![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Apr 13, 2020, 6:15 AM IST
ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತು, ಸೇವೆ ಒದಗಿಸಲು ನಾನಾ ಕಸರತ್ತು ನಡೆಸುತ್ತಿರುವ ಸರಕಾರ ಸ್ವತಃ ಆರಂಭಿಸಿದ್ದ “ಜನಸೇವಕ’ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಲು ಇದು ಸಕಾಲ!
ಲಾಕ್‌ಡೌನ್ ಪರಿಣಾಮಕಾರಿಯಾಗಿ ಪಾಲನೆಯಾಗದ ಕೆಲವೆಡೆ ಸೀಲ್‌ಡೌನ್ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಯಾಗಿದೆ. ಅಲ್ಲಿ ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ಒದಗಿಸ ಲಾಗುತ್ತಿದೆ. ಇ-ಕಾಮರ್ಸ್ ಸಂಸ್ಥೆಗಳ ಸಹ ಯೋಗದಲ್ಲಿ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿ ಸುವ ಪ್ರಯತ್ನ ಪ್ರಾಯೋಗಿಕವಾಗಿ ಆರಂಭವಾಗಿದೆ. ಈ ಹೊತ್ತಿನಲ್ಲಿ ಸದ್ಯ ಸ್ಥಗಿತಗೊಂಡಿರುವ “ಜನಸೇವಕ’ ಯೋಜನೆಗೆ ಒತ್ತು ನೀಡಿದರೆ ಜನರಿಗೆ ನೇರವಾಗಿ ಸೌಲಭ್ಯ ಕಲ್ಪಿಸುವುದರ ಜತೆಗೆ ವಿಶ್ವಾಸಾರ್ಹತೆ ಕಾಯ್ದುಕೊಳ್ಳಲು ಸಹಕಾರಿಯಲ್ಲವೇ ಎಂಬ ಚರ್ಚೆ ಆರಂಭವಾಗಿದೆ.
ರಾಜ್ಯಾದ್ಯಂತ “ಜನ ಸೇವಕ’ ಯೋಜನೆ ವಿಸ್ತರಿಸಿ ಜಾರಿಗೊಳಿಸಿದರೆ ಎಲ್ಲರಿಗೂ ಅಗತ್ಯ ಸೇವೆ ಪಡೆ ಯಲು ಅನುಕೂಲಕರ. ಲಾಕ್‌ಡೌನ್ ಅವಧಿಯಲ್ಲಿ ವಿಶ್ವಾಸಾರ್ಹ ಸೇವೆ ಒದಗಿಸಿದರೆ ಮುಂದೆ ಸಾಮಾನ್ಯ ಸಂದರ್ಭದಲ್ಲೂ ಈ ಸೇವೆ ಪಡೆಯಲು ಉತ್ಸಾಹ ತೋರ ಬಹುದು. ಜತೆಗೆ ತುರ್ತು ಸಂದರ್ಭಗಳಲ್ಲಿ ಖಾಸಗಿ ಅಥವಾ ಇತರ ಸಂಸ್ಥೆಗಳ ನೆರವಿಲ್ಲದೆ ಸರಕಾರವೇ ಸ್ವತಂತ್ರವಾಗಿ ಜನರಿಗೆ ಅಗತ್ಯ ಸೇವೆ, ಸೌಲಭ್ಯ ಒದಗಿಸಲು ಇದು ಉಪಯುಕ್ತವಾಗ ಬಹುದು.
“ಜನಸೇವಕ’ ಸದ್ಯ ಸ್ಥಗಿತ
“ಜನಸೇವಕ’ ಯೋಜನೆಯನ್ನು ಪ್ರಾಯೋ ಗಿಕವಾಗಿ ಬೆಂಗಳೂರಿನ ರಾಜಾಜಿನಗರ, ದಾಸರ ಹಳ್ಳಿ, ಬೊಮ್ಮನಹಳ್ಳಿ ಮತ್ತು ಮಹದೇವ ಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೊಳಿಸ ಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ನಾಲ್ಕೂ ಕ್ಷೇತ್ರಗಳಲ್ಲಿ ಒಟ್ಟು 33 ಮಂದಿ ಜನಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆ ಯಲ್ಲಿ ಯೋಜನೆ ಸದ್ಯ ಸ್ಥಗಿತಗೊಂಡಿದೆ.
ತುರ್ತು ಸಂದರ್ಭದ ಸೇವೆ ಅಗತ್ಯ
ತುರ್ತು ಸಂದರ್ಭ ದಲ್ಲಿ ಜನರಿಗೆ ಅಗತ್ಯಸೇವೆ ಒದಗಿಸಲು “ಜನಸೇವಕ’ ಯೋಜನೆ ಬಳಕೆಗೆ ಅವಕಾಶವಿದೆ. ಇದರಿಂದ ದುಬಾರಿ ಹಣ ವಸೂಲಿ, ಗುಣಮಟ್ಟ, ಪ್ರಮಾಣದಲ್ಲಿ ವ್ಯತ್ಯಾಸ, ನಿರ್ದಿಷ್ಟ ವಸ್ತುವಿಗೆ ಬದಲಾಗಿ ಬೇರೆ ವಸ್ತು, ಔಷಧ ಪೂರೈಕೆಯಂತಹ ಸಮಸ್ಯೆಗಳ ನಿವಾರಣೆಗೂ ಅನುಕೂಲವಿದೆ. ರಾಜ್ಯದ ಪ್ರಮುಖ ನಗರ, ಪಟ್ಟಣ ಪ್ರದೇಶಗಳಲ್ಲೂ ವಿಸ್ತರಿಸಲು ಅವಕಾಶ ಇದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಸೇವೆ ಬಳಕೆಗೆ ಚರ್ಚೆ
ಲಾಕ್‌ಡೌನ್ ಅವಧಿಯಲ್ಲಿ “ಜನಸೇವಕ’ ಸೇವೆ ಯನ್ನು ಬೆಂಗಳೂರು ಮಾತ್ರವಲ್ಲದೆ ರಾಜ್ಯಾ ದ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅವಕಾಶವಿದೆ. ಈ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ. ಸರಕಾರದ ಮಟ್ಟದಲ್ಲಿ ಚರ್ಚೆ ನಡೆದು ತೀರ್ಮಾನ ಕೈಗೊಳ್ಳಬೇಕಿದೆ ಎಂದು ಇ- ಆಡಳಿತ ಇಲಾಖೆ ಉನ್ನತ ಮೂಲಗಳು ಹೇಳಿವೆ.
ಲಾಕ್‌ಡೌನ್, ಸೀಲ್‌ಡೌನ್ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು “ಜನಸೇವಕ’ ಯೋಜನೆ ಮೂಲಕ ತಲುಪಿಸಲು ಅವಕಾಶ ಇದೆ. ಈ ಬಗ್ಗೆ ಇಲಾಖೆ ಉನ್ನತ ಅಧಿಕಾರಿ ಗಳಲ್ಲಿ ಮಾತುಕತೆ ನಡೆಸ ಲಾಗಿದ್ದು, ಪರಿಶೀಲಿ ಸುವುದಾಗಿ ಭರವಸೆ ನೀಡಿದ್ದಾರೆ.
– ಬಿ.ಎಚ್. ಅನಿಲ್ ಕುಮಾರ್
ಬಿಬಿಎಂಪಿ ಆಯುಕ್ತ
- ಎಂ. ಕೀರ್ತಿಪ್ರಸಾದ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.