Tomato Price Down; ಕರಾವಳಿಯಲ್ಲಿ 60-70 ರೂ.ಗೆ ಮಾರಾಟ
Team Udayavani, Aug 12, 2023, 2:00 PM IST
ಮಂಗಳೂರು/ಉಡುಪಿ: ಟೊಮೇಟೊ ದರ ರಾಜಧಾನಿಯ ಬಳಿಕ ಕರಾವಳಿಯಲ್ಲಿಯೂ ಇಳಿಕೆ ಕಾಣಲಾರಂಭಿಸಿದೆ. ಮಂಗಳೂರು ಮತ್ತು ಉಡುಪಿಯಲ್ಲಿ ಶುಕ್ರವಾರ ಕೆ.ಜಿ.ಗೆ 60ರಿಂದ 70 ರೂ. ದರದಲ್ಲಿ ಮಾರಾಟವಾಗುತ್ತಿತ್ತು.
ಕಳೆದ ವಾರ ಕೆಲವೆಡೆ 200 ರೂ.ಗಳವರೆಗೂ ತಲುಪಿದ್ದ ದರ ಸೋಮವಾರದಿಂದ ಇಳಿಕೆಯ ಹಾದಿಯಲ್ಲಿತ್ತು. ಮಂಗಳವಾರ 90-100 ರೂ.ಗಳಿಗೆ ಲಭ್ಯವಾಗಿದ್ದರೆ, ಗುರುವಾರ 80 ರೂ.ಗೆ ಇಳಿದಿತ್ತು. ಇದೀಗ ಮತ್ತಷ್ಟು ಇಳಿಕೆಯಾಗಿದೆ.
ಮಳೆ ಕಡಿಮೆಯಾದ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಟೊಮೇಟೊ ಬೆಳೆ ಮಾರುಕಟ್ಟೆಗೆ ಆವಕವಾಗುತ್ತಿದ್ದು, ಇದರಿಂದ ದಿನದಿಂದ ದಿನಕ್ಕೆ ದರ ಇಳಿಕೆಯಾಗುತ್ತಿದೆ. ಫಸಲು ಕೂಡ ಇರುವುದರಿಂದ ದರ ಇನ್ನೂ ಇಳಿಕೆ ಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಮಾಲ್ಗಳಲ್ಲಿ 80ರಿಂದ 90 ರೂ. ಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.