2 ಕುಟುಂಬ ಸ್ಥಳಾಂತರ, ರಸ್ತೆ ಸಮುದ್ರ ಪಾಲು
ಚಿತ್ರಾಪುರ, ಉಳ್ಳಾಲ, ಸೋಮೇಶ್ವರ ಉಚ್ಚಿಲ, ಪಡುಬಿದ್ರಿ, ಎರ್ಮಾಳು ಪರಿಸರದಲ್ಲಿ ಕಡಲ್ಕೊರೆತ ತೀವ್ರ
Team Udayavani, Aug 5, 2019, 1:19 PM IST
ಉಳ್ಳಾಲ: ಬಟ್ಟಪ್ಪಾಡಿ ಬಳಿಯ ರಸ್ತೆ ಸಮುದ್ರಪಾಲಾಗುವ ಭೀತಿ ಎದುರಿಸುತ್ತಿದೆ.
ಸುರತ್ಕಲ್ : ಚಿತ್ರಾಪುರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಎರಡು ಕುಟುಂಬಗಳನ್ನು ರವಿವಾರ ಸ್ಥಳಾಂತಗೊಳಿಸಿ ಸಮೀಪದ ಭಜನ ಮಂದಿರದಲ್ಲಿ ತಾತ್ಕಾಲಿಕ ನೆಲೆ ಕಲ್ಪಿಸಲಾಗಿದೆ.
ಶಾಸಕ ಡಾ| ವೈ. ಭರತ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಮನೆಗಳನ್ನು ಉಳಿಸಲು ಮರಳು ಚೀಲ ಅಳವಡಿಕೆ ಸಹಿತ ಸಾಧ್ಯವಾದ ಪ್ರಯತ್ನ ನಡೆಸಲಾಗುವುದು ಎಂದರು. ಚಿತ್ರಾಪುರ ಬಳಿ ರಸ್ತೆ ಭಾಗಶಃ ನೀರು ಪಾಲಾಗಿದ್ದು ಶಾಲೆಯ ಆಟದ ಮೈದಾನವನ್ನು ಉಳಿಸಿಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ ನಾಡಿ, ಸುಮಾರು 350 ಕೋಟಿ ರೂ. ವೆಚ್ಚದಲ್ಲಿ ಉಳಿದ ಭಾಗದಲ್ಲಿ ಕಲ್ಲು ಹಾಕುವ ಯೋಜನೆಯ ಪ್ರಸ್ತಾವನೆಯಿದೆ. ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಈ ಬಗ್ಗೆ ಹಣ ಬಿಡುಗಡೆಗೆ ಒತ್ತಾಯಿಸ ಲಾಗುವುದು ಎಂದರು.
ಮಾಜಿ ಮೇಯರ್ ಗಣೇಶ ಹೊಸಬೆಟ್ಟು, ರಘುವೀರ ಪಣಂಬೂರು, ಕಂದಾಯ ಅಧಿಕಾರಿ ನವೀನ ಉಪಸ್ಥಿತರಿದ್ದರು. ಚಿತ್ರಾಪುರ ಬಳಿ ಮನೆ, ಶೆಡ್ ಕುಸಿಯದಂತೆ ರವಿವಾರ ಮರಳು ಚೀಲ ಹಾಕುವ ತುರ್ತು ಕಾರ್ಯ ನಡೆಯಿತು. ಮಲ್ಲಮಾರ್, ಬೈಕಂಪಾಡಿ ಬಳಿಯೂ ಸಮುದ್ರದಕೊರೆತ ಮುಂದುವರಿದ್ದು ಹಲವು ವರ್ಷಗಳ ಬಳಿಕ ಸಮುದ್ರಭಾಗ ವಿಸ್ತಾರಗೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.