಿತು. ಸುಮಾರು 45 ಸದಸ್ಯರು ಇದರಲ್ಲಿ ಪಾಲ್ಗೊಂಡರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು ಕತ್ತಿ ಮುಟ್ಟಾಳೆ ಧರಿಸಿ ಕಟಾವು ಮಾಡುವ ಮೂಲಕ ಕೊಯ್ಲು ಕಾರ್ಯಕ್ಕೆ ಚಾಲನೆ ನೀಡಿದರು. ಶಶಿಧರ ಕಿನ್ನಿಮಜಲು, ಬಂಟ್ವಾಳ ಘಟಕದ ಉಪಾಧ್ಯಕ್ಷ ಸತೀಶ್ ಬಾಯಿಲ ಹಾಗೂ ಬಾಕಿಲ ಕುಟುಂಬದ ಜನಾರ್ದನ ಪೂಜಾರಿ, ವಸಂತ ಪೂಜಾರಿ ಜಲ್ಲಿಗುಡ್ಡೆ, ಹರೀಶ್ ಎನ್‌ಎಂಪಿಟಿ ಉಪಸ್ಥಿತರಿದ್ದರು.
ಮಾಣಿ ಘಟಕದ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಬಾಬನಕಟ್ಟೆ, ಕಾರ್ಯದರ್ಶಿ ಸುಜಿತ್ ಅಂಚನ್, ಉಪಾಧ್ಯಕ್ಷರಾದ ರಮೇಶ್ ಮುಜಲ, ಪ್ರಶಾಂತ್ ಪುಂಜಾವು, ಕೋಶಾಧಿಕಾರಿ ಶಿವರಾಜ್ ಇದ್ದರು. ಸಂಚಾಲಕರಾಗಿ ರಾಜೇಶ್ ಪರಾಜೆ ಮತ್ತು ಮಹಾಬಲ ಪೂಜಾರಿ ಬಾಕಿಲ ಅವರನ್ನು ಆಯ್ಕೆ ಮಾಡಲಾಗಿತ್ತು.
ಕೊಯ್ಲಿನ ಅನಂತರ ದೊರೆತ ಭತ್ತವನ್ನು ಬಡವರಿಗೆ ದಾನ ಮಾಡಲು, ಉಳಿದ ಭತ್ತವನ್ನು ಬಾಕಿಲ ಕೋಟಿ ಚೆನ್ನಯ ಗರಡಿ, ಶ್ರೀ ಉಳ್ಳಾಲ್ತಿ ವೈದ್ಯನಾಥ ಮತ್ತು ಸ್ಥಳ ದೈವ ದೇವರುಗಳ ಬ್ರಹ್ಮಕಲಶೋತ್ಸವದ ಆನ್ನದಾನಕ್ಕೆ ಬಳಸಿಕೊಳ್ಳುವ ನಿರ್ಧಾರವನ್ನು ಯುವವಾಹಿನಿ ಮಾಣಿ ಘಟಕ ಕೈಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Onion Price; ಈರುಳ್ಳಿ ಬೆಲೆ ಇಳಿಕೆ: ಹರಾಜು ನಿಲ್ಲಿಸಿ ರೈತರ ಪ್ರತಿಭಟನೆ
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.